Gandhada Gudi : ಅಕ್ಟೋಬರ್ 28 ಕ್ಕೆ ತೆರೆಯ ಮೇಲೆ ಗಂಧದ ಗುಡಿ

ಸಿನೆಮಾ ಕ್ಷೇತ್ರವು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಕ್ಷೇತ್ರವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಸಿನೆಮಾವನ್ನು ಇಷ್ಟ ಪಡುವವರು ಇದ್ದಾರೆ. ಅದರಲ್ಲಿಯೂ ತಮ್ಮ ನೆಚ್ಚಿನ ಹೀರೊ ಅಭಿನಯಿಸಿರುವ ಸಿನೆಮಾ ಎಂದರೆ ಕೇಳಬೇಕೇ. ಇದೀಗ ಅಪ್ಪು ಎಂದೇ ಜನ ಮಾನಸದಲ್ಲಿ ಜನಪ್ರಿಯತೆ ಪಡೆದಿರುವ ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ನಟಿಸಿದ್ದ ಗಂಧದ ಗುಡಿ (Gandhada Gudi) ಸಿನೆಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಇದು ಅಪ್ಪು ಅಭಿಮಾನಿಗಳಿಗೆ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದೆ. ಅಲ್ಲದೇ ಈ ಸಿನೆಮಾದ ಇನ್ನೊಂದು ವಿಶೇಷತೆ ಎಂದರೆ ಇದು ಅಪ್ಪು ಅವರ ಕನಸಿನ ಸಿನೆಮಾವಾಗಿತ್ತು ಎನ್ನುವುದು. ಇದೀಗ ಈ ಸಿನೆಮಾವನ್ನು ಬಿಡುಗಡೆ ಮಾಡುತ್ತಿರುವುದು ಬರಿ ಅಪ್ಪು ಅಭಿಮಾನಿಗಳಿಗೆ ಮಾತ್ರ ಖುಷಿ ನೀಡಿರುವುದಲ್ಲದೆ, ಅಪ್ಪು ಆತ್ಮಕ್ಕೂ ಖುಷಿ ಕೊಡುವಂತದ್ದಾಗಿದೆ.

ಹೌದು ಹಲವು ದಿನಗಳಿಂದ ಕುತೂಹಲದಿಂದ ಕಾಯುತ್ತಿದ್ದ ಸಿನೆಮಾವೀಗ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದೆ ಬರುವ ಅಕ್ಟೋಬರ್ 28 ,2022 ರಂದು ಎಲ್ಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧಾರಿಸಲಾಗಿದೆ. ಮೂಲತಃ ಈ ಸಿನೆಮಾವು ವನ್ಯ ಪ್ರಾಣಿಗಳ ಬಗ್ಗೆ, ಪರಿಸರ ರಕ್ಷಣೆಯ ಬಗ್ಗೆ ನಮಗೆ ತಿಳಿಸುತ್ತದೆ. ಪುನೀತ್ ರಾಜ್‍ಕುಮಾರ್ ರವರ ಎಲ್ಲಾ ಅಭಿಮಾನಿಗಳು ಹಾಗೆಯೇ ಅರಣ್ಯ, ವನ್ಯಜೀವಿ ಪ್ರೇಮಿಗಳೆಲ್ಲರೂ ಕಾತರದಿಂದ ಈ ಸಿನೆಮಾ ನೋಡಲು ಕನವರಿಸುತ್ತಿದ್ದಾರೆ. ಇದು ಇಡಿ ಕರ್ನಾಟಕದ  ಅದ್ಭುತ ಪಯಣವನ್ನು ಅನ್ವೇಷಿಸುವ ಚಿತ್ರವಾಗಿದೆ. ಅಪಾರ ಪ್ರೀತಿ ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆಯಾಗಿದೆ. ಕರ್ನಾಟಕದ ‘ಕಾಡು ಉಳಿಸಿ’ ಎಂಬ ಡಾ. ರಾಜ್ ಸಂದೇಶದ ಮರುಜನ್ಮವೇ ಹೊಸ ಗಂಧದಗುಡಿಯ ಕಥೆಯ ಸೀಕ್ರೇಟ್ ಆಗಿದೆ.

ಈ ಗಂಧದ ಗುಡಿ ಸಿನೆಮಾವನ್ನು ಪಿಆರ್‌ಕೆ ಪ್ರೊಡಕ್ಷನ್ಸ್‌ ನಡಿ, ರಾಷ್ಟ್ರಪ್ರಶಸ್ತಿ ವಿಜೇತ ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೆ.ಎಸ್‌. ಅವರ ಜೊತೆಗೂಡಿ ಈ ಡಾಕ್ಯೂಫಿಲಂ ತಯಾರಿಸಿದ್ದು, ಇದರ ಶೀರ್ಷಿಕೆ ಟೀಸರ್‌ನಲ್ಲಿ ಅಪ್ಪು ಮತ್ತು ಅಪ್ಪಾಜಿ ಇಬ್ಬರೂ ಪುನಃ ಜನ್ಮತಾಳಿದ್ದಾರೆ. ಈ ಸಿನೆಮಾವು ನೈಜ ಘಟನೆಗಳನ್ನು ಆಧರಿಸಿದ್ದು ಅದರ ಮೇಲೆಯೇ ಚಿತ್ರೀಕರಣ ನಡೆಸಲಾಗಿದೆ. ವಿಶ್ವವಿಖ್ಯಾತ ಜೋಗ ಜಲಪಾತ, ಕಾಳಿ ನದಿ, ನಾಗರಹೊಳೆ ಪರಿಸರದ ಸುತ್ತಮುತ್ತಲಿನ ಪ್ರದೇಶವನ್ನು ಅದ್ಭುತವಾಗಿ ಈ ಸಿನೆಮಾದಲ್ಲಿ ಸೆರೆಹಿಡಿಯಲಾಗಿದೆ. ಅಜನೀಶ್ ಲೋಕನಾಥ್‌ ಹಿನ್ನೆಲೆ ಸಂಗೀತ ಡಾಕ್ಯೂಫಿಲಂಗೆ ಜೀವತುಂಬಿದೆ. ಕೊನೆಯಲ್ಲಿ ತುಂತುರು ಮಳೆಯಲ್ಲಿ ನೆನಯುತ್ತಾ, ಅದೇ ಮುಗ್ಧ ನಗುವಿನೊಂದಿಗೆ ‘ಗಂಧದಗುಡಿ’ಗೆ ಪುನೀತ್‌ ಪ್ರೇಕ್ಷಕರನ್ನು ಸ್ವಾಗತಿಸಿದ್ದಾರೆ. 

ಇದನ್ನೂ ಓದಿ: Corn Benefits For Health: ಜೋಳದ ಆರೋಗ್ಯ ಪ್ರಯೋಜನಗಳೇನು ಗೊತ್ತಾ!

ಇದನ್ನೂ ಓದಿ: Daily Horoscope : ಹೇಗಿದೆ ಶನಿವಾರದ ದಿನಭವಿಷ್ಯ

(Puneeth Rajkumar’s Dream Project Gandhada Gudi will be Release on October 22nd)

Comments are closed.