corona alert: ಕೊರೊನಾ ಆತಂಕದ ಬೆನ್ನಲ್ಲೇ ಬಿಎಂಟಿಸಿ ಪ್ರಯಾಣಿಕರಿಗೆ ಮಾಸ್ಕ್​ ಧರಿಸುವಂತೆ ಸೂಚನೆ

ಬೆಂಗಳೂರು:corona alert : ಚೀನಾದಲ್ಲಿ ಕೊರೊನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಮೀತಿಮೀರುತ್ತಿದೆ. ಹೀಗಾಗಿ ದೇಶದಲ್ಲಿಯೂ ಕೂಡ ಕೊರೊನಾ ಕುರಿತಂತೆ ಅಗತ್ಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ಕೋವಿಡ್​ ಉನ್ನತ ಮಟ್ಟದ ಸಭೆ ನಡೆಸಿದ್ದರೆ ಇತ್ತ ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೂ ಸಭೆ ನಡೆಸಲಾಗಿದ್ದು ರಾಜ್ಯ ಸರ್ಕಾರದಿಂದ ಕೋವಿಡ್​ ಕುರಿತಂತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.


ಈ ಎಲ್ಲದರ ನಡುವೆ ಇತ್ತ ಬಿಎಂಟಿಸಿ ಕೂಡ ಕೊರೊನಾ ಕುರಿತಂತೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಮುಂದಾಗಿದ್ದು ಪ್ರಯಾಣಿಕರಿಗೆ ಅಗತ್ಯ ಸೂಚನೆಗಳನ್ನು ಹೊರಡಿಸಿದೆ. ಬಿಎಂಟಿಸಿ ಸಿಬ್ಬಂದಿ ಹಾಗೂ ಬಸ್​ನಲ್ಲಿ ಸಂಚರಿಸುವ ಪ್ರಯಾಣಿಕರು ಇನ್ಮೇಲೆ ಮಾಸ್ಕ್​ ಧರಿಸಬೇಕು ಎಂದು ಬಿಎಂಟಿಸಿ ನಿರ್ದೇಶನ ನೀಡಿದೆ. ಈ ಮೂಲಕ ಯಾವುದೇ ಕೊರೊನಾ ಸೋಂಕು ಹರಡದಂತೆ ತಡೆಯಲು ಬಿಎಂಟಿಸಿ ಮುಂದಾದಂತಾಗಿದೆ.


ಇನ್ನು ಈ ವಿಚಾರವಾಗಿ ಮಾತನಾಡಿದ ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಸೂರ್ಯಸೇನ್​, ಬಿಎಂಟಿಸಿ ಬಸ್​ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾಸ್ಕ್​ ಧರಿಸುವಂತೆ ಸೂಚನೆ ನೀಡಿದ್ದೇವೆ. ನಮ್ಮ ಸಿಬ್ಬಂದಿಗೆ ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಹೇಳಿದ್ದೇವೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಹೆಚ್ಚಿನ ಬಸ್​ಗಳನ್ನು ರಸ್ತೆಗಿಳಿಸುವ ಸಿದ್ಧತೆಯಲ್ಲಿದ್ದೇವೆ. ಕಾಲ ಕಾಲಕ್ಕೆ ಬಸ್​ಗಳನ್ನು ಸ್ಯಾನಿಟೈಸ್​ ಮಾಡುತ್ತೇವೆ ಎಂದು ಹೇಳಿದ್ದಾರೆ .


ಕೊರೊನಾ ನಾಲ್ಕನೇ ಅಲೆ ಮತ್ತೆ ಆರಂಭವಾಗಬಹುದು ಎಂಬ ಆತಂಕ ದೇಶದಲ್ಲಿ ಎದುರಾಗಿದೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಈ ಸೋಂಕಿನ ಗಂಭೀರತೆ ಯಾರಿಗೂ ತಿಳಿದಿರಲಿಲ್ಲ. ಆದರೆ ಈಗ ಪ್ರತಿಯೊಬ್ಬರಿಗೂ ಕೊರೊನಾ ಅಲೆ ಬಂದರೆ ಹೇಗಿರುತ್ತೆ ಎಂಬ ಜ್ಞಾನವಿದೆ. ಹೀಗಾಗಿ ಈ ಬಾರಿ ಜನರು ಕೊರೊನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ನಿರೀಕ್ಷೆಯಿದೆ.

ಇದನ್ನು ಓದಿ : KHPT Recruitment 2023:ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ಪದವೀಧರರ ನೇಮಕಾತಿ

ಇದನ್ನೂ ಓದಿ : Jaydev Unadkat : 12 ವರ್ಷಗಳ ನಂತರ ಭಾರತ ಪರ ಟೆಸ್ಟ್ ಆಡುವ ಅವಕಾಶ, ಇದು ಸೌರಷ್ಟ್ರದ ಛಲದಂಕಮಲ್ಲನ ಕಥೆ

corona alert bmtc says passengers to wear masks compulsorily

Comments are closed.