IND vs AFG : ಭಾರತ vs ಅಫ್ಘಾನಿಸ್ತಾನ್ 1ನೇ ಏಕದಿನ ಪಂದ್ಯ: ರೋಹಿತ್ ಶರ್ಮಾ ರೀ ಎಂಟ್ರಿ
ಕನ್ನಡಿಗ ಕೆ.ಎಲ್. ರಾಹುಲ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದಲ್ಲಿದ್ದು, ಮಧ್ಯಮ ಕ್ರಮಾಂಕದ ಜವಾಬ್ದಾರಿ ಹೊರಲಿದ್ದಾರೆ. ಇವರೊಂದಿಗೆ ಯುವ ಆಟಗಾರರಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷ್ ದುಬೆ ಕೂಡ ಸ್ಕ್ವಾಡ್‌ನಲ್ಲಿದ್ದಾರೆ.

ಧರ್ಮಶಾಲಾ: ಅಫ್ಘಾನಿಸ್ತಾನ್ (IND vs AFG ) ವಿರುದ್ದದ ಏಕೈಕ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿರುವ ಭಾರತ ಕ್ರಿಕೆಟ್ ತಂಡ ಇಂದಿನಿಂದ (ಜೂನ್ 13, ಶನಿವಾರ) ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಸ್ಟೇಡಿಯಂನಲ್ಲಿ ಪ್ರವಾಸಿ ತಂಡದ ವಿರುದ್ಧ ಮೊದಲ ಏಕದಿನ (ODI) ಪಂದ್ಯವನ್ನು ಆಡಲು ಸಜ್ಜಾಗಿದೆ.
ರೋಹಿತ್ ಶರ್ಮಾ ಪುನರಾಗಮನ, ಶುಭ್‌ಮನ್ ಗಿಲ್ ನಾಯಕ
ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರು ಏಕದಿನ ಸರಣಿಗಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಸದ್ಯ ಭಾರತ ಏಕದಿನ ತಂಡವನ್ನು ಶುಭ್‌ಮನ್ ಗಿಲ್ ಮುನ್ನಡೆಸುತ್ತಿದ್ದು, ರೋಹಿತ್ ಶರ್ಮಾ ಅವರ ಅನುಭವ ತಂಡಕ್ಕೆ ದೊಡ್ಡ ಬಲ ತುಂಬಲಿದೆ.
ಕನ್ನಡಿಗ ಕೆ.ಎಲ್. ರಾಹುಲ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದಲ್ಲಿದ್ದು, ಮಧ್ಯಮ ಕ್ರಮಾಂಕದ ಜವಾಬ್ದಾರಿ ಹೊರಲಿದ್ದಾರೆ. ಇವರೊಂದಿಗೆ ಯುವ ಆಟಗಾರರಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷ್ ದುಬೆ ಕೂಡ ಸ್ಕ್ವಾಡ್‌ನಲ್ಲಿದ್ದಾರೆ.
ಮತ್ತೊಂದೆಡೆ ಹಶ್ಮತುಲ್ಲಾ ಶಾಹಿದಿ ನಾಯಕತ್ವದ ಅಫ್ಘಾನಿಸ್ತಾನ್ ತಂಡದಲ್ಲಿ ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ರಹಮಾನುಲ್ಲಾ ಗುರ್ಬಾಜ್ ಅವರಂತಹ ಸ್ಟಾರ್ ಆಟಗಾರರಿದ್ದು, ಭಾರತಕ್ಕೆ ಕಠಿಣ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಧರ್ಮಶಾಲಾದ ಪಿಚ್ ಸಾಂಪ್ರದಾಯಿಕವಾಗಿ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ (Pacers) ಹೆಚ್ಚಿನ ನೆರವು ನೀಡುತ್ತದೆ. ಔಟ್‌ಫೀಲ್ಡ್ ಅತ್ಯಂತ ವೇಗವಾಗಿದ್ದು, ಬ್ಯಾಟರ್‌ಗಳು ಸೆಟ್ ಆದರೆ ದೊಡ್ಡ ಸ್ಕೋರ್ ನಿರೀಕ್ಷಿಸಬಹುದು.
ಪಂದ್ಯದ ಲೈವ್ ಪ್ರಸಾರದ ಕಂಪ್ಲೀಟ್ ಮಾಹಿತಿ:
- ಭಾರತ vs ಅಫ್ಘಾನಿಸ್ತಾನ್, 1ನೇ ಏಕದಿನ (ODI)
- ದಿನಾಂಕ / ಸಮಯ : ಜೂನ್ 13, 2026 | ಮಧ್ಯಾಹ್ನ 1:30 PM (ಟಾಸ್: 1:00 PM)
- ಮೈದಾನ : HPCA ಸ್ಟೇಡಿಯಂ, ಧರ್ಮಶಾಲಾ
- ಲೈವ್ ಸ್ಟ್ರೀಮಿಂಗ್ (App)ಜಿಯೋಹಾಟ್‌ಸ್ಟಾರ್ (JioHotstar)
ಭಾರತ ತಂಡ : ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ಅರ್ಶ್‌ದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ಹರ್ಷ್ ದುಬೆ, ನಿತೀಶ್ ಕುಮಾರ್ ರೆಡ್ಡಿ, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್.
ind vs afg 1st odi-2026 Rohit sharma return playing xi



