ಬೈಂದೂರು-ಕುಂದಾಪುರ ನಡುವಿನ ಅರಾಟೆ ಸೇತುವೆಯಲ್ಲಿ ಬಿರುಕು : ರಾ.ಹೆ. ಸಂಚಾರ ಸ್ಥಗಿತ

0

ಕುಂದಾಪುರ : ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು – ಕುಂದಾಪುರ ನಡುವಿನ ಆರಾಟೆ ಹೊಸ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಮೂಲಕ ವಾಹನ ಸವಾರರಿಗೆ ಆತಂಕ ಶುರುವಾಗಿದ್ದು, ಹೊಸ ಸೇತುವೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಕುಂದಾಪುರದಿಂದ ಗೋವಾದ ವರೆಗೆ ಚತುಷ್ಪತ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅರಾಟೆಯಲ್ಲಿ ಹೊಸದಾಗಿ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಸೇತುವೆ ನಿರ್ಮಾಣವಾದ ಬಳಿಕ ಬೈಂದೂರಿನಿಂದ ಕುಂದಾಪುರ ಕಡೆಗೆ ಸಂಚರಿಸುವ ವಾಹನಗಳಿಗೆ ಹೊಸ ಸೇತುವೆ ಹಾಗೂ ಕುಂದಾಪುರದಿಂದ ಬೈಂದೂರು ಕಡೆಗೆ ಸಂಚರಿಸುವ ವಾಹನಗಳಿಗೆ ಹಳೇ ಸೇತುವೆಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿತ್ತು.

ಇದೀಗ ಅರಾಟೆ ಹೊಸ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೊಸದಾಗಿ ನಿರ್ಮಾಣಗೊಂಡಿರುವ ಸೇತುವೆಯಲ್ಲಿ ಬಿರುಕು ಕಾಣಿಸಿ ಕೊಂಡಿರುವುದು ವಾಹನ ಸವಾರರಿಗೆ ಆತಂಕವನ್ನು ತಂದೊಡ್ಡಿದ್ರೆ, ಕಳಪೆ ಕಾಮಗಾರಿ ನಡೆದಿರುವ ಸಂಶಯ ವ್ಯಕ್ತವಾಗುತ್ತಿದೆ.

ಕುಂದಾಪುರದಿಂದ ಗೋವಾದ ವರೆಗೆ ಕಾಮಗಾರಿ ನಡೆಯುತ್ತಿದೆ. ಆದರೆ ಸೇತುವೆ ನಿರ್ಮಾಣವಾಗಿ ವರ್ಷ ಕಳೆಯುವುದರೊಳಗೆ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ಸೇತುವೆಯನ್ನು ಸಂಪೂರ್ಣವಾಗಿ ಪರಿಶೀಲನೆಯನ್ನು ನಡೆಸುವ ಕಾರ್ಯ ನಡೆಯುತ್ತಿದೆ. ಯಾವ ಕಾರಣಕ್ಕೆ ಬಿರುಕು ಕಾಣಿಸಿಕೊಂಡಿದೆ ಅನ್ನೊ ಹಿನ್ನೆಲೆಯಲ್ಲಿ ಕಂಪೆನಿ ತನಿಖೆಯನ್ನು ನಡೆಸುತ್ತಿದೆ.

ಹೊಸ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎರಡೂ ಕಡೆಯ ವಾಹನಗಳು ಇದೀಗ ಹಳೆಯ ಸೇತುವೆಯಲ್ಲಿಯೇ ಸಂಚರಿಸುತ್ತಿವೆ.


Leave A Reply

Your email address will not be published.