18 ಜನರಿಗೆ ಕೊರೊನಾ ಹರಡಿಸಿದ 1 ಸಿಗರೇಟ್..!! ಧೂಮಪಾನಿಗಳೇ ಯಾಮಾರಿದ್ರೆ ಅಪಾಯ ಫಿಕ್ಸ್

ಹೈದರಾಬಾದ್​ : ಕೊರೊನಾ ಸೋಂಕು ಯಾವ ರೂಪದಲ್ಲಿ ಹರಡುತ್ತದೆ ‌ಅಂತಾ ಊಹಿಸೋದಕ್ಕೂ ಸಾಧ್ಯವಿಲ್ಲ. ಯಾಕೆಂದ್ರೆ ಇದೀಗ ಸಿಗರೇಟ್ ನಿಂದಲೂ ಕೊರೊನಾ ಸೋಂಕು ಹರಡುತ್ತೆ ಅನ್ನೋದು ಈ ಘಟನೆಯಿಂದ ಬಯಲಾಗಿದೆ‌. ಒಂದು ಸಿಗರೇಟ್ ಇದೀಗ 18 ಜನರಿಗೆ ಕೊರೊನಾ ಶಾಕ್ ಕೊಟ್ಟಿದೆ.

ಹೈದರಾಬಾದ್ ನ ಶ್ರೀನಗರ ಕಾಲನಿಯ ವಾಸಿ, ಕಂಪೆನಿಯೊಂದರ ಮಾರ್ಕೆಟಿಂಗ್ ಮ್ಯಾನೇಜರ್ ಮಾಡಿದ ಒಂದು ಎಡವಟ್ಟು ಇದೀಗ ಕೊರೊನಾ ಶಾಕ್ ಕೊಟ್ಟಿದೆ. ಕಂಪನಿಯ ಮ್ಯಾನೇಜರ್ ಗೆ ಶೀತ, ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದಾಗ ವರದಿ ಪಾಸಿಟಿವ್ ಬಂದಿತ್ತು. ಅಲ್ಲದೇ ಕಂಪೆನಿಯಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದ 20 ಮಂದಿಯ ಪೈಕಿ 18 ಮಂದಿಗೆ ಕೊರೊನಾ ದೃಢಪಟ್ಟಿದೆ.

ಕೊರೊನಾ ಸೋಂಕಿನ ಮೂಲ ಹುಡುಕುತ್ತಾ ಹೊರಟ ಮ್ಯಾನೇಜರ್ ಗೆ ಶಾಕ್ ಆಗಿತ್ತು‌. ಸಿಗರೇಟ್ ಸೇದುವ ವಿಚಾರದಲ್ಲಿ ಮಾಡಿಕೊಂಡ ಸಣ್ಣ ತಪ್ಪು ಇಂದು ಆಘಾತವನ್ನೇ ನೀಡಿತ್ತು. ಕರೊನಾ ಸೋಂಕಿನಿಂದ ದೂರವಿರಲು ಸಾಮಾಜಿಕ ಅಂತರವೇ ಪ್ರಮುಖ ಅಸ್ತ್ರ ಎಂದು ವೈದ್ಯಲೋಕವೇ ಹೇಳುತ್ತಿದೆ. ಆದರೆ ಈ  ಮಾರ್ಕೆಟಿಂಗ್ ಮ್ಯಾನೇಜರ್, ಕೆಲವು ದಿನಗಳ ಹಿಂದೆ ಕೆಲಸಕ್ಕೆ ಹೋಗುವ ಮಾರ್ಗಮಧ್ಯೆ ಭಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಸಿಗರೇಟ್​ ಸೇದಲೆಂದು ರಸ್ತೆ ಬದಿ ಕಾರು ನಿಲ್ಲಿಸಿದ್ದು, ಲೈಟರ್​ಗಾಗಿ ತಡಕಾಡಿದ್ದಾನೆ.

ಲೈಟರ್ ಸಿಗದಿದ್ದಾಗ ಅಲ್ಲಿಯೇ ಸಿಗರೇಟ್​ ಸೇದುತ್ತ ನಿಂತಿದ್ದ ವ್ಯಕ್ತಿ ಯೊಬ್ಬನ ಬಳಿ ಹೋಗಿ ಬೆಂಕಿ ಪೊಟ್ಟಣ ಕೇಳುವ ಬದಲು, ಆತ ಸೇದುತ್ತಿರುವ ಸಿಗರೇಟ್​ನಿಂದಲೇ ತನ್ನ ಸಿಗರೇಟ್​ಗೆ ಬೆಂಕಿ ಹಚ್ಚಿಸಿ ಕೊಂಡು ಹೊಗೆ ಬಿಟ್ಟಿದ್ದ. ಇದಾದ ಮೂರು ದಿನಗಳ ನಂತರ ಮ್ಯಾನೇಜರ್​ಗೆ ಜ್ವರ ಮತ್ತು ಶೀತ ಕಾಣಿಸಿಕೊಂಡು ಆರೋಗ್ಯ ಸ್ಥಿತಿ ಹದಗೆಟ್ಟಿತು. ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿತು. ಅಲ್ಲದೇ ಸಿಗರೇಟ್ ಸೇದುವ ಚಟವೀಗ ಕೊರೊನಾ ಸೋಂಕನ್ನೂ ಉಡುಗೊರೆಯಾಗಿ ನೀಡಿದೆ. ಧೂಮಪಾನಿಗಳೇ ಇನ್ನಾದ್ರೂ ಎಚ್ಚರವಾಗಿರಿ.

Comments are closed.