India vs Afghanistan 1st test Live : ಕೆಎಲ್ ರಾಹುಲ್ ಶತಕ, ಅಪ್ಘಾನ್ ವಿರುದ್ದ ಭಾರತದ ಅಬ್ಬರ
ಕನ್ನಡಿಗ ಕೆಎಲ್ ರಾಹುಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದ ಯಶಸ್ವಿ ಜೈಸ್ವಾಲ್ ಕೇವಲ 24 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ರು. ನಂತರ ರಾಹುಲ್‌ಗೆ ಜೊತೆಯಾದ ಸಾಯಿ ಸುದರ್ಶನ್ 104 ಎಸೆತಗಳನ್ನು ಎದುರಿಸಿ 81 ರನ್ ಬಾರಿಸಿದ್ದಾರೆ.
ಚಂಢೀಗಡ : ಭಾರತ ಹಾಗೂ ಅಪ್ಘಾನಿಸ್ತಾನದ ವಿರುದ್ದ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ಆಸೆಯಾಗಿದ್ದು, ರಾಹುಲ್ ಆಕರ್ಷಕ ಶತಕ ಸಿಡಿಸಿದ್ದಾರೆ. ಚಂಡಿಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಉತ್ತಮ ರನ್ ಪೇರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತ್ತು. ಕನ್ನಡಿಗ ಕೆಎಲ್ ರಾಹುಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದ ಯಶಸ್ವಿ ಜೈಸ್ವಾಲ್ ಕೇವಲ 24 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ರು. ನಂತರ ರಾಹುಲ್‌ಗೆ ಜೊತೆಯಾದ ಸಾಯಿ ಸುದರ್ಶನ್ 104 ಎಸೆತಗಳನ್ನು ಎದುರಿಸಿ 81 ರನ್ ಬಾರಿಸಿದ್ದಾರೆ.
Also Read : ಭಾರತ ಕ್ರಿಕೆಟ್ ತಂಡಕ್ಕೆ ವೈಭವ್ ಸೂರ್ಯವಂಶಿ ಎಂಟ್ರಿ : ಶ್ರೇಯಸ್ ಅಯ್ಯರ್ ನಾಯಕ
ಕನ್ನಡಿಗ ಕೆಎಲ್ ರಾಹುಲ್ 165 ಎಸೆತಗಳನ್ನು ಎದುರಿಸಿ 11 ಬೌಂಡರಿಗಳನ್ನು ಒಳಗೊಂಡ ಆಕರ್ಷಕ ಶತಕ ಸಿಡಿಸಿದ್ದಾರೆ. ನಂತರ ನಾಯಕ ಶುಭಮನ್ ಗಿಲ್ 65 ರನ್ ಗಳಿಸಿದ್ದು, ಗಿಲ್ ಜೊತೆಗೆ ರಿಷಬ್ ಪಂತ್ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅಫ್ಗಾನಿಸ್ತಾನ ತಂಡದ ಪರವಾಗಿ ಸಲೀಮ್ ಶಫಿ 2 ಹಾಗೂ ರೆಹಮಾನ್ ಶಫಿ 1 ವಿಕೆಟ್ ಪಡೆದಿದ್ದಾರೆ. ಭಾರತ 66 ಓವರ್ ಗಳಲ್ಲಿ 285 ರನ್ ಬಾರಿಸಿದೆ.
ಭಾರತ ಕ್ರಿಕೆಟ್ ತಂಡ : ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್‌ಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ
ಅಫ್ಘಾನಿಸ್ತಾನ್ ತಂಡದ ಆಟಗಾರರು: ಸೆದಿಕುಲ್ಲಾ ಅಟಲ್, ರಹಮಾನುಲ್ಲಾ ಗುರ್ಬಾಜ್, ಅಬ್ದುಲ್ ಮಲಿಕ್, ರಹಮತ್ ಶಾ, ಹಷ್ಮತುಲ್ಲಾ ಶಾಹಿದಿ (ನಾಯಕ), ಅಫ್ಸರ್ ಜಜಾಯ್ (ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್ಜಾಯ್, ಶರಾಫುದ್ದೀನ್ ಅಶ್ರಫ್, ನಂಗೆಯಾಲಿ.
India vs Afghanistan 1st test Live Score KL Rahul century



