Hamsalekha’s birthday : ಸ್ಯಾಂಡಲ್‌ವುಡ್‌ ನಾದಬ್ರಹ್ಮ ಹಂಸಲೇಖ ಅವರಿಗೆ ಹುಟ್ಟುಹಬ್ಬ ಸಂಭ್ರಮ

ಸ್ಯಾಂಡಲ್‌ವುಡ್‌ ನಾದಬ್ರಹ್ಮ ಎಂದೇ ಪ್ರಖ್ಯಾತಿ ಪಡೆದ ಹಂಸಲೇಖ (Hamsalekha’s birthday) ಅವರಿಗೆ ಇಂದು (ಜೂನ್‌ 23) 72ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಹಂಸಲೇಖ ಅವರು ಉತ್ತಮ ಗೀತರಚನಕಾರರಾಗಿ ಹಾಗೂ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡು, ಕನ್ನಡ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಂಸಲೇಖ ಅವರು ಬರೆದ ಪ್ರತಿಯೊಂದು ಹಾಡುಗಳು ಕೇಳುಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಸದ್ಯ ಹಂಸಲೇಖ ಅವರಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಹಂಸಲೇಖ ಅವರು ಹಲವು ದಶಕಗಳಿಂದ ಸಕ್ರಿಯರಾಗಿರುವ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದು, ಈಗಲೂ ಕೂಡ ಅಷ್ಟೇ ಬ್ಯುಸಿ ಆಗಿದ್ದಾರೆ. ಸದ್ಯ ರಿಯಾಲಿಟಿ ಶೋಗಳಿಗೆ ಜಡ್ಜ್‌ ಆಗಿರುವ ಇವರು ಯುವ ಪ್ರತಿಭೆಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಯುವ ಪ್ರತಿಭೆಗಳನ್ನು ತಿದ್ದುವ ಮೂಲಕ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಈ ವಯಸ್ಸಿನಲ್ಲೀ ಹಂಸಲೇಳ ನಿರಂತರವಾಗಿ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಸಿನಿರಂಗದಲ್ಲಿ ಹಂಸಲೇಖ ಅವರು ಮಾಡಿರುವ ಸಾಧನೆ ಅನೇಕರಿಗೆ ಮಾದರಿ ಆಗಿದ್ದಾರೆ. ಅಷ್ಟೇ ಅಲ್ಲದೇ ಹಂಸಲೇಖ ಅವರು ಸಾಧನೆಗೆ ಹಲವು ಪ್ರಶಸ್ತಿಗಳು ಲಭ್ಯಸಿದೆ. ರಾಷ್ಟ್ರ ಪ್ರಶಸ್ತಿ ಒಂದು ಬಾರಿ, ಫಿಲ್ಮ್‌ ಫೇರ್‌ ಪ್ರಶಸ್ತಿ ಆರು ಬಾರಿ ರಾಜ್ಯ ಪ್ರಶಸ್ತಿ 10 ಬಾರಿ ಪಡೆದಿದ್ದು ಅವರು ಹೆಚ್ಚಿನ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ : Priyanka Thimmesh : ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ ಪ್ರಿಯಾಂಕಾ ತಿಮ್ಮೇಶ್‌

ಇದನ್ನೂ ಓದಿ : Appu Cup Season-2 : ಅಪ್ಪು ಕಪ್ ಸೀಸನ್-2 ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಲೀಗ್ : ಲೋಗೋ ಅನಾವರಣಗೊಳಿಸಿದ ಪ್ರಕಾಶ್ ಪಡುಕೋಣೆ

ಕನ್ನಡ ಸಿನಿರಂಗದ ಬಹುತೇಕ ಸ್ಟಾರ್‌ ನಟರ ಸಿನಿಮಾಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ ಅನ್ನುವುದೇ ವಿಶೇಷ. ಸಾವಿರಾರು ಸೂಪರ್‌ ಹಿಟ್‌ ಸಾಂಗ್ಸ್‌ಗಳನ್ನು ನೀಡಿ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಂಸಲೇಳ ಅವರು ಚೌಕಟ್ಟು ಹಾಕಿಕೊಂಡು ಇದ್ದವರಲ್ಲ, ಹಲವು ಡ್ಯುಯೆಟ್‌ ಸಾಂಗ್‌ ಬರೆದ ಹಂಸಲೇಖ ಅವರೇ ಭಕ್ತಿಪ್ರಧಾನ ಗೀತೆಯನ್ನು ರಚಿಸಿದ್ದಾರೆ. ಪಡ್ಡೆಗಳಿಗೆ ಇಷ್ಟ ಆಗುವಂತಹ ಹಾಡುಗಳ ಜೊತೆಗೆ ಕನ್ನಡ ಮಣ್ಣಿನ ಹಾಡು, ಸ್ಯಾಡ್‌ ಸಾಂಗ್‌ಗಳನ್ನು ಅವರು ರಚಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ ಇವರಿಗೆ ಸರಿಸಾಟಿಯಾಗುವಂತಹ ಮತ್ತೋರ್ವ ವ್ಯಕ್ತಿ ಇಲ್ಲ ಎನ್ನಬಹುದು.

Hamsalekha’s birthday : Happy birthday to Sandalwood NadaBrahma Hamsalekha

Comments are closed.