ಮತ್ತೆ ಚರ್ಚೆಗೆ ಬಂದಿದೆ ಪಡುಮಲೆಯಲ್ಲಿ ಕೋಟಿ- ಚೆನ್ನಯರು ಇಳಿದುಹೋದ ಮೆಟ್ಟಿಲುಗಳು..!!!

ಪಡುಮಲೆ : ತುಳುನಾಡಿನಲ್ಲಿ ಲಕ್ಷಾಂತರ ಭಕ್ತರ ಆರಾಧನೆಗೆ ಪಾತ್ರವಾಗಿರುವ ಕೋಟಿ-ಚೆನ್ನಯರ ಕುರಿತಂತೆ ಚರ್ಚೆಯೊಂದು ಆರಂಭವಾಗಿದೆ. ಕೋಟಿ-ಚೆನ್ನಯರು ಪಡುಮಲೆಯಲ್ಲಿ ಇಳಿದು ಹೋದ ಮೆಟ್ಟಿಲುಗಳ ವಿಷಯದ ಕುರಿತಂತೆ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ನಡೆಯುತ್ತಿದೆ.

ರಾಜ ಬಳ್ಳಾಳನೊಂದಿಗೆ ವಾಗ್ವಾದ ನಡೆದ ನಂತರ ನಾವು ಪಡುಮಲೆಗೆ ಇನ್ನು ಕಾಲಿಡುವುದಿಲ್ಲ ಎಂದು ಹೇಳಿ ಪ್ರತಿಜ್ಞೆ ಮಾಡಿ ಮೆಟ್ಟಿಲಿಂದ ಇಳಿದು ಹೋದ ಬಗ್ಗೆ ಚರ್ಚೆ ನಡೆಯುತ್ತಿದೆ.

ಬಾರ್ ಡ್ ಮುಂಗೇ ಬನ್ನಗ, ಪುಚ್ಚಿಗ್ ಕುಂಬು ಬಣ್ಣಗ, ಪಡುಮಲೆ ಬೀರಮಲೆ ಓ೦ಜಾ ನಗ ಇಂಕ್ಲಲ್ ಪಡುಮಲೆ ಬರಪ್ಪ ಎಂದು ಹೇಳಿ ಪಡುಮಲೆಯಿಂದ ಕೋಟಿ- ಚೆನ್ನಯರು ಹೊರಡು ತ್ತಾರೆ. ಹೊರಟು ಹೋದ ಮೆಟ್ಟಿಲುಗಳು ಇಂದಿಗೂ ಪಡುಮಲೆಯಲ್ಲಿ ಜೀವಂತ ಕುರುಹು ಗಳಾಗಿ ನಿಂತಿವೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಐತಿಹಾಸಿಕ ದಾಖಲೆಗಳಿರುವ ಹಾಗೂ ಪಾಡ್ದನ ಗಳಲ್ಲಿ ಉಲ್ಲೇಖ ಗೊಂಡಿರುವ ಈ ವಿಷಯವನ್ನು ತಿರುಚಿ ಪಡುಮಲೆಯಲ್ಲಿ ಗರಡಿ ಯನ್ನು ಹೇಗೆ ಕಟ್ಟುತ್ತಾರೆ ಎಂಬುದನ್ನು ಪ್ರಶ್ನಿಸಿದ್ದಾರೆ.

ಬಳ್ಳಾಳ ರಾಜನಿಂದ ಆಕ್ರೋಶಗೊಂಡು ಕೋಟಿ-ಚೆನ್ನಯರು ಪಡುಮಲೆಯಿಂದ ಇಳಿದು ಹೋದವ ರು. ಅಂತಹ ಸಂದರ್ಭದಲ್ಲಿ ಮತ್ತೆ ಪಡುಮಲೆಯಲ್ಲಿ ರಾಜರ ದೌರ್ಜನ್ಯ ದಬ್ಬಾಳಿಕೆಯನ್ನು ತಿರುಚಿ, ಬೇರೆ ರೀತಿಯ ಇತಿಹಾಸವನ್ನು ಹೇಳ ಹೊರಟಿರುವುದು ಸರಿಯೇ ಎಂದು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಳ್ಳಾಳ ಕೊಟ್ಟ ಮಾತಿನಂತೆ ನಡೆಯದ ಕಾರಣ ಕೋಟಿ ಚೆನ್ನಯರು ಪಡುಮಲೆಯಿಂದ ಇಳಿದು ಹೋದರು ಎಂಬುದು ಅಷ್ಟೇ ಸತ್ಯ. ಆ ಸತ್ಯವನ್ನು ತಿರುಚುವುದು ಸರಿಯಲ್ಲವೆಂದು, ಹಲವರು ಮಂದಿ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣ ದಲ್ಲಿ ವ್ಯಕ್ತಪಡಿಸಿದ್ದಾರೆ.

ಇತಿಹಾಸವನ್ನು ತಿರುಚುವ ಈ ಕ್ರಮ ಒಳ್ಳೆಯದಲ್ಲ ಎಂಬುದು ಹಲವಾರು ಭಕ್ತರ ಅನಿಸಿಕೆ. ಕೋಟಿ – ಚೆನ್ನಯರ ಇತಿಹಾಸ, ಐತಿಹಾಸಿಕ ದಾಖಲೆಗಳು ನಮ್ಮ ಕಣ್ಣ ಮುಂದೆ ಗೋಚರವಾಗು ತ್ತಿರುವ ಈ ಸಂದರ್ಭದಲ್ಲಿ, ಅದನ್ನು ತಿರುಚುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಹಲವರ ಪ್ರಶ್ನೆ.

Comments are closed.