ಟಿವಿಯಲ್ಲಿ ಮಹಾವತಾರ ನರಸಿಂಹ: ಈ ಚಾನಲ್‌ನಲ್ಲಿ ಈ ಸಮಯಕ್ಕೆ ಇಂದೇ ಪ್ರಸಾರ!

Mahavatar Narasimha in TV:: ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದ ಅನಿಮೇಟೆಡ್ ಪೌರಾಣಿಕ ಚಿತ್ರ ‘ಮಹಾವತಾರ ನರಸಿಂಹ’ (Mahavatar Narasimha) ಈಗ ಕಿರುತೆರೆಯ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ಮಿಸ್ ಮಾಡಿಕೊಂಡವರಿಗೆ ಈ ಶನಿವಾರ (ಜನವರಿ 24) ದೂರದರ್ಶನದಲ್ಲಿ ಈ ಅದ್ಭುತವನ್ನು ನೋಡುವ ಅವಕಾಶ ಸಿಕ್ಕಿದೆ.

ಟಿವಿಯಲ್ಲಿ ಯಾವಾಗ ಪ್ರಸಾರ?

ಸೋನಿ ಮ್ಯಾಕ್ಸ್ (Sony MAX) ವಾಹಿನಿಯಲ್ಲಿ ಜನವರಿ 24 ರಂದು ರಾತ್ರಿ 8 ಗಂಟೆಗೆ ಈ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ನಡೆಯಲಿದೆ. ಈ ಕುರಿತು ಸೋನಿ ಟಿವಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ, “ನಂಬಿಕೆಯ ಪರೀಕ್ಷೆಯಾದಾಗ ಮಹಾರಕ್ಷಕನ ಘರ್ಜನೆ ಮೊಳಗಲಿದೆ” ಎಂದು ಪ್ರಕಟಿಸಿದೆ.

ಚಿತ್ರದ ಕಥಾಹಂದರ:

ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವು ಅಪ್ಪಟ ಪೌರಾಣಿಕ ಕಥೆಯನ್ನು ಹೊಂದಿದೆ. ತನ್ನನ್ನೇ ದೇವರು ಎಂದು ಘೋಷಿಸಿಕೊಳ್ಳುವ ಅಸುರ ಹಿರಣ್ಯಕಶ್ಯಪ ಮತ್ತು ವಿಷ್ಣುವಿನ ಪರಮ ಭಕ್ತನಾದ ಅವನ ಮಗ ಪ್ರಹ್ಲಾದನ ಕಥೆ ಇಲ್ಲಿದೆ. ಅಂತಿಮವಾಗಿ ಭಗವಾನ್ ವಿಷ್ಣು ನರಸಿಂಹ ಅವತಾರವೆತ್ತಿ ಅಧರ್ಮವನ್ನು ಹೇಗೆ ಅಳಿಸುತ್ತಾನೆ ಎಂಬುದು ಚಿತ್ರದ ಪ್ರಮುಖ ಆಕರ್ಷಣೆ.

ಬಾಕ್ಸ್ ಆಫೀಸ್ ಸಾಧನೆ:

ಬಾಕ್ಸ್ ಆಫೀಸ್ ಸಾಧನೆ ಮತ್ತು ಒಟಿಟಿ ವಿವರ:
ಹೊಂಬಾಳೆ ಫಿಲ್ಮ್ಸ್ ಪ್ರೆಸೆಂಟ್ಸ್ ಮತ್ತು ಕ್ಲೀಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬಂದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಕೇವಲ 10 ರಿಂದ 15 ಕೋಟಿ ರೂಪಾಯಿಗಳ ಮಿತ ಬಜೆಟ್‌ನಲ್ಲಿ ತಯಾರಾದ ಈ ಅನಿಮೇಟೆಡ್ ಸಿನಿಮಾ, ಭಾರತೀಯ ಮಾರುಕಟ್ಟೆಯಲ್ಲಿ 250 ಕೋಟಿ ರೂಪಾಯಿ ಹಾಗೂ ಜಾಗತಿಕ ಮಟ್ಟದಲ್ಲಿ 325 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ನಂತರ, ಸೆಪ್ಟೆಂಬರ್ 2025 ರಲ್ಲಿ ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿ ಅಲ್ಲಿಯೂ ಡಿಜಿಟಲ್ ಪ್ರೇಕ್ಷಕರಿಂದ ಭಾರಿ ಜನಪ್ರಿಯತೆ ಗಳಿಸಿತ್ತು.

ವಿಶೇಷವೆಂದರೆ, ಇದು ‘ಮಹಾವತಾರ ಸಿನೆಮ್ಯಾಟಿಕ್ ಯೂನಿವರ್ಸ್’ (MCU) ನ ಏಳು ಭಾಗಗಳ ಸರಣಿಯಲ್ಲಿನ ಮೊದಲ ಚಿತ್ರವಾಗಿದೆ. ಈ ಶನಿವಾರ ರಾತ್ರಿ ನಿಮ್ಮ ಮನೆಯ ಟಿವಿಯಲ್ಲೇ ನರಸಿಂಹನ ಘರ್ಜನೆಯನ್ನು ಸವಿಯಬಹುದು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories