KL Rahul : ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ? ಬೆಂಗಳೂರು ತಂಡಕ್ಕೆ ಕೆಎಲ್‌ ರಾಹುಲ್‌ ? ವಿರಾಟ್ ಕೊಹ್ಲಿ ಮಾಸ್ಟರ್ ಪ್ಲಾನ್ ಲೀಕ್ !

ಐಪಿಎಲ್‌ 2027ರಲ್ಲಿ ಆರ್‌ಸಿಬಿ ಮತ್ತೆ ಟ್ರೋಫಿ ಗೆಲ್ಲಲು ಬೇಕಾದ ಎಲ್ಲಾ ಕಸರತ್ತು ನಡೆಸುತ್ತಿದೆ. ತಡವಾಗಿ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ್ದರೂ ಕೂಡ ಹ್ಯಾಟ್ರಿಕ್‌ ಟ್ರೋಫಿ ಗೆಲ್ಲುವ ಸಾಧನೆಯನ್ನು ಯಾವುದೇ ತಂಡ ಕೂಡ ಮಾಡಿಲ್ಲ. ಆರ್‌ಸಿಬಿ ಹ್ಯಾಟ್ರಿಕ್‌ ಸಾಧನೆ ಮಾಡೋದಕ್ಕೆ ಬೇಕಾದ ಎಲ್ಲಾ ಕಸರತ್ತು ನಡೆಸುತ್ತಿದೆ.

  • ಮಗಾ ಹರಾಜಿಗೂ ಮುನ್ನ ಐಪಿಎಲ್ ಅಂಗಳದಲ್ಲಿ ಶುರುವಾಯ್ತು ಭಾರಿ ಚರ್ಚೆ!
  • ಕನ್ನಡಿಗ ಕೆ.ಎಲ್. ರಾಹುಲ್ ಆರ್‌ಸಿಬಿ ಸೇರ್ಪಡೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್
  • ಬೆಂಗಳೂರು ತಂಡದ ಬಿಗ್ ಪ್ಲಾನ್ ಏನು? ಇಲ್ಲಿದೆ ಕಂಪ್ಲೀಟ್ ಇನ್‌ಸೈಡ್ ರಿಪೋರ್ಟ್

Virat kohlikl Rahul ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (IPL 2026)ನ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಂದಿನ ನಡೆಯ ಬಗ್ಗೆ ಬಾರೀ ಚರ್ಚೆಗಳು ನಡೆಯುತ್ತಿದೆ. ಸತತ ಎರಡು ಬಾರಿ ಐಪಿಎಲ್‌ ಟ್ರೋಫಿ ಗೆದ್ದಿರುವ ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸು ಕಾಣುತ್ತಿದೆ. ಜೊತೆಗೆ ಕನ್ನಡಿಗ ಕೆಎಲ್‌ ರಾಹುಲ್‌ (KL Rahul) ಬೆಂಗಳೂರು ತಂಡಕ್ಕೆ ಮರಳಲಿದ್ದಾರೆ. ಇದಕ್ಕಾಗಿಯೇ ವಿರಾಟ್‌ ಕೊಹ್ಲಿ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರಂತೆ.

ಮತ್ತೆ ಒಂದಾಗುತ್ತಾ ವಿರಾಟ್ – ರಾಹುಲ್ ಜೋಡಿ ?

ಹೌದು, ಕನ್ನಡಿಗರ ನೆಚ್ಚಿನ ತಂಡವಾಗಿರುವ ಆರ್‌ಸಿಬಿಯಲ್ಲಿ ಪ್ರಮುಖ ಆಟಗಾರನಾಗಿ ಮಿಂಚಿದ್ದ ಕೆಎಲ್ ರಾಹುಲ್ ನಂತರದಲ್ಲಿ ಇತರರ ತಂಡಗಳ ನಾಯಕನಾಗಿ ಆಡಿದ್ದರು. ಆದರೆ ಯಾವುದೇ ತಂಡದ ಪರ ಕಣಕ್ಕೆ ಇಳಿದರೂ ಕೂಡ ಕೆಎಲ್‌ ರಾಹುಲ್‌ ಕನ್ನಡಿಗರ ಪಾಲಿನ ಹಾಟ್‌ ಫೇವರೇಟ್‌ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದ್ರಲ್ಲೂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಹಾಗೂ ಬೆಂಗಳೂರಿನ ಅಭಿಮಾನಿಗಳ ಜೊತೆಗೆ ಉತ್ತಮ ಒಡನಾಟವಿದೆ.

