ಪರಶುರಾಮ ಮೂರ್ತಿ ವಿವಾದ – ಕಾಂಗ್ರೆಸ್‌ನ ಕಟ್ಟುಕಥೆಗೆ ಸೋಲು : ಶಾಸಕ ಸುನಿಲ್‌ ಕುಮಾರ್‌

ಕಾರ್ಕಳ : ಕಾರ್ಕಳದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್‌ ಪಾರ್ಕ್ ( Parashurama Theme Park Controversy) ಕುರಿತ ಕಾಂಗ್ರೆಸ್‌ ಆರೋಪ ಸುಳ್ಳಾಗಿದೆ ಅನ್ನೋದು ಪೊಲೀಸರ ಚಾರ್ಜ್‌ಶೀಟ್‌ ಮೂಲಕ ಗೊತ್ತಾಗಿದೆ.

ಕಾರ್ಕಳ ಕಾಂಗ್ರೆಸ್‌ನ ಆರೋಪವನ್ನು ವಿಮರ್ಷೆ ಮಾಡದೆ ಕಾಂಗ್ರೆಸ್‌ ನಾಯಕರು, ಮಂತ್ರಿಗಳ ಸುಳ್ಳುಕಥೆಗೆ ಸೋಲಾಗಿದೆ ಎಂದು ಕಾರ್ಕಳ ಶಾಸಕರಾದ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ, ವಿಪಕ್ಷಗಳ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಕಟ್ಟಿ ಹಾಕುವ, ತನಿಖೆಯ ನೆಪದಲ್ಲಿ ಟಾರ್ಗೆಟ‌ ಮಾಡುವ ಕೆಲಸ ರಾಜ್ಯದಾದ್ಯಂತ ನಡೆಯುತ್ತಿದೆ.

ಇದರ ಭಾಗವೇ ಪರಶುರಾಮ ಥೀಮ್‌ ಪಾರ್ಕ್ ಎಂದಿದ್ದಾರೆ. ಪರಶುರಾಮ ಥೀಮ್‌ ಪಾರ್ಕ್‌ ನನ್ನ ಕನಸಿನ ಯೋಜನೆ. ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡೋದು ನಮ್ಮ ಉದ್ದೇಶವಾಗಿತ್ತು. ಹೊಸ ಪರಿಕಲ್ಪನೆಯೊಂದಿಗೆ ಯೋಜನೆ ಆರಂಭಗೊಂಡಿತ್ತು.

ಕಾಂಗ್ರೆಸ್‌ ನಾಯಕರ ದ್ವೇಷದ ರಾಜಕಾರಣ, ಕಾರ್ಕಳದ ಅಭಿವೃದ್ದಿಯನ್ನು ಸಹಿಸಲಾರದ ಕಾಂಗ್ರೆಸ್‌ ನಾಯಕರು ಪರಶುರಾಮನ ಮೂರ್ತಿಯನ್ನು ಫೈಬರ್.. ಫೈಬರ್‌ ಎಂದು ಅಪಪ್ರಚಾರ ಮಾಡಿದ್ದರು.

ಇಡೀ ರಾಜ್ಯದಾದ್ಯಂತ ಪರಶುರಾಮನದ್ದು ಫೈಬರ್‌ ಮೂರ್ತಿ ಅಂತಾನೇ ಸಷ್ಟಿ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಈ ಯೋಜನೆಯನ್ನು ವ್ಯವಸ್ಥಿತವಾಗಿ ಹಾಳು ಮಾಡಿತ್ತು ಎಂದು ಕಿಡಿಕಾರಿದ್ದಾರೆ.

Also Read : ಕಾರ್ಕಳ ಪ್ರವಾಸೋದ್ಯಮಕ್ಕೆ ಹೊಡೆತ ಕೊಟ್ಟ ಕಾಂಗ್ರೆಸ್‌ ನಾಯಕರ ಆ ಒಂದು ಸುಳ್ಳು ..!

ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಆಗಿದ್ರೆ, ಅನುಮಾನ ಇದ್ರೆ ತನಿಖೆ ಮಾಡಿ ಎಂದು ಆವತ್ತು ಹೇಳಿದ್ದೆ. ಇವತ್ತೂ ಕೂಡ ಹೇಳುತ್ತಿದ್ದೇನೆ. ಆದರೆ ಅಪಪ್ರಚಾರದ ಮೂಲಕ ಕಾರ್ಕಳಕ್ಕೆ ಅಪಮಾನ ಮಾಡಬೇಡಿ. 2 ವರ್ಷಗಳಿಂದ ಕಾರ್ಕಳದ ಅಭಿವೃದ್ದಿ ಕುಂಠಿತವಾಗಿದೆ.

