ಉಡುಪಿಗೆ ಕೊರೊನಾ ಶಾಕ್ : ಇಂದು 16 ಮಂದಿಗೆ ಸೋಂಕು : ರಾಜ್ಯದಲ್ಲಿಂದು ಒಂದೇ ದಿನ 69 ಮಂದಿಗೆ ಮಹಾಮಾರಿ

0

ಬೆಂಗಳೂರು : ಕರಾವಳಿಗೆ ಕೊರೊನಾ ಸೋಂಕು ಭರ್ಜರಿ ಶಾಕ್ ಕೊಟ್ಟಿದೆ. ಉಡುಪಿಯಲ್ಲಿಂದು ಕೂಡ 16 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕ ಹೆಚ್ಚಾಗಿದೆ. ಅಲ್ಲದೇ ರಾಜ್ಯದಲ್ಲಿಂದು 69 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿಂದು 69 ಮಂದಿ ಸೋಂಕಿತರರು ಪತ್ತೆಯಾಗಿದ್ದು, ಬಹುತೇಕ ಮುಂಬೈನಿಂದ ವಾಪಾಸಾದವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಉಡುಪಿ ಜಿಲ್ಲೆಯ 16 ಮಂದಿ ಸೋಂಕಿತರ ಪೈಕಿ 14 ಮಂದಿ ಮುಂಬೈನಿಂದ ವಾಪಾಸಾದವರು ಆಗಿದ್ದರೆ, ಓರ್ವ ದುಬೈನಿಂದ ವಾಪಾಸಾದವರಾಗಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ.

ಇನ್ನು ಯಾದಗಿರಿ ಜಿಲ್ಲೆಯಲ್ಲಿ 15 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಕಲಬುರಗಿ 14, ಬೆಂಗಳೂರು 6, ದಕ್ಷಿಣ ಕನ್ನಡ 3, ಧಾರವಾಡ 3, ಬಳ್ಳಾರಿ 3, ಮಂಡ್ಯ 2, ಕೋಲಾರ 2 ಪ್ರಕರಣ ದಾಖಲಾಗಿದ್ದರೆ, ವಿಜಯಪುರ, ತುಮಕೂರು, ರಾಮನಗರ, ಬೀದರ್ ಹಾಗೂ ಬೆಳಗಾವಿಯಲ್ಲಿ ತಲಾ ಒಂದೊಂದು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

Leave A Reply

Your email address will not be published.