ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಎದುರಾಯ್ತು ಸಂಕಷ್ಟ: ಖಾಯಂ ಕ್ಯಾಪ್ಟನ್ ಫಿಕ್ಸ್ ಮಾಡಲು ಬಿಸಿಸಿಐ ಮಾಸ್ಟರ್ ಪ್ಲಾನ್!
ಭಾರತ ಹಾಗೂ ಅಪ್ಘಾನಿಸ್ತಾನ ನಡುವಿನ ಸರಣಿಯ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕನಾಗಿರುವ ಶ್ರೇಯಸ್ ಅಯ್ಯರ್ ಇಂಗ್ಲೆಂಡ್, ಐರ್ಲೆಂಡ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿಯೂ ಭಾರತ ಟಿ20 ತಂಡವನ್ನು ಮುನ್ನೆಡೆಸಲಿದ್ದಾರೆ. ಆದರೆ ಬಿಸಿಸಿಐ ಅವರನ್ನು ಖಾಯಂ ನಾಯಕನನ್ನಾಗಿ ಪರಿಗಣಿಸುವ ಸಾಧ್ಯತೆ ಅಸಾಧ್ಯ ಅನ್ನೋ ಮಾಹಿತಿ ಹೊರಬಿದಿದ್ದೆ.

ಭಾರತ ಹಾಗೂ ಅಪ್ಘಾನಿಸ್ತಾನ ನಡುವಿನ ಸರಣಿಯ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕನಾಗಿರುವ ಶ್ರೇಯಸ್ ಅಯ್ಯರ್ ಇಂಗ್ಲೆಂಡ್, ಐರ್ಲೆಂಡ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿಯೂ ಭಾರತ ಟಿ20 ತಂಡವನ್ನು ಮುನ್ನೆಡೆಸಲಿದ್ದಾರೆ. ಆದರೆ ಬಿಸಿಸಿಐ ಅವರನ್ನು ಖಾಯಂ ನಾಯಕನನ್ನಾಗಿ ಪರಿಗಣಿಸುವ ಸಾಧ್ಯತೆ ಅಸಾಧ್ಯ ಅನ್ನೋ ಮಾಹಿತಿ ಹೊರಬಿದಿದ್ದೆ.
ಐಪಿಎಲ್ 2026ರಲ್ಲಿ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರು ತೋರಿದ ಪ್ರದರ್ಶನದ ಜೊತೆಗೆ ನಾಯಕತ್ವದ ಕಾರಣದಿಂದಲೇ ಭಾರತ ಟಿ20 ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಒಟ್ಟು ನಾಲ್ಕು ಸರಣಿಗಳಿಗೆ ಶ್ರೇಯಸ್ ಅಯ್ಯರ್ ನಾಯಕನಾಗಿ ಆಯ್ಕೆಯಾಗುತ್ತಲೇ, ಭಾರತ ತಂಡದ ಪೂರ್ಣಕಾಲಿಕ ನಾಯಕ ಎಂದು ಹೇಳಲಾಗಿತ್ತು.
ಆದ್ರೆ ಬಿಸಿಸಿಐ ಹೊಸ ಲೆಕ್ಕಾಚಾರವನ್ನು ಶುರುವಿಟ್ಟುಕೊಂಡಿದೆ. ಭಾರತ ಕ್ರಿಕೆಟ್ ತಂಡದ ನಾಯಕನಾಗಿದ್ದ ಸೂರ್ಯಕುಮಾರ್ ಯಾದವ್ ಬದಲು ಶ್ರೇಯಸ್ ಅಯ್ಯರ್ಗೆ ಪಟ್ಟ ಕಟ್ಟಿದ್ದರೂ ಕೂಡ, ನಾಯಕನಾಗಿ ಶ್ರೇಯಸ್ ಅಯ್ಯರ್ ಸರಣಿ ಜಯಿಸಿದ್ದರೂ, ಆಟಗಾರನಾಗಿ ವೈಫಲ್ಯ ಅನುಭವಿಸಿದ್ದಾರೆ.
ಇದನ್ನೂ ಓದಿ : ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಗೆ ಲಂಕಾ ಉಡೀಸ್: ಕೇವಲ 6 ರನ್ನಿಂದ ಕೈತಪ್ಪಿದ ವಿಶ್ವ ದಾಖಲೆಯ ಶತಕ!
ಅಪ್ಘಾನಿಸ್ತಾನ ವಿರುದ್ದದ ಸರಣಿಯಲ್ಲಿ ಅಯ್ಯರ್ ನಿರಾಸೆ ಮೂಡಿಸಿದ್ದಾರೆ. ಇಂಗ್ಲೆಂಡ್ ವಿರುದ್ದ 5 ಹಾಗೂ ಐರ್ಲೆಂಡ್ ವಿರುದ್ದ 2 ಪಂದ್ಯಗಳ ಸರಣಿಯನ್ನು ಭಾರತ ಆಡಲಿದೆ. ನಂತರದಲ್ಲಿ ಏಷ್ಯನ್ ಗೇಮ್ಸ್ನಲ್ಲಿಯೂ ತಂಡವನ್ನು ಅಯ್ಯರ್ ಮುನ್ನೆಡೆಸುತ್ತಾರೆ. ಒಂದೊಮ್ಮೆ ಅವರಿಂದ ನಿರೀಕ್ಷಿತ ಫಲಿತಾಂಶ ಸಿಗದೇ ಹೋದ್ರೆ ಅವರ ನಾಯಕತ್ವಕ್ಕೆ ಕುತ್ತುಬರುವುದು ಪಕ್ಕಾ. ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದರೂ ಕೂಡ ಬ್ಯಾಟಿಂಗ್ ವೈಫಲ್ಯದ ಕಾರಣದಿಂದಲೇ ಅವರು ನಾಯಕತ್ವದ ಜೊತೆಗೆ ತಂಡದಿಂದಲೂ ಹೊರಬಿದ್ದಿದ್ದಾರೆ.
ಇದೀಗ ಶ್ರೇಯಸ್ ಅಯ್ಯರ್ ಕೂಡ ಇದೇ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಮುಂದಿನ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ಮಿಂಚು ಹರಿಸಿದ್ರೆ ಮಾತ್ರವೇ ಶ್ರೇಯಸ್ ಅಯ್ಯರ್ ನಾಯಕನಾಗಿ ಮುಂದುವರಿಯಲಿದ್ದಾರೆ. ಒಂದೊಮ್ಮೆ ಶ್ರೇಯಸ್ ಅಯ್ಯರ್ ನಾಯಕತ್ವ ಕಳೆದುಕೊಂಡ್ರೆ, ಆ ಸ್ಥಾನ ಶುಭಮನ್ ಗಿಲ್ ಪಾಲಾಗುವ ಸಾಧ್ಯತೆಯಿದೆ. ಈಗಾಗಲೇ ಟೆಸ್ಟ್ ಹಾಗೂ ಏಕದಿನ ತಂಡವನ್ನು ಸಮರ್ಥವಾಗಿ ಮುನ್ನೆಡೆಸುತ್ತಿರುವ ಶುಭಮನ್ ಗಿಲ್ ಸದ್ಯ ಬ್ಯಾಟಿಂಗ್ ನಲ್ಲಿಯೂ ಮಿಂಚು ಹರಿಸುತ್ತಿದ್ದಾರೆ. ಭವಿಷ್ಯದ ಕ್ರಿಕೆಟ್ ದೃಷ್ಟಿಯಿಂದ ಶುಭಮನ್ ಗಿಲ್ ಅವರಿಗೆ ಪಟ್ಟ ಕಟ್ಟಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.



