Vasanthi Nalidaga Movie : ಸಿನಿಮಂದಿರಗಳಲ್ಲಿ ಎರಡನೇ ವಾರಕ್ಕೆ ಕಾಲಿಟ್ಟ “ವಾಸಂತಿ ನಲಿದಾಗ”

ಕಳೆದ ವಾರ ಸ್ಯಾಂಡಲ್‌ವುಡ್‌ನಲ್ಲಿ ಸುಮಾರು ಹತ್ತು ಸಿನಿಮಾಗಳು ತೆರೆ ಕಂಡಿದೆ. ಅದರೊಂದಿಗೆ ಪರಭಾಷೆಯ 9 ಸಿನಿಮಾಗಳು ತೆರೆ ಕಂಡಿದ್ದು (Vasanthi Nalidaga Movie) ಭಾರತೀಯ ಸಿನಿರಂಗದಲ್ಲಿ ಸಖತ್‌ ಪೈಪೋಟಿ ಉಂಟಾಗಿದೆ. ಈ ಸಂದರ್ಭದಲ್ಲಿ ಹೊಸ ಪ್ರತಿಭೆಗಳನ್ನು ಒಳಗೊಂಡ ಸಿನಿಮಾಗಳು ತೆರೆ ಕಂಡಿದ್ದು, ಇದೀಗ ಒಂದು ವಾರ ಪೂರೈಸಿರುವುದು ಅಸಾಧಾರಣವಾಗಿದೆ.

ಡಿಸೆಂಬರ್‌ 2ರಂದು ತೆರೆಕಂಡ “ವಾಸಂತಿ ನಲಿದಾಗ” ಸಿನಿಮಾ ಎರಡನೇ ವಾರಾಂತ್ಯದಲ್ಲೂ ತನ್ನ ಸ್ಥಾನವನ್ನು ಸಿನಿಮಂದಿರಗಳಲ್ಲಿ ಭದ್ರವಾಗಿಸಿಕೊಂಡಿದೆ. ಇನ್ನೂ ಈ ಸಿನಿಮಾ ಮೂರನ್ನೇ ವಾರದಲ್ಲೂ ಇನ್ನಷ್ಟು ಸಿನಿಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಾವುದೇ ಅನುಮಾನವಿಲ್ಲ. ಯುವಕರಿಂದ ಕೂಡಿದ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವ ಅಂಶಗಳನ್ನು ಒಳಗೊಂಡಿದೆ.

ಎಲ್ಲಾ ಸಿನಿರಂಗದಲ್ಲಿ ಕೇವಲ ದೊಡ್ಡ ಮಟ್ಟದ ಬಜೆಟ್‌ಗೆ ಮಾತ್ರ ಸೀಮಿತವಾಗಿರದೇ, ಹೊಸಬರ ಪ್ರಯತ್ನಗಳಿಗೂ ಇಲ್ಲಿ ಅವಕಾಶವನ್ನು ಕಲ್ಪಿಸಿದೆ. ಸಿನಿಪ್ರೇಕ್ಷಕರಿಗೆ ಸಿನಿಮಾದ ಕಥಾಹಂದರ ಇಷ್ಟವಾದರೆ ನಿಜವಾಗಲೂ ಬೆಂಬಲವನ್ನು ನೀಡುತ್ತಾರೆ. ಸಿನಿಮಾದಲ್ಲಿ ಹೊಸತನವನ್ನು ಒಳಗೊಂಡರೆ ಸಿನಿತಂಡಕ್ಕೆ ಪ್ಲಸ್‌ ಆಗುತ್ತದೆ. ಇನ್ನೂ ಈ ಸಿನಿಮಾದಲ್ಲಿ ಕಾಲೇಜಿನಲ್ಲಿ ನಡೆಯುವ ಪ್ರೇಮಕಥೆಯನ್ನು ಒಳಗೊಂಡಿದೆ. ಎಲ್ಲಾ ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಮೊದಲ ಕ್ರಶ್‌, ಮೊದಲ ಪ್ರೀತಿ, ಎಕ್ಸಾಂ ಟೆನ್ಷನ್‌, ತರಲೆ ತಮಾಷೆ ಸೇರಿದಂತೆ ಹತ್ತಾರು ವಿಷಯಗಳನ್ನು ಒಳಗೊಂಡಿರುವ ಈ ಸಿನಿಮಾ ಸಿನಿಪ್ರೇಕ್ಷಕರಿಗೆ ಸಖತ್‌ ಮನರಂಜನೆ ನೀಡುತ್ತಿದೆ.

ಇದನ್ನೂ ಓದಿ : Sharath Kumar: ತಮಿಳಿನ ಖ್ಯಾತ ನಟ ಶರತ್ ಕುಮಾರ್ ಅಸ್ವಸ್ಥ; ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Puneeth – Darshan Thoogudeepa : ಅಪ್ಪು ನೆಚ್ಚಿನ ಊರಿನಲ್ಲಿ “ಕ್ರಾಂತಿ” 2ನೇ ಹಾಡು : ತೂಗುದೀಪ್‌ ದರ್ಶನ್‌ ಘೋಷಣೆ ‌

ಇದನ್ನೂ ಓದಿ : Anirudh Controversy: ಬ್ಯಾನ್ ತೂಗುಗತ್ತಿಯಿಂದ ‘ಸೂರ್ಯವಂಶ’ ಪಾರು; ಮುನಿಸು ಮರೆತು ಒಂದಾದ ಅನಿರುದ್ಧ್- ಆರೂರು

ಇನ್ನೂ ಸಿನಿಲೋಕಕ್ಕೆ ಪ್ರಥಮವಾಗಿ ಕಾಲಿಟ್ಟ ಹೊಸಬರಿಗೆ ಅನುಭವಿ ನಟರೊಂದಿಗೆ ಕಲಿಯಲು ಸಾಕಷ್ಟು ವಿಷಯ ಸಿಗುತ್ತದೆ. ಈ ಸಿನಿಮಾದಕ್ಕು ಹೊಸ ನಟ ರೋಹಿತ್‌ ಶ್ರೀಧರ್‌ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಹೊಸನಟಿ ಜೀವಿತಾ ವಸಿಷ್ಠ, ಸುಧಾರಾಣಿ, ಸಾಯಿಕುಮಮಾರ್‌, ಭಾವನಾ ಶ್ರೀನಿವಾಸ್‌, ಸಾಧು ಕೋಕಿಲ,ರಾಘು ರಾಮನಕೊಪ್ಪ ಸೇರಿದಂತೆ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ರವೀಂದ್ರ ವಂಶಿ ನಿರ್ದೇಶಿಸಿದ್ದು, ಜೇನುಗೂಡು ಕೆ.ಎನ್.‌ಶ್ರೀಧರ್‌ ಬಂಡವಾಳ ಹೂಡಿದ್ದಾರೆ. ಇನ್ನೂ ಈ ಸಿನಿಮಾಕ್ಕೆ ಶ್ರೀ ಗುರು ಸಂಗೀತ ಸಂಯೋಜನೆಯನ್ನು ನೀಡಿದ್ದಾರೆ.

Vasanthi Nalidaga Movie enters second week in theaters

Comments are closed.