actress pranitha subhash : ಪತಿ ಹುಟ್ಟುಹಬ್ಬದಂದು ಮನೆಗೆ ಏಂಜೆಲ್ಸ್​ ಆಗಮನವೆಂದ ನಟಿ ಪ್ರಣೀತಾ

ನಟಿ ಪ್ರಣೀತಾ ಸುಭಾಷ್​ (actress pranitha subhash)ತಾಯಿಯಾಗುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ನಟಿ ಪ್ರಣೀತಾ ಸುಭಾಷ್​​​ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪತಿ ನಿತಿನ್​ ಜೊತೆಯಲ್ಲಿ ಸಖತ್​ ಕ್ಯೂಟ್​ ಆಗಿ ಫೋಟೋ ಶೂಟ್​ ಮಾಡಿಸಿಕೊಂಡಿರುವ ನಟಿ ಪ್ರಣೀತಾ ಸುಭಾಷ್​​​ ತಮ್ಮ ಪತಿಯ 34ನೇ ಜನ್ಮದಿನದಂದು ದೇವರು ನಮ್ಮ ಮನೆಗೆ ಪುಟ್ಟ ಅತಿಥಿಗಳನ್ನು ಕಳುಹಿಸಿಕೊಡಲಿದ್ದಾನೆ ಎಂದು ಬರೆದುಕೊಂಡಿದ್ದಾರೆ.


ಗರ್ಭಿಣಿ ವಿಚಾರವನ್ನು ಬಹಿರಂಗಪಡಿಸಿರುವ ನಟಿ ಪ್ರಣೀತಾ ತಮ್ಮ ಮದುವೆ ವಿಚಾರದಲ್ಲಿ ಮಾತ್ರ ತುಂಬಾನೆ ಗೌಪ್ಯತೆ ಕಾಯ್ದುಕೊಂಡಿದ್ದರು. ಕೊರೊನಾ ಅಲೆ ಭೀಕರವಾಗಿದ್ದ ಸಂದರ್ಭದಲ್ಲಿಯೇ ನಟಿ ಪ್ರಣೀತಾ ಸುಭಾಷ್​ ಕಳೆದ ವರ್ಷ ಮೇ ತಿಂಗಳಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಬೆಂಗಳೂರು ಮೂಲದ ಉದ್ಯಮಿ ನಿತಿನ್​ ರಾಜು ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಪ್ರಣೀತಾ ಮದುವೆ ಫೋಟೋಗಳು ಬಹಿರಂಗವಾದ ಬಳಿಕವೇ ಕರುನಾಡಿಗೆ ಇವರು ಮದುವೆಯಾಗಿದ್ದಾರೆ ಎಂಬ ವಿಚಾರ ತಿಳಿದಿತ್ತೇ ವಿನಃ ನಟಿ ಪ್ರಣಿತಾ ಈ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ.


ಪ್ರಣೀತಾ ಗುಟ್ಟು ಗುಟ್ಟಾಗಿ ಮದುವೆಯಾದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಂತೆಯೇ ಈ ಬಗ್ಗೆ ಮಾತನಾಡಿದ ಅವರು, ಮದುವೆಯ ಹಿಂದಿನ ದಿನದವರೆಗೂ ಮದುವೆ ನಡೆಯುತ್ತೆ ಎಂದು ನಮಗೇ ನಂಬಿಕೆ ಇರಲಿಲ್ಲ. ನಾನು ಹಾಗೂ ನಿತಿನ್​ ಬಹುಕಾಲದ ಸ್ನೇಹಿತರು. ಪರಸ್ಪರ ಪ್ರೀತಿಸಿ ಕುಟುಂಬಸ್ಥರಿಂದಲೂ ಒಪ್ಪಿಗೆ ಪಡೆದು ಮದುವೆಯಾಗಿದ್ದೆವು. ಕೊರೊನಾ ಮಾರ್ಗಸೂಚಿ ಬೇರೆ ಪಾಲನೆ ಮಾಡಬೇಕಾದ್ದರಿಂದ ನಮಗೆ ಎಲ್ಲರನ್ನೂ ಮದುವೆಗೆ ಕರೆಯಲು ಆಗಲಿಲ್ಲವೆಂದು ಹೇಳಿ ಕ್ಷಮೆಯಾಚಿಸಿದ್ದರು.


ಪ್ರಣೀತಾ ಸುಭಾಷ್​ ಸಾಮಾನ್ಯವಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಪೈಕಿಯಲ್ಲ. ವೈಯಕ್ತಿಕ ಜೀವನವನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳುವ ನಟಿ ಪ್ರಣೀತಾ ಪ್ರೆಗ್ನೆಸಿ ನ್ಯೂಸ್​ ಅನೌನ್ಸ್​​ ಮಾಡಿರುವುದೇ ದೊಡ್ಡ ಅಚ್ಚರಿಯವ ವಿಚಾರವಾಗಿದೆ.

ಇದನ್ನು ಓದಿ : KGF Journey : ಯಶ್‌ ನೆನಪಿನಾಳದ ಮಾತು! ಕೆಜಿಎಫ್ ನ 8 ವರ್ಷಗಳಲ್ಲಿ ನಾವೂ ಬಹಳ ಬೆಳೆದಿದ್ದೇವೆ: ಈ ನೆನಪುಗಳೇ ನಮ್ಮ ಆಸ್ತಿ

ಇದನ್ನೂ ಓದಿ : Doctorate for Actor Ravichandran : ನಟ ರವಿಚಂದ್ರನ್​​ಗೆ ಗೌರವ ಡಾಕ್ಟರೇಟ್​ ಘೋಷಣೆ

porki movie actress pranitha subhash nitin expecting first baby

Comments are closed.