fresh COVID cases : ದೇಶದಲ್ಲಿ ಒಂದೇ ದಿನ 58,097 ಹೊಸ ಕೋವಿಡ್​ ಪ್ರಕರಣಗಳು ವರದಿ

fresh COVID cases : ದೇಶದಲ್ಲಿ ಕೊರೊನಾ ರಣಕೇಕೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಕಳೆದೊಂದು ದಿನದಲ್ಲಿ ದೇಶದಲ್ಲಿ ಬರೋಬ್ಬರಿ 28,097 ಕೋವಿಡ್​ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 15,389 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇದರಿಂದಾಗಿ ದೇಶದಲ್ಲಿ ರಿಕವರಿ ರೇಟ್​ 98.01 ಪ್ರತಿಶತವಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 3,43,21,803 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.


ಇನ್ನು ಇದರ ಜೊತೆಯಲ್ಲಿ ದೇಶದಲ್ಲಿ ಓಮಿಕ್ರಾನ್​ ಪ್ರಕರಣಗಳ ಸಂಖ್ಯೆ 2135 ಆಗಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 653 ಹಾಗೂ ದೆಹಲಿಯಲ್ಲಿ 464 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಪ್ರಸ್ತುತ 2,14,004 ಸಕ್ರಿಯ ಕೋವಿಡ್​ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.


ದೇಶದಲ್ಲಿ ಈವರೆಗೆ ಒಟ್ಟು 4,82,551 ಮಂದಿ ಕೊರೊನಾದಿಂದ ಸಾವಿಗೀಡಾದಂತಾಗಿದೆ. ಈವರೆಗೆ ದೇಶದಲ್ಲಿ ಒಟ್ಟು 68,38,17,242 ಕೋವಿಡ್​ ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 13,88,647 ಕೋವಿಡ್​ ಸ್ಯಾಂಪಲ್​ಗಳನ್ನು ಮಂಗಳವಾರ ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್​ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಕೊರೊನಾ ಸ್ಫೋಟ : 2,479 ಪ್ರಕರಣ ದಾಖಲು, ಪಾಸಿಟಿವಿಟಿ ರೇಟ್‌ 2.59%ಕ್ಕೆ ಏರಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟ ( Karnataka Covid Updates ) ಸಂಭವಿಸಿದೆ. ಇಂದು ಒಟ್ಟು 2,479 ಹೊಸ ಪ್ರಕರಣ ದಾಖಲಾಗಿದ್ದು, ನಾಲ್ವರು ಬಲಿಯಾಗಿದ್ದಾರೆ. ಸತತ ಮೂರು ದಿನಗಳಿಂದ ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದ್ದು, ಇಂದು ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿದಾಟಿದೆ. ಇನ್ನು ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿಯೇ ಬರೋಬ್ಬರಿ 2,053 ದಾಖಲಾಗಿದ್ದು, ಮೂರನೇ ಅಲೆಯ ಆತಂಕ ಶುರುವಾಗಿದೆ.

ರಾಜ್ಯದಲ್ಲಿಂದು ಒಟ್ಟು 95,391 ಜನರಿಗೆ ಟೆಸ್ಟ್‌ ಮಾಡಿಸಲಾಗಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.2.59ಕ್ಕೆ ಏರಿಕೆ ಕಂಡಿದೆ. ಆದರೆ ರಾಜ್ಯದಲ್ಲಿ ಯಾವುದೇ ಓಮಿಕ್ರಾನ್‌ ಪ್ರಕರಣ ದಾಖಲಾಗಿಲ್ಲ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಮಹಾಸ್ಪೋಟದ ಜೊತೆಗೆ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಇದೀಗ ಕರ್ನಾಟಕದಲ್ಲಿಯೂ ಸತತವಾಗಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ರಾಜ್ಯದಲ್ಲಿ ಡಿಸೆಂಬರ್‌ 27ರಂದು 289 ಪ್ರಕರಣ ದಾಖಲಾಗಿದ್ರೆ ಜನವರಿ 1 ರಂದು 1033 ಪ್ರಕರಣ ದಾಖಲಾಗಿತ್ತು. ಇದೀಗ ಜನವರಿ ೪ರಂದು ಬರೋಬ್ಬರಿ 2479 ಪ್ರಕರಣ ಪತ್ತೆಯಾಗಿದೆ. ಪ್ರತೀ ಎರಡರಿಂದ ಮೂರು ದಿನಗಳಿಗೆ ಒಮ್ಮೆ ಕೊರೊನಾ ಸೋಂಕಿತ ಪ್ರಕರಣ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಈಗಾಗಲೇ ಆರೋಗ್ಯ ಸಚಿವ ಸುಧಾಕರ್‌ ಅವರು ರಾಜ್ಯದಲ್ಲಿ ಮೂರನೇ ಅಲೆಯ ಆರಂಭವಾಗಿದೆ ಎಂದು ಹೇಳಿಕೆ ನೀಡಿದ್ದರು. ಇನ್ನೊಂದೆಡೆಯಲ್ಲಿ ತಜ್ಞರು ಜನವರಿ ಅಂತ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಭಾರೀ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

India logs 58,097 fresh COVID cases, 55% jump in last 24 hours; over 500 deaths

ಇದನ್ನು ಓದಿ : new Covid variant IHU : ಫ್ರಾನ್ಸ್​​ನಲ್ಲಿ ಮತ್ತೊಂದು ಹೊಸ ರೂಪಾಂತರಿ ಪತ್ತೆ; 12 ಮಂದಿಗೆ ಸೋಂಕು

ಇದನ್ನೂ ಓದಿ : corona 3rd wave : ರಾಜ್ಯಕ್ಕೆ ಮೂರನೆ ಅಲೆಯ ಎಂಟ್ರಿಯಾಗಿದೆ: ಆತಂಕಕಾರಿ ಮಾಹಿತಿ ನೀಡಿದ ಸಚಿವ ಡಾ.ಸುಧಾಕರ್

Comments are closed.