ಹಾಸ್ಯನಟ ಉಮೇಶ್ ಇನ್ನು ನೆನಪು ಮಾತ್ರ : ಹಿರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರೀಯೆ

kannada actor umesh Died : ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಎಂ.ಎಸ್ ಉಮೇಶ್ ಅವರು ವಿಧಿವಶರಾಗಿದ್ದಾರೆ. ಹಲವು ಸಮಯಗಳಿಂದಲೂ ನಟ ಉಮೇಶ್ ಅವರು ಯಕೃತ್ತಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಯಿಂದಲೇ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರೀಯೆ ನಡೆಯಲಿದೆ.
ಮೂಲತಃ ಮೈಸೂರಿನಲ್ಲಿ ಜನಿಸಿದ ನಟ ಉಮೇಶ್ ಅವರು ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾಗಿದ್ದರು. ನಾಲ್ಕನೇ ವಯಸ್ಸಿನಲ್ಲಿಯೇ ಅವರು ನಾಟಕ ಕಂಪೆನಿಯನ್ನ ಸೇರಿದ್ದರು.
1960ರಲ್ಲಿ ಮಕ್ಕಳ ರಾಜ್ಯ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಉಮೇಶ್ ಅವರು ಎಂಟ್ರಿ ಕೊಟ್ಟಿದ್ದರು. ಅದ್ರಲ್ಲೂ ಕಥಾ ಸಂಗಮ ಸಿನಿಮಾಕ್ಕೆ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಗುರುಶಿಷ್ಯರು, ಹಾಲುಜೇನು, ಅಪೂರ್ವ ಸಂಗಮ, ಜಾಕಿ, ಡೇರ್ ಡೆವಿಲ್ ಮುಸ್ತಫಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದ್ರಲ್ಲೂ ಅಪಾರ್ಥ ಮಾಡ್ಕೊಬೇಡಿ ಅನ್ನೋ ಅವರ ಡೈಲಾಗ್‌ನಿಂದಲೇ ಹೆಚ್ಚು ಜನಪ್ರಿಯರಾಗಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ಉಮೇಶ್ ಅವರ ಅಂತಿಮ ದರ್ಶನವನ್ನು ಚಿತ್ರರಂಗದ ಗಣ್ಯರು ಪಡೆದುಕೊಂಡಿದ್ದಾರೆ.
kannada actor umesh Died at age 80



