ಕನಸೊಂದು ನನಸಾಯಿತು ಎಂದ ಶಿವಣ್ಣಪುತ್ರಿ: ನಿವೇದಿತಾ ಪೋಸ್ಟ್ ವೈರಲ್
Niveditha Shivarajkumar : ಚಿತ್ರರಂಗದ ದೊಡ್ಮನೆಯಲ್ಲಿ ಸದಾ ಸಿನಿಮಾದ ಕನಸುಗಳು ಉಸಿರಾಡುತ್ತವೆ. ಹೀಗಂದ್ರೆ ಅತಿಶಯೋಕ್ತಿ ಏನಿಲ್ಲ. ಯಾಕೆಂದರೇ ಕನ್ನಡ ಚಿತ್ರರಂಗಕ್ಕೆ ಮೇರುನಟರಾದ ಡಾ.ರಾಜ್ ರಂತಹ ಮುತ್ತನ್ನು ಕೊಡುಗೆಯಾಗಿ ಕೊಟ್ಟ ದೊಡ್ಮನೆಯಿಂದ ಹೊಸ ಚಿಗುರೊಂದು ಚೊಚ್ಚಲ ಸಿನಿಮಾದ ಜೊತೆ ತನ್ನ ಕನಸು ನನಸಾಗಿಸುವ ಸಂಭ್ರಮದಲ್ಲಿದೆ. ಅದು ಮತ್ಯಾರೂ ಅಲ್ಲ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವಣ್ಣ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್. ತಮ್ಮದೇ ಪ್ರೊಡಕ್ಷನ್ ಸಂಸ್ಥೆ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದ ನಿವೇದಿತಾ ದೊಡ್ಮನೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಡಾ.ರಾಜ್ ಕುಮಾರ್ ಕುಟುಂಬದಿಂದ ಚಿತ್ರರಂಗಕ್ಕೆ ಕಲಾವಿದರು ಮಾತ್ರ ಬರಲಿಲ್ಲ. ನಿರ್ಮಾಪಕರು ಎಂಟ್ರಿಕೊಟ್ಟು ನೊರೆಂಟು ಸಿನಿಮಾವನ್ನು ಕೊಡುಗೆಯಾಗಿ ನೀಡಿದ್ದರು. ಇದಕ್ಕೆ ಪಾರ್ವತಮ್ಮ ರಾಜ್ ಕುಮಾರ್ ಜೀವಂತ ಉದಾಹರಣೆ. ಪಾರ್ವತಮ್ಮನವರ ಬಳಿಕ ಈಗ ಮತ್ತೆಮೂರನೇ ತಲೆಮಾರಿನ ಕುಡಿ ಶಿವಣ್ಣನ ಪುತ್ರಿ ನಿವೇದಿತಾ ಹೊಸ ಪಯಣ ಆರಂಭಿಸಿದ್ದಾರೆ.
ಶ್ರೀಮುತ್ತುಸಿನಿಸರ್ವೀಸ್ ಮೂಲಕಚಿತ್ರ ನಿರ್ಮಾಣಕ್ಕೆ ಅಡಿ ಇಟ್ಟ ನಿವೇದಿತಾ ಶಿವ ರಾಜಕುಮಾರ್ ,ಫೈರ್ ಪ್ಲೈ ಎಂಬ ಸಿನಿಮಾ ನಿರ್ಮಿಸಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದ್ದು ಚಿತ್ರ ತೆರೆ ಮೇಲೆ ಬರಲು ಸಿದ್ಧವಾಗಿದೆ. ಈಗಾಗಲೇ ಈ ಸಿನಿಮಾದ ಆಡಿಯೋ ಕೂಡ ಆನಂದ ಆಡಿಯೋದಲ್ಲಿ ರಿಲೀಸ್ ಆಗಿದ್ದು, ಚಿತ್ರತಂಡದ ಶ್ರಮ ಹಾಡಿನಲ್ಲಿ ಪ್ರತಿಧ್ವನಿಸಿದೆ. ಯುವ ಪ್ರತಿಭೆ ವಂಶಿ ನಾಯಕರಾಗಿ ನಟಿಸಿರೋ ಈ ಸಿನಿಮಾವನ್ನು ಸ್ವತಃ ನಾಯಕ ವಂಶಿ ನಿರ್ದೇಶಿಸಿದ್ದಾರೆ.
ಹಿರಿಯ ನಟರಾದ ಅಚ್ಯುತ್ ಕುಮಾರ್ ಹಾಗೂ ಮೂಗು ಸುರೇಶ್ ಜೊತೆಗೆ ಎವ್ವರ್ ಗ್ರೀನ್ ಹಿರೋಯಿನ್ ಸುಧಾರಾಣಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಿನಿಮಾದ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿರೋ ನಿವೇದಿತಾ ಶಿವರಾಜ್ ಕುಮಾರ್, ಚಿಕ್ಕವಳಿದ್ದಾಗಿನಿಂದಲೂ ಸಿನಿಮಾ ಮತ್ತು ಚಿತ್ರಕಥೆಗಳ ಜೊತೆ ಬೆಳೆದವಳು ನಾನು. ಅಂದಿನಿಂದಲೂ ನನಗಿಷ್ಟವಾದ ಚಿತ್ರಕಥೆಗಳನ್ನು ಬೆಳ್ಳಿ ತೆರೆ ಮೇಲೆ ತರಬೇಕೆಂದು ಕಂಡ ಕನಸಿಗೆ ಕಟ್ಟಿದ ಮೊದಲ ರೆಕ್ಕೆ ಫೈರ್ ಫ್ಲೈ.
