IPL 2026 : ಆರ್ಸಿಬಿ ಅಭಿಮಾನಿಗಳ ಸ್ಮರಣಾರ್ಥ ಸ್ಮಾರಕ ನಿರ್ಮಾಣ : ವಿಘ್ನ ನಿವಾರಣೆಗೆ ಚಿನ್ನಸ್ವಾಮಿಯಲ್ಲಿ ಹೋಮ-ಹವನ
ಕಳೆದ ವರ್ಷ ಜೂನ್ 4 ಆರ್ಸಿಬಿ ಅಭಿಮಾನಿಗಳ ಪಾಲಿಗೆ ಕರಾಳ ದಿನವಾಗಿತ್ತು. ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದಿದ್ದ ಆರ್ಸಿಬಿ ಆಟಗಾರರು ಬೆಂಗಳೂರಿನಲ್ಲಿ ವಿಜಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದರು.

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ ( Indian Premier League) ಗೆ ಕ್ಷಣಗಣನೆ ಆರಂಭಗೊಂಡಿದೆ. ಐಪಿಎಲ್ ( IPL 2026) ಆರಂಭಿಕ ಪಂದ್ಯ ಬೆಂಗಳೂರಲ್ಲಿ ನಡೆಯಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣ (chinnaswamy stadium ) ಸರ್ವ ರೀತಿಯಲ್ಲಿಯೂ ಸಜ್ಜಾಗುತ್ತಿದೆ. ಈ ನಡುವಲ್ಲೇ ಐಪಿಎಲ್ ವಿಜಯೋತ್ಸವದ ಸಂಭ್ರಮದಲ್ಲಿ ಮಡಿದವರಿಗೆ ಹೋಮ -ಹವನದ ಜೊತೆಗೆ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದೆ.
ಕಳೆದ ವರ್ಷ ಜೂನ್ 4 ಆರ್ಸಿಬಿ ಅಭಿಮಾನಿಗಳ ಪಾಲಿಗೆ ಕರಾಳ ದಿನವಾಗಿತ್ತು. ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದಿದ್ದ ಆರ್ಸಿಬಿ ಆಟಗಾರರು ಬೆಂಗಳೂರಿನಲ್ಲಿ ವಿಜಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದರು.
ಈ ವರ್ಷದ ಐಪಿಎಲ್ ಪಂದ್ಯಾವಳಿ ಆರಂಭಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಮೃತ ಆರ್ಸಿಬಿ ಅಭಿಮಾನಿಗಳ ಸ್ಮರಣಾರ್ಥ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸದೇ ಇರಲಿ ಎಂದು ಪ್ರಾರ್ಥಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೃತ್ಯುಂಜಯ ಹೋಮ,ಗಣಹೋಮ ಹಾಗೂ ಲಕ್ಷ್ಮೀ ಹೋಮ ನೆರವೇರಿಸಲಾಯಿತು.
Also Read : ಐಪಿಎಲ್ನ ಶ್ರೀಮಂತ ತಂಡವಾಗಿ ಹೊರಹೊಮ್ಮಿದ ಆರ್ಸಿಬಿ: ದಾಖಲೆಯ ಮೊತ್ತಕ್ಕೆ ಮಾರಾಟ
ಗೃಹಸಚಿವ ಡಾ. ಜಿ ಪರಮೇಶ್ವರ್, ಶಾಸಕ ಎನ್.ಎ ಹ್ಯಾರಿಸ್, ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸೇರಿದಂತೆ ಅನೇಕರು ಭಾಗಿಯಾಗಿದ್ರು. ಅಲ್ಲದೇ ಚಿನ್ನಸ್ವಾಮಿಯ ಗೇಟುಗಳಿಗೆ ಬೂದುಗುಂಬಳಕಾಯಿಗಳನ್ನು ಒಡೆಯುವ ಮೂಲಕ ದೃಷ್ಠಿಯನ್ನೂ ತೆಗೆಯಲಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನ ಆವರಣದಲ್ಲಿಯೇ ನಿರ್ಮಿಸಲಾದ ಸ್ಮಾರಕಕ್ಕೆ ʻಮೆಮೋರಿ ಆಫ್ ಫ್ಯಾನ್ಸ್ ಜೂನ್-4 2025ʼ ಎಂದು ಹೆಸರಿಡಲಾಗಿದೆ. ಇನ್ನು ಆರ್ಸಿಬಿ ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಸೀಟುಗಳು ಹಾಗೆಯೇ ಖಾಲಿ ಬಿಡುವುದಾಗಿ ಹೇಳಿದೆ. ಇದೇ ವಿಚಾರವಾಗಿ ಮಾತನಾಡಿದ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಆ ಸೀಟುಗಳನ್ನು ಎಂದಿಗೂ ಮಾರಾಟ ಮಾಡುವುದಿಲ್ಲ ಎಂದಿದ್ದಾರೆ.
Also Read : IPL 2026: “ಈ ಬಾರಿ ಸವಾಲು ಅಷ್ಟು ಸುಲಭವಲ್ಲ : ಸಹ ಆಟಗಾರರಿಗೆ ವಿರಾಟ್ ಕೊಹ್ಲಿ ಖಡಕ್ ಎಚ್ಚರಿಕೆ
IPL 2026 rcb fans memorial chinnaswamy stadium homa Havana news



