ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಕ್ರೇಜ್ ಜೋರು, ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಶರಣು!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಮುಗಿಯಲು ದಿನಗಣನೆ ಶುರುವಾಗಿದೆ. ಈ ವಾರ ಅಭಿಮಾನಿಗಳನ್ನು ಮನೆಗೆ ಕರೆಸಿದ್ದಾರೆ. ಇಂದು ಗಿಲ್ಲಿ ಅಭಿಮಾನಿಗಳು ಬಂದಿದ್ದಾರೆ. ಗಿಲ್ಲಿ ಹವಾ ಜೋರಾಗಿದೆ. ಫ್ಯಾನ್ಸ್ ಅನ್ನು ನೋಡಿ ಗಿಲ್ಲಿ ಮೌನವಾಗಿದ್ದಾರೆ. ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಶರಣು ಹೇಳಿ ಸಂತೋಷವಾಗಿದ್ದಾರೆ.
ಜೋಕರ್ ನೀನು
ಯಾವುದೇ ಸಂದರ್ಭದಲ್ಲೂ ಆಟದ ದಿಕ್ಕನ್ನು ಬದಲಾಯಿಸುವ ತಾಕತ್ತು ಇರೋದು ಜೋಕರ್ ಮಾತ್ರ ಎಂದು ಬಿಗ್ ಬಾಸ್ ಗಿಲ್ಲಿ ನಟರನ್ನು ಹೊಗಳಿದ್ದಾರೆ.
ಗಿಲ್ಲಿ ಗೆಲ್ಲೋದು ಪಕ್ಕಾ
ಇನ್ನು ಅಭಿಮಾನಿಗಳು ಗಿಲ್ಲಿಯನ್ನು ನೋಡಿ ಜೋರಾಗಿ ಕೂಗಿದ್ದಾರೆ. ಗಿಲ್ಲಿ ಈ ಬಾರಿ ಗೆಲ್ಲೋದು ಪಕ್ಕಾ ಎಂದು ಹೇಳಿದ್ದಾರೆ. ಅಭಿಮಾನಿಗಳ ಕ್ರೇಜ್ ನೋಡಿ ಗಿಲ್ಲಿಯೇ ಮನಸೋತಿದ್ದಾರೆ.
ಅಭಿಮಾನಿಗಳು ಕೊನೆ ತನಕ
ಅಭಿಮಾನಿಯೊಬ್ಬರು ಗಿಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದನ್ನು ಗಿಲ್ಲಿ ಭಾವುಕರಾಗಿದ್ದಾರೆ. ಮನಿ ಇವತ್ತು ಬರುತ್ತೆ, ನಾಳೆ ಹೋಗುತ್ತೆ. ಅಭಿಮಾನಿಗಳು ಯಾವಾಗಲು ಇರ್ತಾರೆ ಎಂದು ಗಿಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: https://kannada.newsnext.live/cinema/do-you-know-what-the-gilli-in-the-bigg-boss-house-wants/
ಪ್ರೇಕ್ಷಕರ ಮನ ಗೆದ್ದ ಗಿಲ್ಲಿ
ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಅವರೊಂದಿಗೆ ತಮಾಷೆಯ ಲವ್ ಸ್ಟೋರಿ ನಡೆಸ್ತಾ ಇದ್ದಾರೆ.ಗಿಲ್ಲಿ ನಟ ಅವರ ಹಾಸ್ಯ ಮತ್ತು ನಟನೆಯಿಂದ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ.