ಕಾಂಗ್ರೆಸ್‌ನಿಂದ ಎರಡೂವರೆ ವರ್ಷ ಕಾಲಹರಣ

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಪತ್ರ ಬರೆದಿದ್ದೆ. ಪರಶುರಾಮನ ಥೀಮ್‌ ಪಾರ್ಕ್‌ ವಿಚಾರದಲ್ಲಿ ತನಿಖೆ ಮಾಡಿ, ಪಾರ್ಕ್‌ ಅನ್ನು ಪ್ರವಾಸೋದ್ಯಮಕ್ಕೆ ಬಿಟ್ಟುಕೊಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದೆ. ಆದರೂ ಕಾಂಗ್ರೆಸ್‌ ನಾಯಕರು ಕಾಲಹರಣ ಮಾಡಿದ್ದಾರೆ.

ಕಾಂಗ್ರೆಸ್‌ ನಾಯಕರು ಫೈಬರ್‌ ಮೂರ್ತಿ ಎಂದು ಅಪಪ್ರಚಾರ ಮಾಡಿದ್ದಾರೆ. ಆದರೆ ಪೊಲೀಸರ ಚಾರ್ಜ್‌ಶೀಟ್‌ ನಲ್ಲಿ ಫೈಬರ್‌ ಅಲ್ಲಾ ಹಿತ್ತಾಳೆ ಎಂದಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಸಾವಿರ ಪುಟದ ಚಾರ್ಜ್‌ಶೀಟ್‌ ಅನ್ನು ಸಂಪೂರ್ಣವಾಗಿ ಓದಿಲ್ಲ ಎಂದಿದ್ದಾರೆ.

ಪರಶುರಾಮನ ಮೂರ್ತಿ ವಿಚಾರದಲ್ಲಿ ತನಿಖೆ ಮಾಡಬೇಕು ಎಂದಾಗ, ಸ್ಥಳೀಯ ಕಾಂಗ್ರೆಸ್‌ ನಾಯಕರು ಬೆಂಗಳೂರಿನಲ್ಲಿ ಇರುವ ಶಿಲ್ಪಿಯ ಗ್ಯಾರೇಜ್‌ ತನಕ ಹೋಗಿದ್ದರು.

ಮೂರ್ತಿ ಕಳ್ಳತನ ಆಗಿದೆ ಅಂತಾ ಆರೋಪ ಮಾಡಿ ರಸ್ತೆಗೆ ಮಣ್ಣು ಹಾಕಿದ್ದು ಕೂಡ ಕಾಂಗ್ರೆಸ್‌ ನಾಯಕರು ಎಂದು ಕಿಡಿಕಾರಿದ್ದಾರೆ.

Also Read : ಕಾರ್ಕಳ ಪರಶುರಾಮನ ಮೂರ್ತಿ ಹಿತ್ತಾಳೆ, ಫೈಬರ್‌ ಅಂದವರಿಗೆ ಹಿನ್ನೆಡೆ : ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಬಾಕಿ ಹಣ ತಕ್ಷಣ ಬಿಡುಗಡೆ ಮಾಡಿ : ಸುನಿಲ್‌ ಕುಮಾರ್‌ ಆಗ್ರಹ

ಬಿಜೆಪಿ ಸರಕಾರದ ಅವಧಿಯಲ್ಲಿ ಬಿಡುಗಡೆ ಆಗಿರುವ ಹಣವನ್ನು ಕಾಂಗ್ರೆಸ್‌ ಸರಕಾರ ತಕ್ಷಣ ಬಿಡುಗಡೆ ಮಾಡಬೇಕು. ಪರಶುರಾಮ ಥೀಮ್‌ ಪಾರ್ಕ್‌ ಅನ್ನು ಪ್ರವಾಸೋದ್ಯಮಕ್ಕೆ ಬಿಟ್ಟುಕೊಡಬೇಕು.

