Udupi DC Dr. Vidyakumari : ಉಡುಪಿಯ ಪ್ರವಾಸಿ ತಾಣಗಳ ಭೇಟಿಗೆ ಅಗಸ್ಟ್ ಅಂತ್ಯದವರೆಗೂ ನಿರ್ಬಂಧ : ಉಡುಪಿ ಡಿಸಿ ಡಾ.ವಿದ್ಯಾಕುಮಾರಿ

ಉಡುಪಿ : Udupi DC Dr. Vidyakumari : ಜಿಲ್ಲೆಯಾದ್ಯಂತ ಮಳೆರಾಯ ಕಣ್ಮರೆಯಾಗಿದ್ದು, ಸೂರ್ಯ ಶಾಖ ಜೋರಾಗಿದೆ. ಆದರೆ ಕಳೆದ ಜುಲೈ ತಿಂಗಳ ಮಧ್ಯದಿಂದ ಮುಂಗಾರು ಮಳೆ ಚುರುಕುಗೊಂಡಿದ್ದು, ಜಿಲ್ಲೆಯಲ್ಲಿ ಹಲವು ಅನಾಹುತಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಮಳೆಗಾಲದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿಯ ಸಂದರ್ಭದಲ್ಲಿ ಸಾವುಗಳು ಸಂಭವಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಸಂಬಂಧಪಟ್ಟಂತೆ ಉಡುಪಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ತೆಗೆದುಕೊಂಡಿದೆ.

ಹೀಗಾಗಿ ಅಗಸ್ಟ್‌ ಕೊನೆಯವರೆಗೂ ಪ್ರವಾಸಿ ತಾಣಗಳಾದ ಜಲಪಾತ ವೀಕ್ಷಣೆ ಬೀಚ್‌ಗೆ ಸಾರ್ವಜನಿಕರು ಪ್ರವಾಸಿಗರು ಭೇಟಿ ನೀಡುವುದಕ್ಕೆ ನಿರ್ಬಂಧ ಹೇರಿಕೆಯನ್ನು ವಿಸ್ತರಿಸಲಾಗಿದೆ. ಕಳೆದ ತಿಂಗಳು ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತ ವೀಕ್ಷಣೆಗೆಂದು ತೆರಳಿದ ಯುವಕನೊಬ್ಬ ನೀರುಪಾಲಾಗಿದ್ದು, ಈ ಆಘಾತಕಾರಿ ಘಟನೆಯಿಂದ ಜಲಪಾತ, ಕಡಲ ತೀರ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಇರುವುದರಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹಾಗೂ ಸ್ಥಳೀಯರು ಹೋಗದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಇದನ್ನೂ ಓದಿ : Independence Day 2023 : ಉಡುಪಿ : ಜಿಲ್ಲಾ ಮಟ್ಟದ ಸ್ವಾತಂತ್ರ್ಯೊತ್ಸದ ಧ್ವಜಾರೋಹಣ ನೆರವೇರಿಸಲಿದ್ದಾರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಕಳೆದ ಎರಡು ವಾರದಿಂದ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ, ನಿರ್ಬಂಧವನ್ನು ಹಿಂದಕ್ಕೆ ಪಡೆದಿಲ್ಲ. ಯಾಕೆಂದರೆ ಮುಂಗಾರು ಮಳೆ ಮುಗಿಯುವುದಕ್ಕೆ ಇನ್ನು ಸಮಯ ಇರುವುದರಿಂದ ಈ ತಿಂಗಳ ಕೊನೆಯವರೆಗೂ ನಿರ್ಬಂಧವನ್ನು ಮುಂದುವರೆಸಲಾಗುತ್ತದೆ ಎಂದು ಜಿಲ್ಲಾಡಳಿ ತಿಳಿಸಿದೆ. ಇನ್ನು ಯಾವ ಸಂದರ್ಭದಲ್ಲಾದರೂ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಕಟ್ಟು ನಿಟ್ಟಾದ ನಿರ್ಬಂಧ ಹೇರಲಾಗಿದೆ. ಹೀಗಾಗಿ ಅಗಸ್ಟ್‌ ತಿಂಗಳು ಮುಗಿಯುವರೆಗೂ ನಿರ್ಬಂಧ ಮುಂದುವರೆಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಆನಂತರ ತೆರವುಗೊಳಿಸುವ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ಜಿಲ್ಲಾಧಿಖಾರಿ ಡಾ. ವಿದ್ಯಾಕುಮಾರಿ ತಿಳಿಸಿದ್ದಾರೆ.

Restriction on visiting tourist spots of Udupi till the end of August: Udupi DC Dr. Vidyakumari

Comments are closed.