ಇದನ್ನೂ ಓದಿ : ರಾಯನ್ ಜೊತೆ ಮೇಘನಾ ರಾಜ್ ಸರ್ಜಾ : ಮಗನ ತುಂಟಾಟದ ವಿಡಿಯೋ ಶೇರ್ ಮಾಡಿದ ನಟಿ
ಫೈರ್ ಫ್ಲೈ ಚಿತ್ರೀಕರಣ ಇನ್ನೇನು ಮುಗಿಯುತ್ತಿರಲು ಚಿತ್ರತಂಡದ ನಾವಿಕರಾದ ನಿರ್ದೇಶಕ ಹಾಗೂ ನಟ ವಂಶಿ, ನಮ್ಮ ತಂತ್ರಜ್ಞರು, ಹಿರಿಯ ನಟ-ನಟಿಯರು ಅದ್ಬುತ ಪ್ರತಿಭೆಗಳು ಹಾಗೂ ಬೆನ್ನೆಲುಬಾಗಿ ನಿಂತ ತಂಡದ ಪ್ರತಿಯೊಬ್ಬರಿಗೂ ಹಾಗೂ ಅವರೊಡನೆ ಮೂಡಿದ ನೆನಪುಗಳು ನನ್ನಲ್ಲಿ ಶಾಶ್ವತವಾಗಿ ಉಳಿಯುವುದು.

ಶುರುವಾದ ಪಯಣವೂ ಎಲ್ಲಾದರೂ ಅಂತ್ಯಗೊಳ್ಳಬೇಕೆನ್ನುತ್ತಾರೆ.. ಆದರೆ ನನ್ನ ಕನಸಿನ ಈ ಪ್ರಯಾಣ ಕೊನೆ ಹತ್ತಿರವಾಗುತ್ತಿದ್ದರೂ ಹೊಸತೊಂದು ಪ್ರಯಾಣದ ಆರಂಭವಾದಂತಿದೆ. ಅಂತರಾಳದ ಬೆಳಕಿನ ಕತೆಯ ಹುಡುಕಾಟದ ಕತೆಯಾಗಿರುವ ನಮ್ಮ ಫೈರ್ ಫ್ಲೈ ಚಿತ್ರವನ್ನು ನಿಮ್ಮೊಂದಿಗೆ ತೆರೆಯ ಮೂಲಕ ಹಂಚಿಕೊಳ್ಳಲು ಕಾತುರಳಾಗಿದ್ದೇನೆ ಎಂದು ನಿವೇದಿತಾ ಇನ್ ಸ್ಟಾಗ್ರಾಂನಲ್ಲಿ ಪೋಟೋ ಹಾಗೂ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ : ದಾಸ ಜೊತೆ ಅಧಿಕಾರಿಗಳಿಗೂ ಸಂಕಷ್ಟ
ಅಷ್ಟೇ ಅಲ್ಲ ಅವರ ಇನ್ ಸ್ಟಾಗ್ರಾಂ ಖಾತೆಯ ತುಂಬೆಲ್ಲ ಬಹುತೇಲ ಫೈರ್ ಫ್ಲೈ ಸಿನಿಮಾದ ಪೋಸ್ಟ್ ಗಳೆ ಕಾಣಸಿಗುತ್ತಿದ್ದು, ಇದು ನಿವೇದಿತಾ ಅವರ ಸಿನಿಮಾದ ಬಗ್ಗೆ ಎಷ್ಟು ಕನಸು ಕಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ ಒದಗಿಸುವಂತಿದೆ. ಫೈರ್ ಫ್ಲೈ ಸಿನಿಮಾವನ್ನು ಅಭಿಲಾಷ್ ಕಳತ್ತಿ ಛಾಯಾಗ್ರಹಣ ಮಾಡಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಇದೆ. ಸಿನಿಮಾ ಈ ವರ್ಷಾಂತ್ಯಕ್ಕೆ ತೆರೆಗೆ ಬರೋ ನೀರಿಕ್ಷೆ ಇದೆ.
ಇದನ್ನೂ ಓದಿ : ಹ್ಯಾಪಿ ಆನ್ಯಿವರ್ಸರಿ ಚಿನ್ನಾ…! ವಿಜಯ್ ರಾಘವೇಂದ್ರ ಪೋಸ್ಟ್ ಗೆ ಅಭಿಮಾನಿಗಳ ಕಣ್ಣೀರು
sandalwood Actor Shivarajkumar Daughter Niveditha Special Post



