ಕನ್ನಡ ಚಿತ್ರರಂಗದ ಖ್ಯಾತ ನಟ, ಅಭಿಯನ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ಐಷಾರಾಶಿ ಕ್ಯಾರವಾನ್ ಬಿಡುಗಡೆಗೊಳಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದುಬಾರಿ ಕ್ಯಾರವಾನ್ ಪೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.
ಕಿಚ್ಚ ಸುದೀಪ್ ಅವರ ಹೊಸ ಕ್ಯಾರವಾನ್ ಭಾರತೀಯ ಚಿತ್ರಂಗದಲ್ಲಿಯೇ ಹೊಸ ಸಂಚಲನವನ್ನು ಮೂಡಿಸಿದೆ. 6.5 ಕೋಟಿ ರೂಪಾಯಿ ಮೌಲ್ಯದ ಕ್ಯಾರವಾನ್ ಸ್ಯಾಂಡಲ್‌ವುಡ್‌ನ ಅತ್ಯಂತ ದುಬಾರಿ ಕ್ಯಾರವಾನ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶೇಷವಾಗಿ ಕಿಚ್ಚ ಸುದೀಪ್ ಅವರಿಗಾಗಿಯೇ ಈ ಕ್ಯಾರವಾನ್ ನಿರ್ಮಾಣ ಮಾಡಲಾಗಿದೆ. ಭಾರತದ ಖ್ಯಾತ ಆಟೋಮೊಬೈಲ್ ಡಿಸೈನರ್ ಆಗಿರುವ ದಿಲೀಪ್ ಛಾಬ್ರಿಯಾ ಅವರ ಡಿಸಿ 2 ಸಂಸ್ಥೆ ಈ ಹೊಸ ಜಿಮ್ ಮಾಡ್ಯುಲರ್ ಕ್ಯಾರವಾನ್ ನಿರ್ಮಾಣ ಮಾಡಿದೆ.
ಕಿಚ್ಚ ಸುದೀಪ್ ಅವರ ಹೊಸ ಕ್ಯಾರವಾನ್‌ನಲ್ಲಿ ಹೆಚ್ಚು ಗಮನ ಸೆಳೆದಿರುವುದು ಮುಂಭಾಗ ಹಾಗೂ ಹಿಂಭಾಗದಲ್ಲಿ ಅಳವಡಿಸಿರುವ ಕೆ ಲೋಗೋ. ಕಿಚ್ಚ ಹೆಸರಿನ ಸಿಗ್ನೇಚರ್ ವಿನ್ಯಾಸವಾಗಿದ್ದು, ಸುದೀಪ್ ತಮ್ಮ ಇತರ ಕಾರುಗಳ ಮೇಲೆಯೂ ಇದೇ ಲೋಗೋವನ್ನು ಬಳಸುತ್ತಿದ್ದಾರೆ. ಕ್ಯಾರವಾನ್ ನೋಡಿದ ಅಭಿಮಾನಿಗಳು ಸಖತ್ ಫೀದಾ ಆಗಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ನಿರ್ಮಾಣಗೊಂಡಿರುವ ಈ ಕ್ಯಾರವಾನ್ ಸದ್ಯ ಎಲ್ಲರ ಗಮನ ಸೆಳೆದಿದೆ.
Also Read: ಡಾ. ಪ್ರದೀಪ್ ಕೆಂಚನೂರುಗೆ ಅಂತಾರಾಷ್ಟ್ರೀಯ ಪ್ರಶಸ್ತಿ: ಜಾಗತಿಕ ಮಟ್ಟದಲ್ಲಿ ಗಮನಸೆಳೆದ ಕನ್ನಡ ಕಿರುಚಿತ್ರ
ಹೊಸ ಕ್ಯಾರವಾನ್‌ನಲ್ಲಿ ಅತ್ಯಾಧುನಿಕ ಸೌಲಭ್ಯದ ಜೊತೆಗೆ ಪ್ರೀಮಿಯಂ ಆಗಿರುವ ಇಂಡೋರ್ ವಿನ್ಯಾಸ, ಹೆಚ್ಚು ಆರಾಮದಾಯಕವಾಗಿ ಇರುವುದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಅಳವಡಿಸಲಾಗಿದೆ. ದೊಡ್ಡದಾದ ವಿಶ್ರಾಂತಿ ಕೊಠಡಿ, ಮಲಗುವ ಖಾಸಗಿ ಕೋಣೆ, ಪುಟ್ಟ ಕಚೇರಿ, ಮನೋರಂಜೆಯ ಸೌಲಭ್ಯಗಳ ಜೊತೆಗೆ ಕಿಚ್ಚ ಸುದೀಪ್ ಅವರ ಚಿಂತನೆಯಲ್ಲಿಯೇ ಹೊಸ ವಿನ್ಯಾಸವನ್ನು ಮಾಡಲಾಗಿದೆ. ಕಿಚ್ಚ ಸುದೀಪ್ ಅವರ ಕ್ಯಾರವಾನ್ ಸ್ಯಾಂಡಲ್‌ವುಡ್ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ.
A luxurious caravan arrives in Sandalwood Kiccha purchases a caravan worth 6 crore rupees



