ಆಸ್ಪತ್ರೆಯಲ್ಲಿ ಹಾಸಿಗೆ ಇದೆ….ಆಕ್ಸಿಜನ್ ಇಲ್ಲ…! ಸಿಲಿಕಾನ ಸಿಟಿಯಲ್ಲಿ ಕೊರೋನಾ ಸೋಂಕಿತರ ಉಸಿರು ಕಸಿಯುತ್ತಿದೆ ಕೊರತೆ…!!

ಬೆಂಗಳೂರು:  ಕೊರೋನಾ ಎರಡನೇ ಅಲೆಗೆ ದೇಶವೇ ನಲುಗಿ ಹೋಗಿದೆ. ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಲಕ್ಷದ ಗಡಿ ದಾಟುತ್ತಿದೆ. ಸಿಲಿಕಾನ ಸಿಟಿಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆ ಇದ್ದರೂ ಆಕ್ಸಿಜನ್ ಕೊರತೆ ಸೋಂಕಿತರ ಉಸಿರು ಕಸಿಯುತ್ತಿದೆ.

ಕೋವಿಡ್ ಪೀಡಿತರು ಗಂಭೀರ ಲಕ್ಷಣಗಳು ಇಲ್ಲದೇ ಇದ್ದಲ್ಲಿ ಮನೆಯ ಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಈ ಆದೇಶದಂತೆ ನಗರದಲ್ಲಿ ಶೇಕಡಾ 90 ರಷ್ಟು ಜನರು ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಾ ಇರುವವರಿಗೂ ಆಕ್ಸಿಜನ್ ಬೆಡ್ ಒದಗಿಸಲಾಗದೇ ಸರ್ಕಾರ ಪರದಾಡುತ್ತಿದ್ದು, ರೋಗಿಗಳು ಸಾವಿನ ಮನೆ ಸೇರುತ್ತಿದ್ದಾರೆ.

ನಗರದಲ್ಲಿ ಅಂದಾಜು 5 ಸಾವಿರಕ್ಕೂ ಅಧಿಕ ಆಸ್ಪತ್ರೆಗಳಿವೆ. ಈ ಪೈಕಿ ಅಪೋಲೋ, ಪೋರ್ಟಿಸ್, ಜೈನ್ ಸೇರಿದಂತೆ ಕೆಲವೇ ಕೆಲವು ಆಸ್ಪತ್ರೆಗಳು ಆಕ್ಸಿಜನ್ ಸ್ಟೋರೇಜ್ ಹೊಂದಿವೆ. ಉಳಿದ ಆಸ್ಪತ್ರೆಗಳು ದಿನ ಪೊರೈಕೆಯಾಗುವ ಆಕ್ಸಿಜನ್ ಅವಲಂಬಿಸಿದೆ. ಹೀಗಾಗಿ ಈಗ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದಂತೆ ದಿಢೀರ್ ಆಕ್ಸಿಜನ್ ಅಭಾವ ಸೃಷ್ಟಿಯಾಗಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಇದ್ದರೂ ಆಕ್ಸಿಜನ್ ಪೊರೈಕೆ ಕಾರಣಕ್ಕೆ ರೋಗಿ ಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ.

ನಗರದಲ್ಲಿ ದಿನವೊಂದಕ್ಕೆ ಅಂದಾಜು 300 ಟನ್ ಆಕ್ಸಿಜನ್ ಅಗತ್ಯವಿದೆ. ಇದರೊಂದಿಗೆ ಸೋಂಕಿತರಿಗೆ 24 ಗಂಟೆಯೂ ಆಕ್ಸಿಜನ್ ಪೊರೈಸಬೇಕಾದ ಅಗತ್ಯ ವಿರೋದರಿಂದ  ಆಕ್ಸಿಜನ್ ಬೇಡಿಕೆ ಹೆಚ್ಚುತ್ತಿದೆ. ಖಾಸಗಿ ಆಸ್ಪತ್ರೆಗಳ ಕ್ಸಿಜನ್ ಬೇಡಿಕೆಗೆ ಸ್ಪಂದನೆ ಸಿಗುತ್ತಿಲ್ಲ . ಇದರೊಂದಿಗೆ ರೆಮ್ ಡಿಸಿವಿರ್ ಔಷಧಿಯ ಕೊರತೆ ಯೂ ಇದೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆಯ ವೈದ್ಯರು.

ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾದರೇ ರೋಗಿಗಳನ್ನು ಬಿಡುಗಡೆಮಾಡಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕಾಗುತ್ತದೆ. ಈ ವೇಳೆ ಸರ್ಕಾರಿ ಆಸ್ಪತ್ರೆಗಳು ದಾಖಲಿಸಿಕೊಳ್ಳದೇ ಹೋದರೇ ರೋಗಿ ಗಳ ಪಾಡು ಹೇಳತೀರದು. ಐಸಿಯುಗೆ ದಾಖಲಾಗುವ ರೋಗಿಗಳು ಸಾಮಾನ್ಯವಾಗಿ 3-4 ದಿನ ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಆಕ್ಸಿಜನ್ ಅತಿ ಅಗತ್ಯ. ಆಕ್ಸಿಜನ್ ಸಾಕಷ್ಟು ಪ್ರಮಾಣದಲ್ಲಿ ಇಲ್ಲದ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ದಾಖಲಿಸಿ ಕೊಂಡು ರೋಗಿಗೆ ಪ್ರಾಣಾಪಾಯ ವಾದರೇ ಆಸ್ಪತ್ರೆಗೆ ಕೆಟ್ಟ ಹೆಸರು ಎಂಬ ಕಾರಣಕ್ಕೆ ಹಿಂಜರಿಯುತ್ತಿವೆ. ವಾರ್ ರೂಂ ಸೇರಿದಂತೆ ಸರ್ಕಾರಿ ವ್ಯವಸ್ಥೆಗಳು ಖಾಸಗಿ ಆಸ್ಪತ್ರೆಗಳ ಅಹವಾಲು ಕೇಳುತ್ತಿಲ್ಲ ಎಂಬುದು ಖಾಸಗಿ ಆಸ್ಪತ್ರೆಗಳ ವಾದ.

ರಾಜ್ಯಪಾಲರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಿಎಂ ಬಿಎಸ್ವೈ ಕೂಡ ಔಷಧ ಕೊರತೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ನಗರದಲ್ಲಿ ಹೆಲ್ತ್ ಎಮರ್ಜೆನ್ಸಿಯಂತಹ ಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರೇ ನಿಮ್ಮ ಆರೋಗ್ಯಕ್ಕೆ ನೀವೆ ಹೊಣೆ ಎಂಬಂತಾಗಿದೆ.

Comments are closed.