Village Corona fear : ಸರಕಾರದ ಎಡವಟ್ಟು, ಹಳ್ಳಿಯತ್ತ ಹೊರಟ ಜನರು : ಹಳ್ಳಿಯಲ್ಲೂ ಕೊರೊನಾ, ಓಮಿಕ್ರಾನ್‌ ಭೀತಿ

ಬೆಂಗಳೂರು : ರಾಜ್ಯದಲ್ಲಿ ಓಮೈಕ್ರಾನ್ ಹಾಗೂ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು ಸರ್ಕಾರ ಪರಿಸ್ಥಿತಿ ನಿಯಂತ್ರಣಕ್ಕೆ ಕಠಿಣ ನಿಯಮ ರೂಪಿಸಿದೆ. ಮಾತ್ರವಲ್ಲ ವೀಕೆಂಡ್ ಕರ್ಪ್ಯೂ ಕೂಡ ವಿಧಿಸಿದೆ. ಸರ್ಕಾರದ ಈ ನಿಯಮದಿಂದ ಜನರು ಆತಂಕಕ್ಕೊಗಳಾಗಿದ್ದು, ಮತ್ತೆ ನಗರಗಳಿಂದ ಹಳ್ಳಿಗಳತ್ತ ವಲಸೆ ಆರಂಭಿಸಿದ್ದಾರೆ. ಇದರಿಂದ ಮತ್ತೆ ಮೂಲಭೂತ ಸೌಲಭ್ಯವೇ ಇಲ್ಲದ ಹಳ್ಳಿಗಳಲ್ಲಿ ಕೊರೋನಾ ಹಾಗೂ ಓಮೈಕ್ರಾನ್ (Village Corona fear) ಹರಡುವ ಭೀತಿ ಹೆಚ್ಚಿದೆ.

ಕೊರೋನಾ ಒಂದು ಮತ್ತು ಎರಡನೇ ಅಲೆಯಲ್ಲಿ ಸರ್ಕಾರ ಪರಿಸ್ಥಿತಿ ನಿಯಂತ್ರಿಸಲು ಲಾಕ್ ಡೌನ್ ಹೇರಿತ್ತು. ಇದರಿಂದಾಗಿ ಬೆಂಗಳೂರು ಸೇರಿದಂತೆ ಮಹಾನಗರಗಳಿಂದ ಸಾವಿರಾರು ಜನರು ಹಳ್ಳಿಗಳತ್ತ ಮುಖಮಾಡಿದ್ದರು. ಇದರಿಂದ ರಾಜ್ಯದ ಹಳ್ಳಿಗಳು ಕೊರೋನಾ ಹಾಟ್ ಸ್ಪಾಟ್ ಗಳಾಗಿ ಬದಲಾಗಿತ್ತು. ಬಳಿಕ ಸರ್ಕಾರ ಮತ್ತೆ ಕೊರೋನಾ ನಿಯಂತ್ರಿಸಲು ಜಿಲ್ಲೆ‌ಜಿಲ್ಲೆಗಳಿಗೂ ಕರ್ಪ್ಯೂ, ಲಾಕ್ ಡೌನ್ ಹೇರಿಕೆ ಮಾಡಿತ್ತು. ಆದರೆ ನಗರಗಳಂತೆ ಸೂಕ್ತವಾಗಿ ಔಷದಿ ಸೌಲಭ್ಯ ಸಿಗದ ಕಾರಣಕ್ಕೆ ಹಳ್ಳಿಗಳ ಸಾವಿರಾರು ಜನರು ಕೊರೋನಾದಿಂದಲೇ ಸಾವನ್ನಪ್ಪಿದ್ದರು. ಹೀಗಾಗಿ ಈ ಭಾರಿ ಕೊರೋನಾ ಹೆಚ್ಚುತ್ತಲೇ ತಜ್ಞರು ನಗರದಿಂದ ಹಳ್ಳಿಗಳಿಗೆ ನೀವು ಸೋಂಕಿನ ಮಾಧ್ಯಮವಾಗಬೇಡಿ. ಎಲ್ಲಿದ್ದೀರೋ ಅಲ್ಲೇ ಇದ್ದು ಬಿಡಿ. ಇನ್ನೆರಡು ತಿಂಗಳ ಕಾಲ ಎಲ್ಲೂ ಪ್ರವಾಸ,ಭೇಟಿ,ಸಮಾರಂಭಗಳಿಗೆ ತೆರಳಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಆದರೆ ಸರ್ಕಾರ ಮತ್ತೆ ನಿಧಾನಕ್ಕೆ ಲಾಕ್ ಡೌನ್ ಮಾಡುವತ್ತ‌ಚಿತ್ತ ಹರಿಸುತ್ತಿದೆ.‌ಮೊದಲ ಹಂತವಾಗಿ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ. ಹೀಗಾಗಿ ಜನರು ಸಹಜವಾಗಿಯೇ ಮತ್ತೆ‌ಲಾಕ್ ಡೌನ್ ಆಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದು, ವ್ಯಾಪಾರ, ಉದ್ದಿಮೆ,ಶಾಲೆಗಳು ಎಲ್ಲವೂ ಮುಚ್ಚಲಾರಂಭಿಸಿರೋದರಿಂದ ಮತ್ತೆ ಹಳ್ಳಿಗಳತ್ತ ಮುಖಮಾಡಿದ್ದಾರೆ. ಕರ್ಪ್ಯೂ ಆರಂಭದ ಮೊದಲ ದಿನ ಅಂದ್ರೇ ಶುಕ್ರವಾರ ಸಂಜೆ ಬೆಂಗಳೂರಿನಿಂದ ಕೆಎಸ್ಆರ್ಟಿಸಿ ಬಸ್, ಟ್ರೇನ್,ಖಾಸಗಿ ವಾಹನಗಳಿಂದ ಲಕ್ಷಾಂತರ ಜನರು ರಾಜ್ಯದ ವಿವಿಧ ಹಳ್ಳಿಗಳಿಗೆ ತೆರಳಿದ್ದಾರೆ.

