Puneeth Raj Kumar : ಪರಮಾತ್ಮನ ಸೇರಿದ ಪುನೀತ್ : ಮಾಸದ ನೋವಿನೊಂದಿಗೆ ಅಪ್ಪು ಸ್ಮರಿಸಿದ ಕುಟುಂಬ

ಸರಿಯಾಗಿ ಒಂದು ತಿಂಗಳ ಹಿಂದೇ ಇದೇ ದಿನ. ಎಲ್ಲವೂ ಅಂದುಕೊಂಡಂತೇ ಆಗಿದ್ದರೇ, ಇಷ್ಟೊತ್ತಿಗೆ ಗಂಧದಗುಡಿ ಟ್ರೇಲರ್ ರಿಲೀಸ್ ಮಾಡಿ, ಜೇಮ್ಸ್ ಡಬ್ಬಿಂಗ್ ಮುಗಿಸಿ, ಟೂರಿಸಂ ವೆಬ್ ಸೈಟ್ ಲಾಂಚ್ ಮಾಡಿಸಿ, ಆರಾಂ ಆಗಿ ದ್ವಿತ್ವ ಶೂಟಿಂಗ್ ಗೆ ಹೊರಡಬೇಕಿತ್ತು ದೊಡ್ಮನೆ ರಾಜ್ ಕುಮಾರ್ (Puneeth Raj Kumar). ಆದರೆ ಅಚಾನಕ ಎಂಬಂತೆ ಆಗಮಿಸಿದ ಅತಿಥಿ ಯಮರಾಯ ಲಕ್ಷಾಂತರ ಅಭಿಮಾನಿಗಳ ಉಸಿರು, ಸಾವಿರಾರು ಜನರ ಅನ್ನಕ್ಕೆ ದಾರಿ ತೋರಿದ್ದ ಪುಣ್ಯಾತ್ಮನನ್ನು ಇನ್ನೆಂದೂ ತಿರುಗಿ ಬಾರದಂತೆ ಕರೆದೊಯ್ದಿದೆ.

ಒಂದೇ ತಿಂಗಳಲ್ಲಿ ಅದೇಷ್ಟೋ ಕೆಲಸಗಳನ್ನು ಮಾಡಿಮುಗಿಸಬೇಕಿದ್ದ ಕನ್ನಡದ ಪವರ್ ಸ್ಟಾರ್ ನಿಶ್ಚಲವಾಗಿ ಸಮಾಧಿಯೊಳಗೆ ಮಲಗಿದ್ದಾರೆ. ಸದಾ ಮಾಸದ ನಗೆಯೊಂದಿಗೆ ಅಭಿಮಾನಿಗಳೊಂದಿಗೆ ಬೆರೆಯುತ್ತಿದ್ದ ಹಿರಿ- ಕಿರಿಯರೊಂದಿಗೆ ಬೆರೆತು ಹೋಗುತ್ತಿದ್ದ ಸರಳ ವ್ಯಕ್ತಿತ್ವ ಪುನೀತ್ ಈಗ ಯಾರು ಬಂದರೂ ಎದ್ದೇಳುವ ಸ್ಥಿತಿಯಲ್ಲಿಲ್ಲ.

Puneeth Raj kumar Last video
ಅಪ್ಪು ನಿಧನಕ್ಕೂ ಮುನ್ನ ನಡೆದಿದ್ದೇನು ? ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಸತ್ಯ

ಅಕ್ಟೋಬರ್ 29 ರಂದು ಎಂದಿನಂತೆ ವರ್ಕೌಟ್, ವಾಕ್ ಮುಗಿಸಿ ಮನೆ ಮರಳಿದ್ದ ಪುನೀತ್ ಗೆ ಎದೆ ನೋವು ಕಾಣಿಸಿಕೊಂಡಿತ್ತು ರಮಣಶ್ರೀ ಕ್ಲಿನಿಕ್ ಗೆ ಹೋಗಿ ಅಲ್ಲಿಂದ ವಿಕ್ರಂ ಆಸ್ಪತ್ರೆ ತಲುಪುವಷ್ಟರಲ್ಲಿ ಪುನೀತ್ ಎಂಬ ಅಪ್ಪಟ ಕನ್ನಡದ ಪ್ರತಿಭೆ ಉಸಿರು ಚೆಲ್ಲಿತ್ತು. ಅವರೊಂದಿಗೆ ಅವರ ಅದೇಷ್ಟೋ ಕನಸುಗಳು ಕೂಡ ಕಣ್ಮರೆಯಾಗಿದ್ದವು. ಕರುನಾಡಿಗೆ ಧಿಡೀರ್ ಆಘಾತದಂತೆ ಅಪ್ಪಳಿಸಿದ ಈ‌ ನೋವಿಗೆ ಈಗ ಒಂದು ತಿಂಗಳು. ಎರಡು ದಿನದಳ ಅಂತಿಮ ದರ್ಶನದಲ್ಲಿ ಲಕ್ಷಾಂತರ ಜನರು ಪುನೀತ್ ಗೆ ಅಂತಿಮ ನಮನ ಸಲ್ಲಿಸಿದರು.

