ಮಗಳ ಜೊತೆ ವಿಭಿನ್ನ ಪೋಟೋಶೂಟ್….! ನವರಾತ್ರಿಯಲ್ಲಿ ದುರ್ಗೆಯಾಗಿ ಮಿಂಚಿದ ಸ್ಯಾಂಡಲ್ ವುಡ್ ನಟಿ…!

ಸಿಂಪಲ್ಲಾಗ್ ಒಂದ ಲವ್ ಸ್ಟೋರಿ ಚಿತ್ರದ ನಾಯಕಿ ಶ್ವೇತಾ ಶ್ರೀವಾಸ್ತವ್ ತಾಯಿಯಾದಾಗಿನಿಂದಲೂ ಪುಟ್ಟ ಮಗಳ ಜೊತೆ ಒಂದಿಲ್ಲೊಂದು ವಿಡಿಯೋ-ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಇದೀಗ ದಸರಾ ಹಿನ್ನೆಲೆಯಲ್ಲಿ ಮಾತೆ ದುರ್ಗೆಯಂತೆ ವಿಭಿನ್ನವಾಗಿ ಪೋಟೋಶೂಟ್ ಮಾಡಿಸಿಕೊಂಡಿದ್ದು, ಮನಸೆಳೆದಿದ್ದಾರೆ.

ನವರಾತ್ರಿ ಹಿನ್ನೆಲೆಯಲ್ಲಿ  ನಟಿ ಶ್ವೇತಾ ಶ್ರೀವಾಸ್ತವ್, ತಮ್ಮ ಪುಟ್ಟ ಮಗಳು ಅಸ್ಮಿತಾಗೆ ದೇವಿಯಂತೆ ಶೃಂಗಾರ ಮಾಡಿ ಕೈಯಲ್ಲಿ ದೊಡ್ಡದಾದ ಕಮಲದ ಹೂವು ನೀಡಿ ಪೋಟೋ ತೆಗೆಸಿದ್ದಾರೆ. ಅಷ್ಟೇ ಅಲ್ಲ ತಾವು ಕೂಡ ಮಗಳನ್ನು ಕೈಯಲ್ಲಿ ಎತ್ತಿಕೊಂಡು ಜೊತೆಗೆ ಪೋಸು ನೀಡಿದ್ದು, ಈ ಪೋಟೋ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೊಂದು ಪೋಟೋದಲ್ಲಿ ಶ್ವೇತಾ ಶ್ರೀವಾಸ್ತವ್, ದುರ್ಗೆಯಂತೆ ಮೇಕಪ್ ಮಾಡಿಕೊಂಡು, ಒಂದು ಕೈಯಲ್ಲಿ ಎತ್ತಿಕೊಂಡು ಮತ್ತೊಂದ ಕೈಯಲ್ಲಿ ಪುಸ್ತಕ ಹಿಡಿದುಕೊಂಡಿದ್ದಾರೆ. ಈ ಪೋಟೋಗೆ 8 ಕೈಗಳನ್ನು ಎಡಿಟ್ ಮಾಡಲಾಗಿದೆ. ಒಂದೊಂದು ಕೈಯಲ್ಲಿ ಒಂದೊಂದು ವಸ್ತುಗಳನ್ನು ಹಿಡಿದಂತೆ ಚಿತ್ರಿಸಲಾಗಿದೆ.

ಈಪೋಟೋಕ್ಕೆ ಸುಂದರವಾದ ಕ್ಯಾಪ್ಸನ್ ಹಂಚಿಕೊಂಡಿರುವ ಶ್ವೇತಾ, ನಾನು ಒಬ್ಬ ಸಾಮಾನ್ಯ ಮಹಿಳೆ. ಆದರೆ ನನ್ನೊಳಗಿನ ಶಕ್ತಿಯನ್ನು  ಇನ್ನಷ್ಟು ಬಲಪಡಿಸಿಕೊಳ್ಳಲು ನಾನು ಅವಲಂಬಿಸಿರುವ  ಮುಖ್ಯವಾದ ಅಸ್ತ್ರಗಳು ಇವು. ತಾಯಿ ದುರ್ಗೆಯ ಕಥೆಯೇ ನಮಗೆಲ್ಲಾ ಸ್ಪೂರ್ತಿ ಎಂದಿದ್ದಾರೆ.

ಮತ್ತೊಂದು ಪೋಟೋದಲ್ಲಿ ದುರ್ಗೆಯಂತೆ ತ್ರಿಶೂಲ ಹಿಡಿದ ಪುತ್ರಿ ಅಶ್ಮಿತಾಳನ್ನು ಮಡಿಲಲ್ಲಿ  ಕೂರಿಸಿಕೊಂಡು  ಪೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಸೀರೆ, ದೊಡ್ಡದಾದ ಬೊಟ್ಟಿನಲ್ಲಿ ಶ್ವೇತಾ ಹಾಗೂ ಬಿಳಿ ಸೀರೆಯಲ್ಲಿ ಅಸ್ಮಿತಾ ತುಂಬ ಸುಂದರವಾಣಿ ಮೂಡಿಬಂದಿದ್ದಾರೆ.

ಇತ್ತೀಚಿಗಷ್ಟೇ ಶ್ವೇತಾ ಶ್ರೀವಾಸ್ತವ್ ನೇಕಾರರನ್ನು ಬೆಂಬಲಿಸುವ ನಿಟ್ಟಿನಲ್ಲಿ ಇಳಕಲ್ ಸೀರೆ ಉಟ್ಟು ಮಗಳಿಗೂ ಇಳಕಲ್ ಬಟ್ಟೆಯ ಲಂಗ-ದಾವಣಿ ಹಾಕಿಸಿ ಪೋಟೋ ತೆಗೆದು ವೈರಲ್ ಮಾಡಿದ್ದರು. ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶ್ವೇತಾ ಶ್ರೀವಾಸ್ತವ್ ಒಂದಿಲ್ಲೊಂದು ಪೋಟೋಶೂಟ್ ಮೂಲಕ ಗಮನಸೆಳೆಯುತ್ತಲೇ ಇದ್ದಾರೆ.  

Comments are closed.