ಹೊಟ್ಟೆಪಾಡಿಗೆ ಕೂಲಿ ಅರಸಿ ಬಂದವರಿಗೂ ಕೊರೋ‌ನಾ ಹಾಗೂ ಓಮೈಕ್ರಾನ್ ಶಾಕ್ ನೀಡಿದ್ದು, ರೆಸ್ಟೋರೆಂಟ್, ಹೊಟೇಲ್, ಬಾರ್ ಪಬ್ ಗಳಲ್ಲಿ ಶೇಕಡಾ 50 ರಷ್ಟು ಅವಕಾಶ ನೀಡಿರೋದು ಉದ್ಯೋಗದ ಕೊರತೆ ಸೃಷ್ಟಿಸಿದೆ. ಹೀಗಾಗಿ ಅನಿವಾರ್ಯವಾಗಿ‌ಮತ್ತೆ ಹಳ್ಳಿಯತ್ತ ತೆರಳುತ್ತಿದ್ದಾರೆ. ಇದರಿಂದ ಈಗಾಗಲೇ ಬೆಂಗಳೂರಿನಲ್ಲಿ 7.5 ರಷ್ಟಿದ್ದ ಪಾಸಿಟಿವಿಟಿ ದರ ಜಿಲ್ಲೆಗಳಲ್ಲೂ ಏರಿಕೆಯಾಗುವ ಭೀತಿ ಇದೆ.

ಸರ್ಕಾರ ಬಡವರ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದು ಜನಸಾಮಾನ್ಯರಿಗೆ ಒಂದು ನೀತಿ ರಾಜಕಾರಣಿಗಳಿಗೆ ಒಂದು ನೀತಿ ಮಾಡುತ್ತಿದೆ ಎಂದು ಬಡವ್ಯಾಪಾರಿಗಳು ಹಿಡಿ ಶಾಪ ಹಾಕುತ್ತಿದ್ದಾರೆ. ಸರ್ಕಾರವೂ ಅವೈಜ್ಞಾನಿಕವಾಗಿ ನಿಯಮ‌ರೂಪಿಸುತ್ತಿದ್ದು, ಇದರಿಂದ ಜನರು ಫ್ಯಾನಿಕ್ ಆಗ್ತಿರೋದಲ್ಲದೇ ಧೈರ್ಯವಹಿಸಿ ನಗರದಲ್ಲೇ ಇರೋ ಬದಲು ಭಯದಿಂದ‌ ಹಳ್ಳಿಗಳಿಗೆ ವಲಸೆ ಹೋಗಿ ಅಲ್ಲಿಯೋ ಸೋಂಕಿನಭೀತಿ ಹರಡುತ್ತಿದ್ದಾರೆ.

ಇದನ್ನೂ ಓದಿ : Green pass for vaccinated people : ಕೊರೊನಾ ಲಸಿಕೆ ಪಡೆದವರಿಗೆ ಶೀಘ್ರದಲ್ಲೇ ಗ್ರೀನ್​ ಪಾಸ್​

ಇದನ್ನೂ ಓದಿ : Karnataka weekend curfew : ವೀಕೆಂಡ್ ಕರ್ಫ್ಯೂಗೆ ಡೋಂಟ್​ಕೇರ್​: ಮಾಸ್ಕ್ ಧರಿಸದೇ ಜನರ ಓಡಾಟ

(Karnataka Government mistake, people Migration to village, corona and omicron fear in village)

Comments are closed.