ವಿಶ್ವದಾದ್ಯಂತ ಕಂಬನಿ ಮಿಡಿದ ಅಭಿಮಾನಿಗಳು ಪುನೀತ್ ನಿಧನದ ಬಳಿಕ ಅನಾವರಣಗೊಂಡ ಅವರ ಕೊಡುಗೈದಾನದ ಸಂಗತಿಗೆ ಬೆರಗಾದರು. ನಾಡಿನಾದ್ಯಂತ ನೊರೆಂಟು ವಿಧಾನದಲ್ಲಿ ಪುನೀತ್ ಶೃದ್ಧಾಂಜಲಿ ಸಲ್ಲಿಕೆಯಾಯಿತು.‌ಶಾಸಕರಿಂದ ಆರಂಭಿಸಿ ಜನಸಾಮಾನ್ಯರು ನೇತ್ರದಾನಕ್ಕೆ ಸಹಿ ಹಾಕುವ ಮೂಲಕ ಪುನೀತ್ ಸ್ಮರಿಸಿದರು.

One month after the death of Puneeth Raj Kumar, Raj Kumar family was in pain

ನೋಡ ನೋಡುತ್ತ ತಿಂಗಳು ಕಳೆದಿದೆ. ಪುನೀತ್ ನೆನಪುಗಳ‌ಜೊತೆ ಮುಂದೇ ಸಾಗಲು ದೊಡ್ಮನೆ ಕುಟುಂಬ ಒಲ್ಲದ ಮನಸ್ಸಿನಿಂದಲೇ ಸಿದ್ಧತೆ ನಡೆಸಿದೆ. ಇಂದು ಪುನೀತ್ ಅಗಲಿಕೆಗೆ ಒಂದು ತಿಂಗಳು ಸಂದ ಹಿನ್ನೆಲೆಯಲ್ಲಿ ಪುನೀತ್ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಬೆಳಗ್ಗೆಯೇ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ತೆರಳಿದ ಅಶ್ವಿನಿ ಪುನೀತ್ ರಾಜ್ ಕುಮಾರ್, ಶಿವಣ್ಣ, ರಾಘಣ್ಣ ಸೇರಿದಂತೆ ಕುಟುಂಬದ ಸದಸ್ಯರು ಸಮಾಧಿಗೆ ಪೂಜೆ ಸಲ್ಲಿಸಿ, ಚಿಕನ್ ಸೇರಿದಂತೆ ಪುನೀತ್ ಇಷ್ಟದ ಊಟದ ಐಟಂಗಳೊಂದಿಗೆ ಎಡೆ ನೀಡಿದ್ದಾರೆ.

ಇದನ್ನೂ ಓದಿ :‌ ಸರಿಗಮಪದಿಂದ ಹೊರಬಂದ್ರಾ ಮಹಾಗುರುಗಳು: ಹಂಸಲೇಖ ಗೈರಿನ ಬಗ್ಗೆ ವಾಹಿನಿ ಹೇಳಿದ್ದೇನು ಗೊತ್ತಾ?!

ಇದನ್ನೂ ಓದಿ :  ಪುನೀತ್ ರಾಜ್‌ ಕುಮಾರ್ ಸ್ಪೆಶಲ್ ರೋಲ್ ಇನ್ ಲಕ್ಕಿಮ್ಯಾನ್

( One month after the death of Puneeth Raj Kumar, Raj Kumar family was in pain)

Comments are closed.