Server problem : ಬ್ರಹ್ಮಾವರ : ಪಡಿತರ ಅಕ್ಕಿಗೆ ಸರ್ವರ್‌ ಸಮಸ್ಯೆ : 4 ದಿನಗಳಿಂದ ಕಾದು ಸುಸ್ತಾದ ಜನರು

ಬ್ರಹ್ಮಾವರ : ರಾಜ್ಯ ಸರಕಾರ 10 ಕೆಜಿ ಪಡಿತರ ವಿತರಿಸುವ ಗ್ಯಾರಂಟಿ ಯೋಜನೆಯನ್ನು (Server problem) ಘೋಷಿಸಿದೆ. ಆದರೆ ಅಕ್ಕಿಯ ಕೊರತೆಯಿಂದಾಗಿ ಯೋಜನೆ ಜಾರಿಗೆ ಬರುವುದು ಅನುಮಾನವಾಗಿದೆ. ಈ ನಡುವಲ್ಲೇ ಬ್ರಹ್ಮಾವರ ತಾಲೂಕಿನಾದ್ಯಂತ ಪಡಿತರ ಅಕ್ಕಿ ಪಡೆಯಲು ಜನರು ಕಳೆದ ನಾಲ್ಕು ದಿನಗಳಿಂದಲೂ ಪರದಾಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆಯ ಸಬೂಬು ಹೇಳುತ್ತಿದ್ದು, ಅಕ್ಕಿ ಪಡೆಯಲು ಜನರು ನ್ಯಾಯ ಬೆಲೆ ಅಂಗಡಿಯ ಮುಂದೆ ಕಾದು ಕಾದು ಹೈರಾಣಾಗಿದ್ದಾರೆ.

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ದಲ್ಲಿ 8 ಪಡಿತರ ವಿತರಣಾ ಕೇಂದ್ರದಲ್ಲಿ 8000 ಮಂದಿ ಪಡಿತರ ಕಾರ್ಡುದಾರರಿದ್ದು, ಇಲ್ಲಿನ ಬಹತೇಕ ಕೇಂದ್ರದಲ್ಲಿ ಕಳೆದ 5 ದಿನದಿಂದ ಪಡಿತರ ಸಿಗದೆ ಜನರು ಪರದಾಡುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಜನರು ನ್ಯಾಯಬೆಲೆ ಅಂಗಡಿಗಳಿಗೆ ಆಗಮಿಸುತ್ತಿದ್ದು, ಸಂಜೆಯ ವರೆಗೂ ಕಾದು ಕುಳಿತಿದ್ರು ಅಕ್ಕಿ ಸಿಗುತ್ತಿಲ್ಲ. ಸರ್ವರ್‌ ಸಮಸ್ಯೆಯಿಂದಾಗಿ ವೃದ್ದರು, ಮಹಿಳೆಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

70 ವರ್ಷ ಪ್ರಾಯದ ಸುನಂದ ಭಟ್ ಎಂಬವರ ಮನೆ ಪಡಿತರ ಕೇಂದ್ರದಿಂದ ಸಾಕಷ್ಟು ದೂರದಲ್ಲಿದ್ದು, ಪ್ರತಿನಿತ್ಯವೂ ಆಟೋದಲ್ಲಿ ಪಡಿತರ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಆದರೆ ಬೆಳಗ್ಗೆಯಿಂದ ಸಂಜೆಯವರೆಗೂ ಕಾದು ಕಾದು ಸುಸ್ತಾಗಿ ವಾಪಾಸ್‌ ಹೋಗುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. ಬ್ರಹ್ಮಾವರ ಮುಖ್ಯ ಕಛೇರಿಯಲ್ಲಿ 2500 ಮಂದಿ ಪಡಿತರ ಕಾರ್ಡ್ ಹೊಂದಿದ್ದು ಈಗಾಗಲೇ 70 ಶೇಕಡಾರಷ್ಟು ಮಂದಿ ಪಡಿತರ ಕೊಂಡೊಯ್ದಿದ್ದಾರೆ. ಆದರೆ ಉಳಿದ ದಿನಗಳಲ್ಲಿ ಜನರು ಪಡಿತರ ಪಡೆಯದೇ ಇದ್ರೆ ಮತ್ತೆ ಸಿಗೋದಿಲ್ಲ ಎಂಬ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : MLA Rohit Reddy Car Accident : ಕಾರ್ಕಳದಲ್ಲಿ ತೆಲಂಗಾಣ ಶಾಸಕ ರೋಹಿತ್‌ ರೆಡ್ಡಿ ಕಾರು ಅಪಘಾತ

ಇದನ್ನೂ ಓದಿ : Udupi power cut : ಉಡುಪಿ ಜಿಲ್ಲೆಯಲ್ಲಿ ಜೂನ್ 26 ರಿಂದ 28ರ ವರೆಗೆ ವಿದ್ಯುತ್ ವ್ಯತ್ಯಯ

ಕೇವಲ ಬ್ರಹ್ಮಾವರ ಮಾತ್ರವಲ್ಲದೇ ಬಾರಕೂರು, ಕೋಟ , ಸಾಲಿಗ್ರಾಮ ಸೇರಿದಂತೆ ಇದೇ ರೀತಿ ಸರ್ವರ್ ಸಮಸ್ಯೆಯ ನೆಪವೊಡ್ಡಿ ಜನರು ನಿರಾಸೆಯಿಂದಲೇ ಮನೆಗೆ ವಾಪಾಸಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದ್ರೆ ಜನರ ಬೀದಿಗಿಳಿದು ಹೋರಾಟ ಮಾಡಿದ್ರೂ ಅಚ್ಚರಿಯಿಲ್ಲ.

Brahmavar: Server problem for ration rice: People who are tired of waiting for 4 days

Comments are closed.