ಸ್ಯಾಂಡಲ್‌ವುಡ್‌ ನಟ ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ 13 ಸಿನಿಮಾದ ಟೀಸರ್ ರಿಲೀಸ್

ಸ್ಯಾಂಡಲ್‌ವುಡ್‌ ನಟ ಹಾಗೂ ದೊಡ್ಮನೆ ಮಗ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಹಿರಯ ನಟಿ ಶ್ರುತಿ ಅಭಿನಯದ 13 ಸಿನಿಮಾದ ಟೀಸರ್‌ (13 Movie Teaser Release) ಬಿಡುಗಡೆಯಾಗಿದೆ. ಕೆಲ ಸಮಯದಿಂದ ಆರೋಗ್ಯ ಸಮಸ್ಯೆಯಿಂದ ನಟನೆಯಿಂದ ದೂರವಿದ್ದ ನಟ ರಾಘವೇಂದ್ರ ರಾಜ್‌ಕುಮಾರ್‌ ಈಗ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ನಟ ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ ಬಹು ನಿರೀಕ್ಷಿತ 13 ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಈ ಕುರಿತಂತೆ ನಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾಕ್ಕೆ ಪ್ರೋತ್ಸಾಹ ನೀಡಿ ಎಂದು ಪೋಸ್ಟ್‌ ಮಾಡಿದ್ದಾರೆ.

ನಟ ರಾಘವೇಂದ್ರ ರಾಜ್‌ಕುಮಾರ್‌, ” 13 ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಿಮ್ಮ ಪ್ರೋತ್ಸಾಹ ಹಾಗೂ ಆಶೀರ್ವಾದ ಸದಾ ಹೀಗೆಯೇ ಇರಲಿ. ಹರಸಿ ಹಾಗೂ ಹಾರೈಸಿ. ” ಎಂದು ತಮ್ಮ ಫೋಸ್ಟ್‌ನಲ್ಲಿ ಬರೆದು ಹಂಚಿಕೊಂಡಿದ್ದಾರೆ. ಈ ಸಿನಿಮಾ ಟೀ ಅಂಗಡಿ ಸಾಯಿರಾಬಾನು ಮತ್ತು ಗುಜರಿ ಅಂಗಡಿಯ ಮಾಲೀಕ ಮೋಹನ್‌ ಕುಮಾರ್‌ ದಂಪತಿಯ ಪ್ರೇಮಕಥೆ ಹಾಗೂ ಸಂಕಟದ ಕಥಾಹಂದರವನ್ನು ಒಳಗೊಂಡಿದೆ.

ಟೀಸರ್‌ ಪ್ರಾರಂಭದಲ್ಲಿ ನಾಯಕ ಮೋಹನ ಕುಮಾರ್‌ನನ್ನು ಪೊಲೀಸ್‌ ಅಧಿಕಾರಿ ಯಾವುದೋ ವಿಚಾರದ ಮೇಲೆ ವಿಚಾರಣೆ ನಡೆಸುತ್ತಿರುವುದನ್ನು ಕಾಣಬಹುದು. ನಾಯಕ ನಿವೃತ್ತಿ ಪೋಲಿಸ್‌ ಅಧಿಕಾರಿ ಆಗಿದ್ದು, ಗುಜರಿ ಅಂಗಡಿಯನ್ನು ನಡೆಸುತ್ತಿರುತ್ತಾನೆ. ಇನ್ನು ಟೀಸರ್‌ನಲ್ಲಿ ಪ್ರಮೋದ್‌ ಶೆಟ್ಟಿ ಪೊಲೀಸ್‌ ಪಾತ್ರದಲ್ಲಿ ಮಿಂಚಿದ್ದಾರೆ. ಒಟ್ಟಾರೆ ಇದೊಂದು ರಹಸ್ಯ ಗೂಢಾಚರಣೆಯ ಕಥೆಯಂತೆ ಭಾಸವಾಗುತ್ತದೆ. ಇನ್ನು ಈ ಸಿನಿಮಾ ಟೀಸರ್‌ನ್ನು ನೋಡಿದ ಸಿನಿಪ್ರೇಕ್ಷಕರಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಹಾಗೆಯೇ ಕೆಲ ವರ್ಷಗಳ ನಂತರ ರಾಘವೇಂದ್ರ ರಾಜ್‌ಕುಮಾರ್‌ ಸಿನಿಮಾದಲ್ಲಿ ನಟಿಸಿದ್ದು, ಅದರಲ್ಲೂ ಹಿರಿಯ ನಟಿ ಶ್ರುತಿ ಕೂಡ ಬಹಳ ಅದ್ಬುತವಾಗಿ ಅಭಿನಯಿಸಿದ್ದಾರೆ.

