Rajani Raghavan Google Me : ಗೂಗಲ್ ಮೀ ಎಂದ ಕನ್ನಡತಿ : ರಂಜನಿ ಸ್ಪೆಶಲ್ ಪೋಟೋ ವೈರಲ್

ನಟನೆಯ ಜೊತೆ ಫ್ಯಾಶನ್ ಲೋಕದಲ್ಲಿ ತೊಡಗಿಸಿಕೊಳ್ಳೋದು ಕಾಮನ್. ಆದರೆ ಈ ನಟಿ ಮಾತ್ರ ನಟನೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಅದು ಮತ್ಯಾರೂ ಅಲ್ಲ ಕನ್ನಡದ ಪುಟ್ಟ ಗೌರಿ ಖ್ಯಾತಿಯ ಬಳಿಕ ಕನ್ನಡತಿಯಾಗಿ ಮಿಂಚುತ್ತಿರುವ ರಂಜನಿ ರಾಘವನ್. ಸಾಕಷ್ಟು ಪೋಟೋಶೂಟ್ ಗಳ ಮೂಲಕ ಮಿಂಚಿದ ರಂಜನಿ ರಾಘವನ್ ಈಗ ಗೂಗಲ್ ಸೀರೆಯಲ್ಲಿ (Rajani Raghavan Google Me ) ಮನಸೊರೆ‌ಗೊಂಡಿದ್ದಾರೆ.

ನಟಿ ರಂಜನಿ ರಾಘವನ್ ಈಗ ಕರುನಾಡಿದ ಹೆಂಗಳೆಯರ ಫೆವರಿಟ್ ನಟಿ. ಸದ್ಯ ಕನ್ನಡತಿಯಾಗಿ ಮಿಂಚ್ತಿರೋ ರಂಜನಿ ರಾಘವನ್ ಇದಕ್ಕೂ ಮೊದಲು ನಾಲ್ಕೈದು ವರ್ಷಗಳ ಪುಟ್ಟ ಗೌರಿಯಾಗಿ ಹೆಣ್ಣುಮಕ್ಕಳ ಮನಸ್ಸು ಗೆದ್ದಿದ್ದರು. ಸದ್ಯ ಕನ್ನಡತಿ ಸೀರಿಯಲ್ ನ ಲೀಡ್ ರೋಲ್ ನಲ್ಲಿ ಮಿಂಚ್ತಿರೋ ರಂಜನಿ ಇನ್ ಸ್ಟಾಗ್ರಾಂ ನಲ್ಲಿ ಸಖತ್ ಬ್ಯುಸಿಯಾಗಿರ್ತಾರೆ ಮಾತ್ರವಲ್ಲ ಸಾಕಷ್ಟು ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇತರ ನಟಿಯರಿಗಿಂತ ಭಿನ್ನವಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡ ರಂಜನಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ.

ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಟೋಶೂಟ್ ಗಳ ಪೋಟೋ ಶೇರ್ ಮಾಡೋ ರಂಜನಿ ಈ ಭಾರಿ ಗೂಗಲ್ ಎಂದು ಬರೆದಿರೋ ಶ್ವೇತ ವರ್ಣದ ಸೀರೆಯುಟ್ಟು ಅಭಿಮಾನಿ ಗಳ ಮನಗೆದ್ದಿದ್ದಾರೆ. ಬೆಳ್ಳನೆಯ ಸೀರೆಗೆ ಗೂಗಲ್ ಎಂದು ಬರೆಯಲಾಗಿದ್ದು ಈ ಸೀರೆ ಉಟ್ಟ ರಂಜನಿ, ಹೆಣ್ಮಕ್ಕಳ‌‌ಮನಸ್ಸು ಅರ್ಥ ಆಗಲ್ಲ ಅನ್ನೋರು ಗೂಗಲ್ ಮೀ ಎಂದು ಕ್ಯಾಪ್ಸನ್ ನೀಡಿದ್ದಾರೆ. ರಂಜನಿ‌ ಹಂಚಿಕೊಂಡಿರೋ ಈ ಸ್ಪೆಶಲ್ ಪೋಟೋವನ್ನು ಸಾವಿರಾರು ಜನರು ಲೈಕ್ ಮಾಡಿದ್ದಾರೆ. ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೇ ಹಿರಿ ತೆರೆಯಲ್ಲೂ ನಟಿ ರಂಜನಿ ಆಕ್ಟಿವ್ ಆಗಿದ್ದು, ಇತ್ತೀಚಿಗಷ್ಟೇ ರಂಜನಿ ನಟನೆಯ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ತೆರೆ ಕಂಡು ಜನ ಮೆಚ್ಚುಗೆ ಗಳಿಸಿದೆ.

ಈ ಹಿಂದೆ ರಂಜನಿ ಹಲವು ಕತೆಗಳನ್ನು ಬರೆದಿದ್ದು ನಾಡಿನ ಹಲವು ಸಾಹಿತಿಗಳು ರಂಜನಿಯ ಬರಹವನ್ನು ಮೆಚ್ಚಿಕೊಂಡಿದ್ದಾರೆ‌. ಮಾತ್ರವಲ್ಲ ರಂಜನಿ ರಾಘವನ್ ಕೆಂಪುಡಬ್ಬಿ ಎಂಬ ಕಥಾಸಂಕಲವನ್ನು ಬಿಡುಗಡೆಗೊಳಿಸಿದ್ದಾರೆ. ಆಗಾಗ ಸಾಹಿತ್ಯ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವ ರಂಜನಿ ಸೋಷಿಯಲ್ ಮೀಡಿಯಾದಲ್ಲ ತಮ್ಮ ಕಾರ್ಯಕ್ರಮಗಳ ಅಪ್ಡೇಟ್ ಮಾಹಿತಿ ನೀಡೋದಿಕ್ಕೆ‌ ಮರೆಯೋದಿಲ್ಲ.

ಇದನ್ನೂ ಓದಿ : Pranitha Subhash : ಭೀಮನ ಅಮಾವಾಸ್ಯೆ ಸ್ಪೆಶಲ್ : ಪತಿಯ ಪಾದ ಪೂಜೆ ಮಾಡಿದ ನಟಿ

ಇದನ್ನೂ ಓದಿ : Gururaja Poojary : ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕುಂದಾಪುರದ ಗುರುರಾಜ್‌ ಪೂಜಾರಿಗೆ ಕಂಚಿನ ಪದಕ

Kannadathi Serial Actress Rajani Raghavan Google Me, special photo viral

Comments are closed.