Madhuri Dixit: ತಾಯ್ತನದ ಸವಾಲುಗಳನ್ನು ಹಂಚಿಕೊಂಡ ನಟಿ ಮಾಧುರಿ ದೀಕ್ಷಿತ್​

Madhuri Dixit : ಬಾಲಿವುಡ್ ಡ್ಯಾನ್ಸಿಂಗ್​ ದೀವಾ ಮಾಧುರಿ ದೀಕ್ಷಿತ್​ ಶೀಘ್ರದಲ್ಲಿಯೇ ಮಧ್ಯಮ ವರ್ಗದ ಎರಡು ಮಕ್ಕಳ ತಾಯಿಯ ಪಾತ್ರದಲ್ಲಿ ಮಜಾ ಮಾ ಸಿನಿಮಾದ ಮೂಲಕ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳಲಿದ್ದಾರೆ. ಇದು ಅಮೆಜಾನ್​ ಪ್ರೈಮ್​ನ ಮೊದಲ ಭಾರತೀಯ ಮೂಲದ ಸಿನಿಮಾವಾಗಿದೆ ಹಾಗೂ ಅಕ್ಟೋಬರ್​ ಆರರಿಂದ ಈ ಸಿನಿಮಾ ಸ್ಟ್ರೀಮ್​ ಆಗಲಿದೆ. ಆನಂದ್​ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಗಜರಾಜ್​ ರಾವ್​​ ಮಾಧುರಿ ದೀಕ್ಷಿತ್​ ಪತಿಯಾಗಿ ನಟಿಸಿದ್ದಾರೆ.


ಮಜಾ ಮಾ ಸಿನಿಮಾದ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಮಾಧುರಿ ದೀಕ್ಷಿತ್​, ನಾನು ಪತ್ನಿ ಹಾಗೂ ತಾಯಿ ಎರಡೂ ಆಗಿದ್ದೇನೆ.ಹೀಗಾಗಿ ನಾನು ಈ ಪಾತ್ರವನ್ನು ನನ್ನ ಜೀವನಕ್ಕೆ ಹೋಲಿಕೆ ಮಾಡಿಕೊಳ್ಳಬಲ್ಲೆ. ನನ್ನ ಹಿರಿಯ ಪುತ್ರ ಕಾಲೇಜಿನಲ್ಲಿ ಓದುತ್ತಿದ್ದಾನೆ ಹಾಗೂ ಮತ್ತೊಬ್ಬ ಇನ್ನೇನು ಕಾಲೇಜು ಮೆಟ್ಟಿಲು ಹತ್ತಲು ಸಿದ್ಧನಾಗುತ್ತಿದ್ದಾನೆ, ಮಕ್ಕಳು ಚಿಕ್ಕವರಾಗಿದ್ದಾಗ ಅವರ ಸಮಸ್ಯೆಗಳು ನಮಗೆ ಚಿಕ್ಕದು ಎನಿಸುತ್ತೆ. ಆದರೆ ಅವರು ಬೆಳೆಯುತ್ತಿದ್ದಂತೆಯೇ ಅವರ ಸಮಸ್ಯೆಗಳೂ ದೊಡ್ಡದಾಗುತ್ತದೆ. ಹೀಗಾಗಿ ಈ ಪಾತ್ರದೊಂದಿಗೆ ನನ್ನನ್ನು ನಾನು ಸಂಪೂರ್ಣವಾಗಿ ಕನೆಕ್ಟ್​ ಮಾಡಿಕೊಳ್ಳಬಲ್ಲೆ ಎಂದಿದ್ದಾರೆ.


ನಿರ್ದೇಶನ ಆನಂದ್​ ತಿವಾರಿ ಸ್ವತಃ ಒಬ್ಬ ಅತ್ಯುತ್ತಮ ನಟ. ಇಂತಹ ವ್ಯಕ್ತಿ ಸಿನಿಮಾ ನಿರ್ದೇಶನ ಮಾಡುವುದನ್ನು ನೋಡುವುದೇ ಒಂದು ಮಜಾ. ಅವರು ಒಂದೊಂದು ಸೀನ್​ನನ್ನು ಅತ್ಯಂತ ಗಮ್ಯವಾಗಿ ವಿವರಿಸುತ್ತಾರೆ ಎಂದು ಹೇಳುವ ಮೂಲಕ ನಟಿ ಮಾಧುರಿ ದೀಕ್ಷಿತ್​​ ನಿರ್ದೇಶಕ ಆನಂದ್​ ತಿವಾರಿಯನ್ನು ಕೊಂಡಾಡಿದ್ದಾರೆ.


ಹಿಂದೂಗಳಿಗೆ ಪ್ರಸ್ತುತ ಸಾಲು ಸಾಲು ಹಬ್ಬಗಳು ಎದುರಾಗುತ್ತಿರುವ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ನಮ್ಮ ಅಸಂಖ್ಯಾತ ಹಬ್ಬಗಳನ್ನು ಹೊಂದಿರುವ ದೇಶ. ಸ್ನೇಹಿತರು, ಕುಟುಂಬಸ್ಥರು ಹೀಗೆ ಪ್ರತಿಯೊಬ್ಬರು ಒಟ್ಟಿಗೆ ಸೇರಿದಾಗಿ ಒಂದೊಳ್ಳೆ ಸಮಯವನ್ನು ಕಳೆಯಬೇಕು ಎಂದು ಎಲ್ಲರೂ ಬಯಸುತ್ತಾರೆ. ಒಳ್ಳೆಯ ಸಿಹಿ ತಿಂಡಿಗಳು, ನಗು- ಸಂತೋಷ ಹೀಗೆ ಎಲ್ಲವೂ ಹಬ್ಬ ಹರಿದಿನಗಳಲ್ಲಿ ಪರಸ್ಪರ ವಿನಿಮಯವಾಗುತ್ತದೆ ಎಂದು ಹೇಳಿದ್ರು.

ಇದನ್ನು ಓದಿ : Hardik Pandya Natasha Stankovic : ಪತ್ನಿಯ ಫ್ಯಾಮಿಲಿಯನ್ನು ಮೊದಲ ಬಾರಿ ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ.. ಅಳಿಯನನ್ನು ನೋಡಿ ಅತ್ತೆ-ಮಾವ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : Navratri : ನವರಾತ್ರಿ : ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ

Madhuri Dixit-Nene shares, ‘Nowadays, I have to take care of my airport look!’

Comments are closed.