ಯಾವುದೇ ಪಕ್ಷಿಗೆ ವೈಯಕ್ತಿಕವಾಗಿ ಹಾನಿ ಮಾಡಿಲ್ಲ- ಕಿಶನ್

ನವಿಲುಗರಿ ಬಳಸಿ ಕಿಶನ್ ಮಾಡಿದ್ದ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹಾಗೂ ಟೀಕೆಗೆ ಒಳಗಾಗಿತ್ತು. ಈ ಕುರಿತು ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಿಶನ್, ಹೊಸ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಘಟನೆಗೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.

ನವಿಲುಗರಿ ಬಳಸಿ ಕಿಶನ್ ಮಾಡಿದ್ದ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹಾಗೂ ಟೀಕೆಗೆ ಒಳಗಾಗಿತ್ತು. ಈ ಕುರಿತು ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಿಶನ್, ಹೊಸ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಘಟನೆಗೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.

” ಕೃಷ್ಣ ಜನ್ಮಾಷ್ಟಮಿ ಹಾಗೂ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಿಗೆ ಬಳಸುವಂತೆ, ನಾವು ಕೂಡ ವಿಡಿಯೋ ಕಾನ್ಸೆಪ್ಟ್‌ಗಾಗಿ ಅಂಗಡಿಯೊಂದರಿಂದ ಈ ನವಿಲುಗರಿಗಳನ್ನು ಬಾಡಿಗೆಗೆ ಪಡೆದುಕೊಂಡು ವಿಡಿಯೋ ಮಾಡಿದ್ದೇವೆ . ಯಾವುದೇ ಪಕ್ಷಿಗೆ ವೈಯಕ್ತಿಕವಾಗಿ ಹಾನಿ ಮಾಡಿ ಇದನ್ನು ತಂದಿರಲಿಲ್ಲ” ಎಂದು ಕಿಶನ್ ಅವರು ವಿವರಿಸಿದ್ದಾರೆ.

ಇದನ್ನೂ ಓದಿ : Radhika Pandit : ಸಿನಿಮಾಗಳಿಂದ ದೂರವಿದ್ದರೂ ಕರಗಿಲ್ಲ ಡಿಮ್ಯಾಂಡ್! ಸ್ಯಾಂಡಲ್‌ವುಡ್ ಕ್ವೀನ್ ರಾಧಿಕಾ ಪಂಡಿತ್ ಕ್ರೇಜ್ ಹಿಂದಿರೋ ಸೀಕ್ರೆಟ್ ಏನು?

“ನವಿಲುಗರಿಗಳನ್ನು ಈ ರೀತಿ ಕಮರ್ಷಿಯಲ್ ಆಗಿ ಬಾಡಿಗೆಗೆ ನೀಡುವುದು ಅಥವಾ ಬಳಸುವುದು ಅಪರಾಧ ಎಂಬ ಕಾನೂನಿನ ಅರಿವು ನಮ್ಮ ಇಡೀ ತಂಡಕ್ಕೆ ಇರಲಿಲ್ಲ. ನೋಟಿಸ್ ಬಂದ ತಕ್ಷಣ ಅಧಿಕಾರಿಗಳು ನಮಗೆ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಬಾರದು ಎಂಬ ಜವಾಬ್ದಾರಿಯಿಂದ ನಾವು ತಕ್ಷಣವೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ. ನಮ್ಮ ನಡೆ ಯಾರಿಗಾದರೂ ಬೇಸರ ತಂದಿದ್ದರೆ ನಾನು ನಿಜಕ್ಕೂ ಕ್ಷಮೆ ಕೇಳುತ್ತೇನೆ” ಎಂದು ಅವರು ತಿಳಿಸಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories