ಬಿಹಾರಿ ಕಾರ್ಮಿಕನಿಂದ 9 ಮಂದಿಗೆ ಸೋಂಕು : 1 ಆಟೋ, 4 ಆಸ್ಪತ್ರೆ, 300 ಮನೆಗಳಿಗೆ ಆತಂಕ !

0

ಬೆಂಗಳೂರು : ಬಿಹಾರ ಮೂಲದ ಕೂಲಿ ಕಾರ್ಮಿಕ ಇದೀಗ ಬೆಂಗಳೂರಲ್ಲಿ ಬಾರೀ ಆತಂಕವನ್ನೇ ತಂದೊಡ್ಡಿದ್ದಾನೆ. ಬಿಹಾರಿ ಕಾರ್ಮಿಕನ ಸಂಪರ್ಕದಲ್ಲಿದ್ದ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 180 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ 4 ಆಸ್ಪತ್ರೆಗಳ ವೈದ್ಯರು, ವೈದ್ಯಕೀಯ ಸಿಬ್ಬಂಧಿಗಳಿಗೂ ಇದೀಗ ಆತಂಕ ಶುರುವಾಗಿದ್ದು, ಹೊಂಗಸಂದ್ರದ ಸುಮಾರು 300 ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಬಿಹಾರ ಮೂಲದ ಕಾರ್ಮಿಕನಿಗೆ ನಿನ್ನೆಯಷ್ಟೇ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು. ಕಾರ್ಮಿಕನ ಟ್ರಾವೆಲ್ ಹಿಸ್ಟರಿಯ ಬೆನ್ನು ಹಿಡಿದ ಆರೋಗ್ಯ ಇಲಾಖೆಗೆ ಶಾಕ್ ಕಾದಿತ್ತು. ಬಿಹಾರ ಮೂಲದ ಕಾರ್ಮಿಕನಿಗೆ ಅನಾರೋಗ್ಯ ಸಮಸ್ಯೆ ಕಾಡಿತ್ತು.

ಹೀಗಾಗಿ ವ್ಯಕ್ತಿ ಆರಂಭದಲ್ಲಿ ಖಾಸಗಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದ ನಂತರ ಎಪ್ರಿಲ್ 19ರಂದು ಜಯದೇವ ಆಸ್ಪತ್ರೆಗೆ ಭೇಟಿಕೊಟ್ಟು ಚಿಕಿತ್ಸೆ ಪಡೆದಿದ್ದ, ಮರು ದಿನ ವಿಕ್ಟೋರಿಯಾ ಆಸ್ಪತ್ರೆಗೆ, ತದನಂತರ ರಾಜೀವಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲದೇ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.

ಬಿಹಾರಿ ವ್ಯಕ್ತಿ ಆಟೋದಲ್ಲಿ ಸಂಚರಿಸಿದ್ದು, ಇದೀಗ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ವೈದ್ಯರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಅಲ್ಲದೇ 4 ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂಧಿಗೂ ಆತಂಕ ಶುರುವಾಗಿದೆ. ಇನ್ನು ವ್ಯಕ್ತಿಯೊಂದಿಗೆ ದ್ವಿತೀಯ ಸಂಪರ್ಕದಲ್ಲಿರುವ ಸುಮಾರು 180 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಬಿಹಾರ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹೊಂಗಸಂದ್ರ ವಾರ್ಡ್ ನ ವಿದ್ಯಾಜ್ಯೋತಿ ಬಡಾವಣೆಯನ್ನೇ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ಹೊಂಗಸಂದ್ರದಲ್ಲಿ ವಾಸವಿದ್ದ ಸುಮಾರು 50ಕ್ಕೂ ಅಧಿಕ ಕಾರ್ಮಿಕರು ಮನೆಯನ್ನು ರಾತ್ರೋ ರಾತ್ರಿ ಖಾಲಿ ಮಾಡಿದ್ದಾರೆ. ಕಾರ್ಮಿಕ ಕಟ್ಟಡ ಕೆಲಸದ ನಿಮಿತ್ತು ಬೆಂಗಳೂರಿನಲ್ಲಿ ನೆಲೆಸಲಾಗಿದೆ. ಇದೀಗ 9 ಮಂದಿಗೆ ಕೊರೊನಾ ಕಾಣಿಸಿಕೊಂಡಿರೋ ಹಿನ್ನೆಲೆಯಲ್ಲಿ ಔಷಧವನ್ನು ಸಿಂಪಡನೆ ಮಾಡಲಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಆದರೆ ನೂರಾರು ಕಾರ್ಮಿಕರು ಒಟ್ಟೋಟ್ಟಿಗೆ ಶೇವಿಂಗ್, ಕಟ್ಟಿಂಗ್ ಮಾಡಲಾಗಿತ್ತು. ಅಲ್ಲದೇ ಒಟ್ಟೊಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಹೀಗಾಗಿ ಸಿಲಿಕಾನ್ ಸಿಟಿಯ ಮಂದಿಗೆ ಆತಂಕ ಶುರುವಾಗಿದೆ.

Leave A Reply

Your email address will not be published.