ಬಹುನಿರೀಕ್ಷಿತ ಮಾರ್ಕ್ ಸಿನಿಮಾ ಟೀಸರ್ ರಿಲೀಸ್ : ಕಿಚ್ಚನ ಅಬ್ಬರಕ್ಕೆ ಮನಸೋತ ಅಭಿಮಾನಿಗಳು
Mark Movie Teaser: ಸ್ಯಾಂಡಲ್‌ವುಡ್ ನಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಅದ್ಭುತ ಪ್ರದರ್ಶನ ಮುಂದುವರಿದಿದೆ. ಈ ಬೆನ್ನಲ್ಲೇ ಇದೀಗ ಚಂದನವನದ ಮತ್ತೊಂದು ಸಿನಿಮಾ ತೆರೆಯ ಮುಂದೆ ಬರಲು ಸಜ್ಜಾಗುತ್ತಿದೆ.
ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ ನಟನೆಯ ಬಹುನಿರೀಕ್ಷಿತ ಮಾರ್ಕ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ನೋಡಿದ ಸುದೀಪ್ ಅಭಿಮಾನಿಗಳು ಕಿಚ್ಚನ ಅಬ್ಬರ ಕಂಡು ಫಿದಾ ಆಗಿದ್ದಾರೆ.
ಮಾರ್ಕ್ ಸಿನಿಮಾದ ಸೈತಾನ್ ಹಾಡು ಸಖತ್ ವೈರಲ್ ಆಗಿದ್ದು. ಟೈಟಲ್ ಟೀಸರ್ ಕೂಡ ಅಭಿಮಾನಿಗಳಿಗೆ ಮೆಚ್ಚುಗೆಯಾಗಿತ್ತು. ಇದೀಗ ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದ್ದು ಸುದೀಪ್ ಅವರ ಖಡಕ್ ಪೊಲೀಸ್ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಮಾರ್ಕ್ ಸಿನಿಮಾದ ಟೀಸರ್‌ಗೂ ಮುನ್ನ ಚಿತ್ರತಂಡ ಟೈಟಲ್ ಟೀಸರ್ ಬಿಡುಗಡೆ ಮಾಡಿತ್ತು. ಇದನ್ನು ಕೂಡ ಅಭಿಮಾನಿಗಳು ನೆಚ್ಚಿಕೊಂಡಿದ್ದರು. ಟೈಟಲ್ ಟೀಸರ್ನ ಕ್ರೇಜ್ ಬಳಿಕವೇ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು.
ಇದನ್ನೂ ಓದಿ: ಅಶ್ವಿನಿ, ಜಾನವಿ ಮಾಡೋದೆಲ್ಲ ಬರಿ ನಾಟಕ ಎಂದ ನೆಟ್ಟಿಗರು
ಇದೀಗ ಸಿನಿಮಾದ ಟೀಸರ್ ಮೂಲಕವೇ ಕಿಚ್ಚ ಸುದೀಪ ಅಬ್ಬರಿಸಿದ್ದು ಇನ್ನು ಟ್ರೇಲರ್ ಯಾವ ರೀತಿ ಇರಬಹುದು ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ವಿಜಯ್ ಕಾರ್ತಿಕೇಯ ಅವರ ನಿರ್ದೇಶನದ ಮಾರ್ಕ್ ಸಿನಿಮಾಗೆ ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಿದ್ದಾರೆ.
ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರ ಸಂಗೀತವಿದೆ. ಮಾರ್ಕ್ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಅಪ್ಪಳಿಸಲಿದ್ದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ವೀಕ್ಷಕರ ಕ್ಷಮೆ ಕೇಳಿದ Zee ಕನ್ನಡ ವಾಹಿನಿ!



