Airport High Alert : ಕೊರೋನಾ ಬಳಿಕ Omicron ಆತಂಕ : ಸಿಲಿಕಾನ್ ಸಿಟಿಗೆ ಬಂದ 598 ಜನರ ಮೇಲೆ ವಿಶೇಷ ನಿಗಾ

ಬೆಂಗಳೂರು : ಹೋದ್ಯಾ ಪಿಶಾಚಿ ಅಂದ್ರೇ ಬಂದೇ ಗವಾಕ್ಷೀಲಿ ಅನ್ನೋ ಹಾಗೇ ದೇಶದ ಎಲ್ಲೆಡೆ ಕೊರೋನಾ ಮೂರನೆ ಅಲೆಯ ಭೀತಿ ತಗ್ಗುತ್ತಿರುವಂತೆಯೇ ಮತ್ತೇ ಒಮಿಕ್ರಾನ್ (Omicron) ರೂಪದಲ್ಲಿ ಮೂರನೇ ಅಲೆ ಭೀತಿ ಎದುರಾಗಿದೆ. ಈ ಮಧ್ಯೆ ವಿಶ್ವದೆಲ್ಲೆಡೆ ಒಮಿಕ್ರಾನ್ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ (Airport High Alert) ಘೋಷಿಸಲಾಗಿದೆ.

ಈಗಾಗಲೇ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿರುವ ದೇಶಗಳನ್ನು ಹೈರಿಸ್ಕ್ ದೇಶಗಳೆಂದು ಗುರುತಿಸಲಾಗಿದ್ದು ಆ ದೇಶಗಳಿಂದ ಬಂದವರ ಮೇಲೆ ವಿಶೇಷ ನಿಗಾವಹಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ವಿಶ್ವದಲ್ಲಿ ಒಮಿಕ್ರಾನ್ ಕಾಣಿಸಿಕೊಂಡ ಮೇಲೆ ಅಂದ್ರೇ ನವೆಂಬರ್ 1 ರಿಂದ 28 ರವರೆಗೆ ಹೈರಿಸ್ಕ್ ದೇಶಗಳಿಂದ ಒಟ್ಟು 598 ಜನರು ಬೆಂಗಳೂರಿಗೆ ಆಗಮಿಸಿದ್ದಾರೆ.

ಸೌತ್ ಆಫ್ರಿಕಾ, ಜಿಂಬಾಬ್ವೆ, ಮಾರಿಟಸ್, ಬೋಟ್ಸವಾನ್, ನ್ಯೂಜಿಲೆಂಡ್, ಚೈತಾ, ಬಾಂಗ್ಲಾದೇಶದಿಂದ ಒಟ್ಟು 598 ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಎಲ್ಲಾ ಪ್ರಯಾಣಿಕರ ಮೇಲೂ ಆರೋಗ್ಯ ಇಲಾಖೆ ಸಿಬ್ಬಂದಿ ವಿಶೇಷ ನಿಗಾವಹಿಸಿದೆ. ಪ್ರತಿಯೊಬ್ಬರ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಆರೋಗ್ಯ ಸ್ಥಿತಿಗತಿಯ ಸಂಪೂರ್ಣ ವಿವರಣೆ ಪಡೆದಿರುವ ಆರೋಗ್ಯ ಇಲಾಖೆ ಈಗಲೂ ದೂರವಾಣಿ ಮೂಲಕ ಅವರ ಆರೋಗ್ಯದ ಅಪ್ಡೇಟ್ ಮಾಹಿತಿ ಪಡೆದುಕೊಳ್ಳುತ್ತಿದೆ.

ಈ ಪೈಕಿ ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಕೊರೋನಾ ಸೋಂಕು‌ಕಾಣಿಸಿಕೊಂಡಿದ್ದು ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಅವರನ್ನು ವಿಶೆಷ ನಿಗಾದಲ್ಲಿ ಇಡಲಾಗಿತ್ತು. ಈ ವೇಳೆ ಇಬ್ಬರೂ ಪ್ರಯಾಣಿಕರಿಗೆ ತಗುಲಿರೋದು ಕೊರೋನಾದ ರೂಪಾಂತರ ತಳಿ ಡೆಲ್ಟಾ ವೈರಸ್ ಎಂಬ ಅಂಶ ಬಹಿರಂಗಗೊಂಡಿದ್ದು ಆತಂಕ‌ಕೊಂಚ ಕಡಿಮೆಯಾಗಿದೆ. ಕೇವಲ ವಿದೇಶಿ ಪ್ರಯಾಣಿಕರು ಮಾತ್ರವಲ್ಲದೇ ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೂ ವಿಶೇಷ ನಿಗಾ ವಹಿಸಲಾಗುತ್ತಿದೆ.

ಏರ್ಪೋರ್ಟ್ ನಲ್ಲೇ ಅವರ ಕರೋನಾ ನೆಗೆಟಿವ್ ವರದಿ ಪರಿಶೀಲಿಸಿ ಕಳುಹಿಸಲಾಗುತ್ತಿದ್ದು, ಒಂದೊಮ್ಮೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅನುಮಾನಗಳು ಕಂಡುಬಂದಲ್ಲಿ ಸ್ಥಳದಲ್ಲಿಯೇ ಕೊರೋನಾ ಪರೀಕ್ಷೆಗೆ ಒಳಪಡಿಸಲು ಏರ್ಪೋರ್ಟ್ ಅಧಿಕಾರಿಗಳಿಗೆ ಸರ್ಕಾರ ಸೂಚನೆ ರವಾನಿಸಿದೆ. ಒಟ್ಟಿನಲ್ಲಿ ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಯಾವುದೇ ಕಾರಣಕ್ಕೂ ಬೇರೆ ದೇಶಗಳಿಂದ ಸೋಂಕಿತರು ಬೆಂಗಳೂರಿಗೆ ಕಾಲಿಡದಂತೆ ಅರೋಗ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಾಗುತ್ತಿದೆ.

ಇದನ್ನೂ ಓದಿ : ವಿದೇಶದಿಂದ ಬರುವವರಿಗೆ 14 ದಿನಗಳ ಕ್ವಾರಂಟೈನ್‌ : ಅಂತರಾಷ್ಟ್ರೀಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ

ಇದನ್ನೂ ಓದಿ : ಕರ್ನಾಟಕಕ್ಕೆ ಒಮಿಕ್ರಾನ್‌ ಭೀತಿ : ಬೆಂಗಳೂರಿಗೆ ಬಂದ ಇಬ್ಬರಿಗೆ ಕೊರೊನಾ ಸೋಂಕು ದೃಢ !

( Airport High Alert, Omicron Anxiety After Corona: Special Observation on 598 People who come to Bangalore)

Comments are closed.