ಕೋಟ ಶ್ರೀನಿವಾಸ ರಾವ್‌ ನಿಧನ : ಖ್ಯಾತ ನಟನಿಗೆ ಆಗಿದ್ದೇನು ?

ತೆಲುಗು ಸಿನಿಮಾ ರಂಗದ ಖ್ಯಾತ ನಟ ಕೋಟ ಶ್ರೀನಿವಾಸ ರಾವ್ (Kota Srinivas Rao) ಅವರು ಇಂದು ಮುಂಜಾನೆ (ಜುಲೈ 13, 2025) ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕೋಟ ಶ್ರೀನಿವಾಸ ರಾವ್ ಅವರು ತೆಲುಗು ಚಿತ್ರರಂಗದಲ್ಲಿ ತಮ್ಮ ಖಳನಾಯಕ, ಪೋಷಕ ಹಾಗೂ ಹಾಸ್ಯ ಪಾತ್ರಗಳ ಮೂಲಕ ಮನೆಮಾತಾಗಿದ್ದರು. ಅವರು 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ಕೋಟ ಶ್ರೀನಿವಾಸ ರಾವ್‌ ಅವರು ಜುಲೈ 10, 1942 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕಂಕಿಪಾಡುವಿನಲ್ಲಿ ಜನಿಸಿದರು. ತಂದೆ ಸೀತಾರಾಮಾಂಜನೇಯುಲು ವೃತ್ತಿಯಲ್ಲಿ ವೈದ್ಯರಾಗಿದ್ದರು.

ಬಾಲ್ಯದಲ್ಲಿ ತಂದೆಯಂತೆ ವೈದ್ಯನಾಗಬೇಕೆಂದು ಬಯಸಿದ್ದರೂ, ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ನಟಿಸುವ ಆಸಕ್ತಿ ಬೆಳೆಸಿಕೊಂಡರು. ಪದವಿ ಶಿಕ್ಷಣದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಪಡೆದರು.

ಸಿನಿಮಾ ರಂಗಕ್ಕೆ ಪ್ರವೇಶಿಸುವ ಮೊದಲು, ಅವರು ಸುಮಾರು 20 ವರ್ಷಗಳ ಕಾಲ ರಂಗಭೂಮಿಯಲ್ಲಿ ನಟನೆಯ ಅನುಭವ ಹೊಂದಿದ್ದರು. 1978ರಲ್ಲಿ ತೆರೆಕಂಡ ಚಿರಂಜೀವಿ ಅವರ ‘ಪ್ರಾಣಂ ಖರೀದು’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಶ್ರೀನಿವಾಸ ರಾವ್‌ ಅವರ ಪತ್ನಿ ರುಕ್ಮಿಣಿ ರಾವ್. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದರು. ಆದರೆ ಶ್ರೀನಿನಿವಾಸ ರಾವ್‌ ಅವರ ಮಗ ಕೋಟ ವೆಂಕಟ ಆಂಜನೇಯ ಪ್ರಸಾದ್ ಅಪಘಾತದಿಂದ ಮೃತಪಟ್ಟಿದ್ದ.

ಈ ಘಟನೆ ಶ್ರೀನಿವಾಸ ರಾವ್‌ ಅವರ ಮೇಲೆ ತೀವ್ರ ಪರಿಣಾಮ ಬೀರಿತ್ತು. ಅವರ ಕಿರಿಯ ಸಹೋದರ ಕೋಟ ಶಂಕರ್ ರಾವ್ ಕೂಡ ಒಬ್ಬ ನಟ. ಕೋಟ ಶ್ರೀನಿವಾಸ ರಾವ್ ಅವರು 9 ರಾಜ್ಯ ನಂದಿ ಪ್ರಶಸ್ತಿಗಳು, ‘ಕೃಷ್ಣಂ ವಂದೇ ಜಗತ್ ಗುರು’ ಚಿತ್ರಕ್ಕಾಗಿ SIIMA ಪ್ರಶಸ್ತಿ ಮತ್ತು 2015ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

ಕೋಟ ಶ್ರೀನಿವಾಸ ರಾವ್ ಅವರು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಖಳನಾಯಕ, ಪೋಷಕ ಮತ್ತು ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು.

Also Read : ಉದ್ಯಮಿಗಳಿಗೆ MSME ನೀಡಲಿದೆ ₹250 ಕೋಟಿವರೆಗೆ ಸಾಲ

Kota Srinivas Rao : ಕೋಟ ಶ್ರೀನಿವಾಸರಾವ್‌ ನಟನೆಯ ಸಿನಿಮಾಗಳು

ತೆಲುಗು ಚಲನಚಿತ್ರಗಳು:

ಆಹಾ! ನಾ ಪೆಲ್ಲಾಂಟ!!

ಕೃಷ್ಣ

ಸ್ವಾಮಿ

ನೇನು

ನಮೋ ವೆಂಕಟೇಶ

ಯಮಲೀಲಾ

ಅಲ್ಲರಿ

ಯೋಗಿ

ಯಮುಡಿಕಿ ಮೊಗುಡು

ಇಂಟ್ಲೋ ಇಲ್ಲಾಲು ವಂಟಿಂಟ್ಲೋ ಪ್ರಿಯುರಾಲು

ಹೆಲೋ ಬ್ರದರ್

ಕಿಕ್

ತಿರುಮಲ ತಿರುಪತಿ ವೆಂಕಟೇಶ

ಅಲ್ಲುಡಾ ಮಜಾಕಾ

ಲಿಟಲ್ ಸೋಲ್ಜರ್ಸ್

ರೇಸ್ ಗುರ್ರಂ

ಅಬ್ಬಾಯಿಗಾರು

ಅತ್ತಾರಿಂಟಿಕಿ ದಾರೇದಿ

ಅನ್ನಯ್ಯ

ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು

ಸನ್ ಆಫ್ ಸತ್ಯಮೂರ್ತಿ

ರೆಡಿ

Also Read : ಅಂಚೆ ಕಚೇರಿ ಯೋಜನೆ : 5 ಲಕ್ಷ ಠೇವಣಿ ಇಟ್ರೆ ಸಿಗುತ್ತೆ 10 ಲಕ್ಷ..!

ಪೆಲ್ಲೈನಾ ಕೊತ್ತಲೋ

ರಕ್ತ ಚರಿತ್ರೆ

ಛತ್ರಪತಿ

ಅಥಡು

ಆ ನಲುಗುರು

ಆಮೆ

ಬೊಮ್ಮರಿಲ್ಲು

ಸರ್ಕಾರ್

ಕನ್ನಡ ಚಲನಚಿತ್ರಗಳು:

ಕಬ್ಜ (ಅವರ ಕೊನೆಯ ಚಿತ್ರಗಳಲ್ಲಿ ಒಂದು)

ಸುವರ್ಣ ಸುಂದರಿ

ನಮ್ಮಣ್ಣ

ನಮ್ಮ ಬಸವ

ಲೇಡಿ ಕಮಿಷನರ್

ರಕ್ತ ಕಣ್ಣೀರು

ಲವ್

ಶ್ರೀಮತಿ

ಇದಲ್ಲದೆ, ಅವರು ತಮಿಳು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. 1978ರಲ್ಲಿ ತೆರೆಕಂಡ ‘ಪ್ರಾಣಂ ಖರೀದು’ ಎಂಬ ತೆಲುಗು ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅವರು 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ವಿವಿಧ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರು 2015ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.

telugu Actor Kota Srinivas Rao Dies age 83 in Hyderabad Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories