Swati Muttina Male Haniye Movie : ಪ್ರಬುದ್ಧ ಪ್ರೇಮಕಥೆಯ ಭಾವನಾತ್ಮಕ ಜರ್ನಿ ‘ಸ್ವಾತಿ ಮುತ್ತಿನ ಮಳೆ ಹನಿ’

ನಟ ರಾಜ್‌ ಬಿ ಶೆಟ್ಟಿ ಒಂದು ಮೊಟ್ಟೆ ಕಥೆ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು. ಇದೀಗ ನಟ ರಾಜ್‌ ಬಿ ಶೆಟ್ಟಿ ಅಭಿನಯದ ‘ಸ್ವಾತಿ ಮುತ್ತಿನ ಮಳೆ ಹನಿ’ (Swati Muttina Male Haniye Movie) ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸದ್ಯ ಸಿನಿಮಾದ ಪೋಸ್ಟ್‌ ಪ್ರೋಡಕ್ಷನ್‌ ಕೆಲಸ ಭರದಿಂದ ಸಾಗುತ್ತಿದೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳದ ಸಿನಿತಂಡ, ಇದೀಗ ಇದೊಂದು ಪ್ರಬುದ್ಧ ಪ್ರೇಮ ಕಥೆಯ ಭಾವನಾತ್ಮಕ ಜರ್ನಿ ಎಂದು ಹೇಳಿದ್ದಾರೆ.

ಸುಮಾರು ವರ್ಷಗಳಿಂದ ಸ್ಯಾಂಡಲ್‌ವುಡ್‌ನಿಂದ ದೂರ ಉಳಿದ ಮೋಹಕತಾರೆ ರಮ್ಯಾ ಈ ಸಿನಿಮಾದ ಮೂಲಕ ನಟನೆಗೆ ಕಮ್‌ ಬ್ಯಾಕ್ ಮಾಡುತ್ತಾರೆ ಎಂದು ಸುದ್ದಿಗಳು ಹರಿದಾಡಿದ್ದವು. ಇನ್ನೇನು ತಾವೇ ನಿರ್ಮಾಣ ಮಾಡಿ ನಟಿಸಬೇಕು ಎಂದು ಕೂಡ ತೀರ್ಮಾನ ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಾಯಿಸಿದ್ದು, ನಂತರ ನಟಿ ರಮ್ಯಾ ತಮ್ಮ ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಮೂಲಕ ಕೇವಲ ನಿರ್ಮಾಣ ಮಾಡಲು ನಿರ್ಧರಿಸಿದ್ದರು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಜೊತೆ ಸಿರಿ ರವಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜ್ ಬಿ ಶೆಟ್ಟಿ ಬಹುಬೇಗನೇ ಸಿನಿಮಾ ಮಾಡಿ ಮುಗಿಸಿದ್ದು, ಸದ್ಯ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಈ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿಯೇ ಹೀರೊ ಆಗಿ ನಟಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಈ ಸಿನಿಮಾ ಪೋಸ್ಟರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್‌ ಜೊತೆ ಬಾಲಾಜಿ ಮನೋಹರ್‌, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹಾ ಶರ್ಮಾ, ಜೆಪಿ ತುಮ್ಮಿನಾಡ್‌, ಗೋಪಾಲ್‌ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಸಿನಿರಂಗದಲ್ಲಿ 6 ವರ್ಷ ಪೂರೈಸಿದ ರಶ್ಮಿಕಾ ಮಂದಣ್ಣ : ಸಂತಸದ ನಡುವೆ “ಕಿರಿಕ್‌ ಪಾರ್ಟಿ” ಸಿನಿಮಾ ಮರೆತ್ರಾ ?

ಇದನ್ನೂ ಓದಿ : Naresh Pavitra Lokesh : ಪರಸ್ಪರ ‌ಚುಂಬಿಸಿ ಮದುವೆ ಡೇಟ್ ಫಿಕ್ಸ್ ಎಂದ ನರೇಶ್ ಪವಿತ್ರಾ ಲೋಕೇಶ್ ಜೋಡಿ

ಇದನ್ನೂ ಓದಿ : Kannada Bigg Boss Season 9 : ಕನ್ನಡ ಬಿಗ್‌ಬಾಸ್‌ ಸೀಸನ್‌ 9 ಗ್ಯ್ರಾಂಡ್‌ ಫಿನಾಲೆ : ಯಾರಾಗ್ತಾರೆ ವಿನ್ನರ್‌ ?

ಪ್ರವೀಣ್‌ ಶ್ರೀಯಾನ್‌ ಕ್ಯಾಮರಾ ಹಾಗೂ ಎಡಿಟಿಂಗ್ ಮಾಡುತ್ತಿದ್ದು, ಮಿಧುನ್‌ ಮುಕುಂದನ್ ಟ್ಯೂನ್ ಹಾಕಿದ್ದಾರೆ. ಅಂದ ಹಾಗೇ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಒಂದು ಪ್ರಬುದ್ಧ ಲವ್‌ಸ್ಟೋರಿ. ಇದೊಂದು ಭಾವುಕ ಪ್ರಯಾಣ ಎಂದು ಸಿನಿತಂಡ ಹೇಳಿಕೊಂಡಿದೆ. ಈ ಭಾವುಕ ಜರ್ನಿಯನ್ನು ಹೇಗಿರುತ್ತೆ ಅನ್ನೋದನ್ನು ಹೇಳುವುದಕ್ಕೇ ಈಗಾಗಲೇ ಸಿನಿಮಾದ ಕೆಲವು ಭಾವನಾತ್ಮಕ ಫೋಟೊಗಳನ್ನು ಸಿನಿತಂಡ ರಿಲೀಸ್ ಮಾಡಿದೆ.

Swati Muttina Male Haniye Movie is an emotional journey of a mature love story.

Comments are closed.