ಮಲ್ಪೆ ಬೀಚ್‌: ಸುಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

ಉಡುಪಿ : ಮಲ್ಪೆ ಸಮುದ್ರ ತೀರಕ್ಕೆ ಪ್ರವಾಸಕ್ಕೆಂದು ಬಂದಿದ್ದವರು ಸಮುದ್ರ ತೀರದಲ್ಲಿ ಆಟವಾಡುತ್ತಾ ಕುಳಿತುಕೊಂಡಿದ್ದರು. ಈ ವೇಳೆಯಲ್ಲಿ ಸಮುದ್ರದ ಅಲೆ ಮೂವರನ್ನು ಕೊಚ್ಚಿಕೊಂಡು ಹೋಗಿದೆ. ಈ ವೇಳೆಯಲ್ಲಿ ಸಮುದ್ರ ಪಾಲಾಗುತ್ತಿದ್ದ ಮೂವರನ್ನು ರಕ್ಷಿಸಲಾಗಿದೆ.

ಶಿವಮೊಗ್ಗದ ತರಿಕೆರೆ ನಿವಾಸಿ ಕಿರಣ್‌ (19 ವರ್ಷ), ಕಾಶಿಪುರ ನಿವಾಸಿಗಳಾದ ನಿತಿನ್‌ (19 ವರ್ಷ ) ಮತ್ತು ಮಂಜುನಾಥ್‌ (19 ವರ್ಷ) ಎಂಬವರೇ ರಕ್ಷಣೆಗೆ ಒಳಗಾದವರು. ಶಿವಮೊಗ್ಗದಿಂದ ಸುಮಾರು 35 ಮಂದಿ ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರವಾಸಕ್ಕೆಂದು ಮಲ್ಪೆಯ ಸಮುದ್ರ ತೀರಕ್ಕೆ ಬಂದಿದ್ದಾರೆ. ಎಲ್ಲರೂ ಸೇರಿಕೊಂಡು ಬೀಚ್‌ ನಲ್ಲಿ ಸಮಯ ಕಳೆದಿದ್ದಾರೆ.

ಆದರೆ ಕೆಲವು ವಿದ್ಯಾರ್ಥಿಗಳು ಸಮುದ್ರದ ನೀರಿನಲ್ಲಿ ಇಳಿದು ಆಟವಾಡುವುದಕ್ಕೆ ಆರಂಭಿಸಿದ್ದಾರೆ. ಸಮುದ್ರ ಪ್ರಕ್ಷುಬ್ದವಾಗಿದ್ದು, ಭಾರೀ ಅಲೆಯೊಂದು ಅಪ್ಪಳಿಸತ್ತು. ಮೂವರು ವಿದ್ಯಾರ್ಥಿಗಳನ್ನು ಕೊಚ್ಚಿಕೊಂಡು ಹೋಗಿತ್ತು. ಈ ವೇಳೆಯಲ್ಲಿ ಅಲ್ಲಿದ್ದ ವಿದ್ಯಾರ್ಥಿಗಳು ಕೂಗಿಕೊಂಡಿದ್ದಾರೆ. ಕೂಡಲೇ ಬೀಚ್‌ ನಲ್ಲಿದ್ದ ಜೀವ ರಕ್ಷಕ ಸಿಬ್ಬಂದಿಗಳು ಸಮುದ್ರಕ್ಕೆ ಇಳಿದು ಮೂವರು ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದಲೂ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದ್ರೀಗ ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರ ಮೇಲಿನ ನಿರ್ಬಂಧ ತೆರವಾಗಿರುವ ಹಿನ್ನೆಲೆಯಲ್ಲಿ ಸಮುದ್ರ ಕಿನಾರೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಹೀಗೆ ಬಂದ ಪ್ರವಾಸಿಗರು ಮೈ ಮರೆಯುತ್ತಿರುವುದು ದುರಂತಕ್ಕೆ ಕಾರಣವಾಗುತ್ತಿದೆ.

ಇದನ್ನೂ ಓದಿ : ಇನ್ಮುಂದೆ ಕಟ್ಟಡ ನಿರ್ಮಾಣಕ್ಕಿಲ್ಲ ಮರಳಿನ ಸಮಸ್ಯೆ : ಗ್ರಾಮೀಣ ಜನರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಇದನ್ನೂ ಓದಿ : ಮದುವೆಯಲ್ಲಿ ಬೋಳಿಸುತ್ತಾರೆ ವಧುವಿನ ಕೂದಲು ! ಇಲ್ಲಿನ ಜನರದ್ದು ವಿಚಿತ್ರ ಸಂಪ್ರದಾಯ

( Malpe : Protection of three tourists drowning in beach )

Comments are closed.