ಇದೊಂದು ಅಂತರ್ಜಾತಿಯ ಪ್ರೇಮ ಕಥೆಯಾಗಿದ್ದು, ಗಂಡ ಹೆಂಡತಿ ಅಂದರೆ ಸಮಾಜದಲ್ಲಿ ಹೇಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಜೀವನವಿಡೀ ಹೇಗೆಲ್ಲಾ ಕಷ್ಟಪಡುತ್ತಾರೆ ಎನ್ನುವುದನ್ನು ಹೇಳುವ, ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಒಂದು ನೂಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಚಿತ್ರಕಥೆಯನ್ನು ರಚಿಸಲಾಗಿದೆ ಎಂದು ಸಿನಿಮಾದ ನಿರ್ದೇಶಕ ಕೆ.ನರೇಂದ್ರ ಬಾಬು ಹೇಳಿದ್ದಾರೆ.

ಇದನ್ನೂ ಓದಿ : ಮಡಿಕೇರಿಯಲ್ಲಿ ಗಲ್ಲಿ ಕ್ರಿಕೆಟ್‌ ಆಡಿದ ನಟ ದರ್ಶನ್‌ : ವೈರಲ್‌ ಆಯ್ತು ವಿಡಿಯೋ

ಇದನ್ನೂ ಓದಿ : ಹಾಲಿವುಡ್‌ ಬಾಲನಟಿ ವೈಲೆಟ್ ಮೆಕ್ಗ್ರಾನೊಂದಿಗೆ ಸೆಲ್ಪಿಗೆ ಪೋಸ್‌ ನೀಡಿದ ಎಸ್‌ಎಸ್‌ ರಾಜಮೌಳಿ : ವೈರಲ್‌ ಆಯ್ತು ಪೋಸ್ಟ್‌

ಇದನ್ನೂ ಓದಿ : ಮೊದಲ ದಿನದ ಪ್ರದರ್ಶನದಲ್ಲೇ ಭರ್ಜರಿ ರೆಸ್ಪಾನ್ಸ್‌ ಪಡೆದ ಗೌಳಿ ಸಿನಿಮಾ

ರಾಘವೇಂದ್ರ ರಾಜ್‌ಕುಮಾರ್‌ ನಾಯಕ ಮೋಹನ ಕುಮಾರ ಪಾತ್ರದಲ್ಲಿ ಕಾಣಿಸಿಕೊಂಡರೆ, ಶ್ರುತಿ ನಾಯಕಿಯಾಗಿ ಸಾಯಿರಾಬಾನು ಆಗಿ ನಟಿಸಿದ್ದಾರೆ. ಈಸ ಸಿನಿಮಾವನು ಸಂಪತ್‌ ಕುಮಾರ್‌, ಮಂಜುನಾಥ್‌, ಮಂಜುನಾಥ ಗೌಡ ನಿರ್ಮಾಣ ಹೊಣೆಯನ್ನು ಹೊತ್ತಿದ್ದಾರೆ. ಇನ್ನು ಈ ಸಿನಿಮಾವನ್ನು ಕೆ.ನರೇಂದ್ರಬಾಬು ಅವರು ನಿರ್ದೇಶಿಸಿದ್ದಾರೆ.

Sandalwood actor Raghavendra Rajkumar starrer 13 movie teaser release.

Comments are closed.