Mangalore Landslide : ಮಂಗಳೂರಲ್ಲಿ ಮನೆ ಮೇಲೆ ಗುಡ್ಡ ಕುಸಿತ ಪ್ರಕರಣ : ಮೃತರ ಸಂಖ್ಯೆ 3 ಕ್ಕೆ ಏರಿಕೆ

ಮಂಗಳೂರು : ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆಯ ಮೇಲೆ ಗುಡ್ಡ ಕುಸಿತವಾಗಿರುವ (Mangalore Landslide) ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ನಡೆದಿದೆ. ಇದೀಗ ಪ್ರಕರಣದಲ್ಲಿ ಮೃತ ಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು, ನಾಪತ್ತೆಯಾಗಿದ್ದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಹೆನ್ರಿ ಕಾರ್ಲೋ ಎಂಬವರಿಗೆ ಸೇರಿದ ಮನೆಯ ಮೇಲೆ ಗುಡ್ಡ ಕುಸಿತ ಉಂಟಾಗಿತ್ತು. ಘಟನೆಯಲ್ಲಿ ಕೊಟ್ಟಾಯಂ ನಿವಾಸಿ ಬಾಬು ( 46 ವರ್ಷ), ಸಂತೋಷ್‌ ಅಲ್ಪೋನ್ಸಾ ( 46 ವರ್ಷ) ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಕೇರಳದ ಪಾಲಕ್ಕಾಡ್‌ ನಿವಾಸಿ ಬಿಜು (45 ವರ್ಷ) ಎಂಬವರು ಮೃತ ಪಟ್ಟಿದ್ದಾರೆ. ಉಳಿದಂತೆ ಕಣ್ಣೂರು ನಿವಾಸಿ ಜಾನ್‌ ಎಂಬವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ತಮ್ಮ ಮನೆಯ ರಬ್ಬರ್‌ ತೋಟದ ಕೆಲಸಕ್ಕೆಂದು ಹೆನ್ರಿ ಕಾರ್ಲೋ ಅವರು ಕೇರಳದಿಂದ ನಾಲ್ವರು ಕಾರ್ಮಿಕರನ್ನು ಕರೆ ತಂದಿದ್ದರು. ಅಲ್ಲದೇ ಕಾರ್ಮಿಕರಿಗೆ ಉಳಿದುಕೊಳ್ಳಲು ತಮ್ಮ ಮನೆಯ ಹತ್ತಿರದಲ್ಲಿರುವ ಪ್ರತ್ಯೇಕ ಕೊಠಡಿಯನ್ನು ನೀಡಿದ್ದರು. ಆದ್ರೆ ರಾತ್ರಿ ಗುಡ್ಡ ಕುಸಿತವಾಗಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕದಳದ ಸಿಬ್ಬಂದಿಗಳು ಜೆಸಿಬಿ ಬಳಸಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಎಸ್‌ಪಿ ಹೃಷಿಕೇಶ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇನ್ನು ಭಾರಿ ಮಳೆಯಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್​ ವೇ ಸಮೀಪದಲ್ಲಿಯೇ ರಸ್ತೆ ಕುಸಿತಗೊಂಡಿದೆ. ರನ್​ ವೇ ಕುಸಿತದಿಂದಾಗಿ ವಿಮಾನ ನಿಲ್ದಾಣದ ಸುತ್ತ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಅದ್ಯಪಾಡಿಯಿಂದ ಕೈ ಕಂಬಕ್ಕೆ ತೆರಳುವ ಮಾರ್ಗವನ್ನು ಬ್ಲಾಕ್​ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈಗಾಗಲೇ ಜಿಲ್ಲಾಡಳಿತ ಸ್ಥಳಕ್ಕೆ ಧಾವಿಸಿದೆ. ರನ್​ ವೇ ಸಮೀಪದಲ್ಲಿ ಉಂಟಾಗಿರುವ ರಸ್ತೆ ಕುಸಿತವನ್ನು ಸರಿಪಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ತಹಬದಿಗೆ ಬರುವಂತೆ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ಸದ್ಯ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದ್ದು ಭಾರೀ ಮಳೆಯಿಂದಾಗಿ ಉಂಟಾಗಬಲ್ಲ ಯಾವುದೇ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಂದೂ ಸಹ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿ : airport runway collapsed : ಮಂಗಳೂರಿನಲ್ಲಿ ವರುಣನ ಅಬ್ಬರ : ಕುಸಿದ ಏರ್​ಪೋರ್ಟ್​ ರನ್​ವೇ ಸಮೀಪದ ರಸ್ತೆ

ಇದನ್ನೂ ಓದಿ : Infosys Sudha Murty : ತಿರುಪತಿ ದೇವಸ್ಥಾನ : 42 ಲಕ್ಷ ವೆಚ್ಚದ ಧರ್ಮ ರಥ ನೀಡಿದ ಇನ್ಪೋಸಿಸ್‌ ಸುಧಾಮೂರ್ತಿ

Mangalore Landslide on House due to Heavy Rain Death 3 people

Comments are closed.