ಸಾರ್ವಜನಿಕರು ಕಾಂಗ್ರೆಸ್‌ ನಾಯಕರ ಸುಳ್ಳು ಆರೋಪಕ್ಕೆ ಬೆಲೆ ಕೊಡುವುದಿಲ್ಲ. ಕಾರ್ಕಳದ ಜನತೆ ಪ್ರವಾಸೋದ್ಯಮವನ್ನು ಬಯಸುತ್ತಿದ್ದಾರೆ. ಪರಶುರಾಮ ಥೀಮ್‌ ಪಾರ್ಕ್‌ ಮೂಲಕ ಇಡೀ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಬೆಳೆಯ ಬೇಕಾಗಿದೆ ಎಂದಿದ್ದಾರೆ.

ಕಾರ್ಕಳದಲ್ಲಿ ಪರಶುರಾಮ ಮೂರ್ತಿ ವಿವಾದವನ್ನು ಜೀವಂತವಾಗಿ ಇಡುವ ಕಾರ್ಯವನ್ನು ಕಾಂಗ್ರೆಸ್‌ ಮಾಡಿದೆ. ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೇ, ಕಾರ್ಕಳಕ್ಕೆ ಬಂದು ಮುಂದಿನ ಚುನಾವಣೆಯ ವರೆಗೆ ಪರಶುರಾಮನ ಥೀಮ್‌ಪಾರ್ಕ್‌ ಪೂರ್ಣಗೊಳಸುವುದು ಬೇಡಾ ಎಂದಿದ್ದರು.

ಸರಕಾರಕ್ಕೆ ಥೀಮ್‌ ಪಾರ್ಕ್‌ ಕಾಮಗಾರಿ ಪೂರ್ಣಗೊಳಿಸಲು ಮನಸ್ಸೇ ಇಲ್ಲಾ. ಪರಶುರಾಮನನ್ನು ಕೊಲೆ ಮಾಡಿದ್ದೇವೆ ಅನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್‌ ನಾಯಕರು ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರು ಮಾಡಿದ್ದನ್ನು ಕಾರ್ಕಳದ ಜನತೆ ಖಂಡಿತಾ ಒಪ್ಪುವುದಿಲ್ಲ ಎಂದಿದ್ದಾರೆ.

ಪರಶುರಾಮ ಥೀಮ್‌ ಪಾರ್ಕ್‌ ಪೂರ್ಣಗೊಳಿಸಿ ಅದನ್ನು ಪ್ರವಾಸೋದ್ಯಮಕ್ಕೆ ಬಿಟ್ಟುಕೊಡಬೇಕು. ಸರಕಾರ ವಿಪಕ್ಷಗಳನ್ನು ಟಾರ್ಗೇಟ್‌ ಮಾಡುವುದನ್ನು ನಿಲ್ಲಿಸಬೇಕು. ನಾಳೆ ನಮ್ಮ ಸರಕಾರ ಕೂಡ ಬರುತ್ತದೆ.

ಸುಳ್ಳು ಆರೋಪದ ಮೂಲಕ ಅಭಿವೃದ್ದಿಗೆ ತೊಡಕು ಮಾಡುವುದು ಸರಿಯಲ್ಲ. ನಾನು ಲೋಹ ತಜ್ಞ ಅಲ್ಲ, ಗುಣಮಟ್ಟದಲ್ಲಿ ಲೋಪ ಆಗಿದ್ರೆ ನೀವು ಯಾವುದೇ ರೀತಿಯ ತನಿಖೆಯನ್ನು ಬೇಕಾದ್ರೂ ಮಾಡಿ.

ಆದರೆ ಸರಕಾರ ಥೀಮ್‌ ಪಾರ್ಕ್‌ಗೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಖು. ಇದು ಪ್ರವಾಸೋದ್ಯಮಕ್ಕೆ ತೆರೆದು ಕೊಳ್ಳಲೇ ಬೇಕು ಎಂದಿದ್ದಾರೆ.

Parashurama Theme Park Controversy : ಬಿಕ್ಷೆ ಬೇಡಿಯಾದ್ರೂ ಥೀಮ್‌ ಪಾರ್ಕ್‌ ಪೂರ್ಣ ಮಾಡ್ತೇವೆ

ಕಾಂಗ್ರೆಸ್‌ ನಾಯಕರು ಪದೇ ಪದೇ ಪರಶುರಾಮನ ಮೂರ್ತಿಯ ವಿಚಾರದಲಿ ಒಂದೊಂದು ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಒಮ್ಮೆ ಸಿಮೆಂಟ್‌ ಮೂರ್ತಿ ಅಂದ್ರು, ನಂತ ಪ್ಲಾಸ್ಟಿಕ್‌ ಮೂರ್ತಿ ಅಂದ್ರೂ, ಮತ್ತೊಮ್ಮೆ ಪ್ಲಾಸ್ಟಿಕ್‌ ಅಲ್ಲಾ ಫೈಬರ್‌ ಅಂದ್ರು, ಕೊನೆಗೆ ಜಿಎಸ್‌ಟಿ ಸರಿಯಿಲ್ಲ ಅಂದ್ರು.

ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ‌ ಪರಶುರಾಮ ಥೀಮ್‌ ಪಾರ್ಕ್‌ ಪೂರ್ಣಗೊಳಿಸಲು ಮನಸ್ಸಿಲ್ಲದಿದ್ರೆ , ಸಾರ್ವಜನಿಕರಿಗೆ ಅದನ್ನು ಬಿಟ್ಟು ಕೊಡಲಿ, ನಾವು ಭಿಕ್ಷೆ ಬೇಡಿ ಆದ್ರೂ ಪರಶುರಾಮ ಥೀಮ್‌ ಪಾರ್ಕ್‌ ಅನ್ನು ಪೂರ್ಣಗೊಳಿಸುತ್ತೇವೆ. ಕಾರ್ಕಳದ ಜನತೆ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದರೆ.

Parashurama Theme Park Controversy : ಆಗ್ರಿಮೆಂಟ್‌ ಮಾಡಿದ್ದು ಜಿಲ್ಲಾಡಳಿತ, ನಿರ್ಮಿತಿ ಕೇಂದ್ರ

ಪರಶುರಾಮ ಥೀಮ್‌ ಪಾರ್ಕ್‌ ವಿಚಾರದಲ್ಲಿ ಆಗ್ರಿಮೆಂಟ್‌ ಮಾಡಿದ್ದು ಉಡುಪಿ ಜಿಲ್ಲಾಡಳಿತ ಹಾಗೂ ನಿರ್ಮಿತಿ ಕೇಂದ್ರ. ಪರಶುರಾಮ ಥೀಮ್‌ ಪಾರ್ಕ್‌ ವಿಚಾರದ ಯಾವುದೇ ತನಿಖೆಯಲ್ಲಿಯೂ ನಾನು ಹಸ್ತಕ್ಷೇಪ ಮಾಡುವುದಿಲ್ಲ.

ಆದರೆ ಮೂರ್ತಿ ಫೈಬರ್‌ದಲ್ಲ ಹಿತ್ತಾಳೆಯದ್ದು ಅನ್ನೋ ತನಿಖೆಯಿಂದ ಬಯಲಾಗಿದೆ. ಗುಣಮಟ್ಟದಲ್ಲಿ ಲೋಪ ಆಗಿದ್ರೆ, ಯಾವ ಲೋಹದಿಂದ ಮೂರ್ತಿ ಮಾಡಬೇಕು ಅನ್ನೋದು ತನಿಖೆ ಆಗಲಿ. ಈಗಾಗಲೇ ಎರಡೂವರೆ ವರ್ಷ ಪ್ರವಾಸೋದ್ಯಮ ಸತ್ತು ಹೋಗಿದೆ.

ಇದು ಸರಕಾರದ ಯೋಜನೆ. ವಿವಿಧ ಇಲಾಖೆಗಳಿಂದ 14 ಕೋಟಿ ರೂಪಾಯಿಯನ್ನು ಯೋಜನೆಗೆ ನೀಡಿದ್ದೇವೆ. ಯಾವ ವ್ಯತ್ಯಾಸ ಆದ್ರೂ ತನಿಖೆ ಮಾಡಿ, ಎಷ್ಟು ಬೇಕಾದ್ರೂ ತನಿಖೆ ಮಾಡಿ.

ಯಾವ ಲೋಹದಿಂದ ಮೂರ್ತಿ ಮಾಡಿದ್ದಾರೆ ಅನ್ನೋದನ್ನು ಕಂಡು ಹಿಡಿಯೋಕೆ ಎರಡೂವರೆ ವ್ಷ ಬೇಕಾ ? ಎಂದು ಸುನಿಲ್‌ ಕುಮಾರ್‌ ಅವರು ಪ್ರಶ್ನಿಸಿದ್ದಾರೆ.

Karkala Parashurama Theme Park Controversy MLA Sunil Kumar first Reaction in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories