woman dressed up as a panjurli daiva:ಕಾಂತಾರ ಸಿನಿಮಾ ವೀಕ್ಷಿಸಿ ದೈವದಂತೆ ವೇಷ ಕಟ್ಟಿ ಹುಚ್ಚಾಟ ಮೆರೆದ ಯುವತಿ : ತೀವ್ರ ಆಕ್ರೋಶ

woman dressed up as a panjurli daiva : ಕಾಂತಾರ ಸಿನಿಮಾ ಸದ್ಯ ಓಡುತ್ತಿರುವ ವೇಗವನ್ನು ನೋಡಿದರೆ ಎಂತವರಿಗೂ ತಾನು ರಿಷಭ್​ ಶೆಟ್ಟಿಯಂತಹ ಒಬ್ಬ ನಟನಾಗಬೇಕು, ಅವರಂತೆ ನಿರ್ದೇಶಕನಾಗಬೇಕು ಎಂಬ ಸ್ಪೂರ್ತಿಯನ್ನು ಹುಟ್ಟು ಹಾಕುತ್ತೆ. ಹೊಂಬಾಳೆ ಫಿಲ್ಮ್ಸ ಬ್ಯಾನರ್​ ಅಡಿಯಲ್ಲಿ ಮೂಡಿ ಬಂದಿರುವ ಈ ಸಿನಿಮಾ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಅವತಾರದಲ್ಲಿ ನಟ ರಿಷಭ್​ ಶೆಟ್ಟಿ ಮನೋಜ್ಞ ನಟನೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ದೈವಾರಾಧನೆ ಹಾಗೂ ಭೂತಕೋಲ ಎನ್ನುವುದು ತುಳುನಾಡಿನ ಜನತೆಗೆ ಅತ್ಯಂತ ನಂಬಿಕೆಯ ಒಂದು ಆರಾಧನೆಯಾಗಿದೆ. ರಿಷಭ್​ ಶೆಟ್ಟಿ ಕೂಡ ಈ ಪಾತ್ರವನ್ನು ಅಭಿನಯಿಸುವಾಗ ತುಳುನಾಡಿನ ಸಂಸ್ಕೃತಿ ಹಾಗೂ ದೈವಾರಾಧನೆಯ ಪಾವಿತ್ರ್ಯಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ. ಆದರೆ ಈ ಸಿನಿಮಾದ ಬಳಿಕ ಇದೀಗ ಬಹುತೇಕರು ಪಂಜುರ್ಲಿ ದೈವದ ರೀತಿಯಲ್ಲಿ ವೇಷ ಧರಿಸಿ ಸೋಶಿಯಲ್​ ಮೀಡಿಯಾದಲ್ಲಿ ಲೈಕ್​ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿರೋದು ತುಳುನಾಡಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ದೈವ ನರ್ತಕನಾಗಿ ಭೂತ ಕೋಲಗಳನ್ನು ಮಾಡಬೇಕು ಅಂದರೆ ಸಾಕಷ್ಟು ಸಂಪ್ರದಾಯಗಳನ್ನು ಪಾಲಿಸಬೇಕು. ಎಣ್ಣೆಬೂಳ್ಯ ಕೊಡುವುದು, ಎಲ್ಲರ ಒಪ್ಪಿಗೆ ಪಡೆದ ಬಳಿಕವೇ ದೈವಪಾತ್ರಿ ದೈವವನ್ನ ತನ್ನ ದೇಹದ ಮೇಲೆ ಆವಾಹನೆ ಮಾಡಿಕೊಳ್ಳುವುದು ಹೀಗೆ ಅನೇಕ ಶಾಸ್ತ್ರಗಳಿದೆ. ಆದರೆ ಇದೀಗ ಈ ಎಲ್ಲ ಶಾಸ್ತ್ರಗಳನ್ನು ಗಾಳಿಗೆ ತೂರಿದ ಯುವತಿಯೊಬ್ಬಳು ದೈವದಂತೆ ವೇಷ ಕಟ್ಟಿ ರೀಲ್ಸ್​ ಮಾಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಮೇಕಪ್​ ಆರ್ಟಿಸ್ಟ್​ ಶ್ವೇತಾ ರೆಡ್ಡಿ ಎಂಬಾಕೆಯ ಇನ್​ಸ್ಟಾಗ್ರಾಂ ಖಾತೆಯಿಂದ ಈ ವಿಡಿಯೋವನ್ನು ಶೇರ್​ ಮಾಡಲಾಗಿದೆ. ಯುವತಿಗೆ ದೈವದ ರೀತಿಯಲ್ಲಿ ಬಣ್ಣ ಹಚ್ಚಿ ಥೇಟ್​ ರಿಷಭ್​ ಶೆಟ್ಟಿಯಂತೆಯೇ ನಟಿಸಿದ್ದಾಳೆ. ವರಾಹ ರೂಪಂ ಎಂಬ ಹಾಡಿಗೆ ಯುವತಿ ದೈವದಂತೆ ಕುಣಿದಿದ್ದು ನೆಟ್ಟಿಗರ ವಿರೋಧಕ್ಕೆ ಕಾರಣವಾಗಿದೆ. ದೈವಾರಾಧನೆಯಂತಹ ಪವಿತ್ರ ಆಚರಣೆ ಯೊಂದು ಕಾಂತಾರ ಸಿನಿಮಾದ ಬಳಿಕ ತನ್ನ ಮೌಲ್ಯವನ್ನು ಕಳೆದುಕೊಳ್ಳುವಂತಾಯ್ತಾ ಎಂಬ ಪ್ರಶ್ನೆ ಕೂಡ ಅನೇಕರಲ್ಲಿ ಮೂಡಿದೆ.

ಇದನ್ನು ಓದಿ : India vs Netherland: ಟಿ20 ವಿಶ್ವಕಪ್: ಭಾರತಕ್ಕೆ ನಾಳೆ ನೆದರ್ಲೆಂಡ್ಸ್ ಎದುರಾಳಿ, ಇಲ್ಲಿದೆ ಪಂದ್ಯದ ಪಿನ್ ಟು ಪಿನ್ ಡೀಟೇಲ್ಸ್

ಇದನ್ನೂ ಓದಿ : Poor level plate let : ರಕ್ತದ ಪ್ಲಾಸ್ಮಾ ಬದಲು ಮುಸುಂಬಿ ಜ್ಯೂಸ್‌ ಪ್ರಕರಣ ಬಿಗ್ ಟ್ವಿಸ್ಟ್

Young woman dressed up as a panjurli daiva after watching the movie Kantara: extreme outrage

Comments are closed.