ಬೆಂಗಳೂರು ತಂಡ ವಿರಾಟ್‌ ಕೊಹ್ಲಿ ಸಾರಥ್ಯದಲ್ಲಿ ಮುನ್ನೆಡೆದಿದೆ. ಆದರೆ ಆರ್‌ಸಿಬಿ ಬಲಿಷ್ಠ ವಿಕೆಟ್‌ ಕೀಪರ್‌ ಜೊತೆಗೆ ನಾಯಕತ್ವ ನಿಭಾಯಿಸಬಲ್ಲ ಆಟಗಾರನ ಅಗತ್ಯವಿದೆ. ಆರ್‌ಸಿಬಿಗೆ ಸಮರ್ಥ ಅನ್ನೋ ಅರ್ಹತೆ ಇರೋದು ಕೆಎಲ್‌ ರಾಹುಲ್‌ಗೆ ಮಾತ್ರ. ವಿರಾಟ್‌ ಜೊತೆಗೂ ರಾಹುಲ್‌ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲದೇ ಇಬ್ಬರ ಜೊತೆಯಾಟ ತಂಡಕ್ಕೆ ನೆರವಾಗೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಕೆಎಲ್‌ ರಾಹುಲ್‌ ಅವರನ್ನು ಆರ್‌ಸಿಬಿಗೆ ಕರೆತರುವ ನಿಟ್ಟಿನಲ್ಲಿ ವಿರಾಟ್‌ ಕೊಹ್ಲಿ ಚಿಂತನೆ ನಡೆಸಿದ್ದಾರಂತೆ.

Also Read : Vaibhav suryavanshi : ಸಚಿನ್ 36 ವರ್ಷದ ರೆಕಾರ್ಡ್ ಬ್ರೇಕ್: ಇಲ್ಲಿದೆ ವೈಭವ್‌ ಸೂರ್ಯವಂಶಿ ಕಣ್ಣೀರ ಕಥೆ

ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನ ಮಾಸ್ಟರ್ ಸ್ಟ್ರೋಕ್

ಐಪಿಎಲ್‌ 2027ರಲ್ಲಿ ಆರ್‌ಸಿಬಿ ಮತ್ತೆ ಟ್ರೋಫಿ ಗೆಲ್ಲಲು ಬೇಕಾದ ಎಲ್ಲಾ ಕಸರತ್ತು ನಡೆಸುತ್ತಿದೆ. ತಡವಾಗಿ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ್ದರೂ ಕೂಡ ಹ್ಯಾಟ್ರಿಕ್‌ ಟ್ರೋಫಿ ಗೆಲ್ಲುವ ಸಾಧನೆಯನ್ನು ಯಾವುದೇ ತಂಡ ಕೂಡ ಮಾಡಿಲ್ಲ. ಆರ್‌ಸಿಬಿ ಹ್ಯಾಟ್ರಿಕ್‌ ಸಾಧನೆ ಮಾಡೋದಕ್ಕೆ ಬೇಕಾದ ಎಲ್ಲಾ ಕಸರತ್ತು ನಡೆಸುತ್ತಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹೊಸ ಮ್ಯಾನೇಜ್ಮೆಂಟ್‌ ಜೊತೆಗೆ ಕಣಕ್ಕೆ ಇಳಿದೆ. ಅದರಲ್ಲೀ ಸಕ್ಸಸ್‌ ಕಂಡಿದ್ದರೂ ಕೂಡ ಕನ್ನಡಿಗ ಆಟಗಾರರು ತಂಡದಲ್ಲಿ ಇಲ್ಲಾ ಅನ್ನುವ ಕೊರಗು ಅಭಿಮಾನಿಗಳನ್ನು ಕಾಡುತ್ತಿದೆ. ಇದೇ ಕಾರಣದಿಂದಲೇ ಮುಂಬರುವ ಹರಾಜಿನಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಅನ್ನೋ ಒತ್ತಾಯ ಅಭಿಮಾನಿಗಳಿಂದ ಕೇಳಿಬರ್ತಿದೆ.

ಆರ್‌ಸಿಬಿಗೆ ಕೆಎಲ್‌ ರಾಹುಲ್‌ ನಾಯಕ ?

ಒಂದೊಮ್ಮೆ ಕೆಎಲ್‌ ರಾಹುಲ್‌ ಆರ್‌ಸಿಬಿ ತಂಡಕ್ಕೆ ಸೇರ್ಪಡೆ ಆದ್ರೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟಿಂಗ್‌ ಲೈನ್‌ ಅಪ್‌ ಮತ್ತಷ್ಟು ಗಟ್ಟಿಯಾಗಲಿದೆ. ವಿರಾಟ್‌ ಕೊಹ್ಲಿ ಜೊತೆಗೆ ಇನ್ನಿಂಗ್ಸ್‌ ಆರಂಭಿಸೋದಕ್ಕೂ ಸಹಕಾರಿಯಾಗಲಿದೆ. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿಯೂ ತಂಡಕ್ಕೆ ನೆರವಾಗುವ ತಾಕತ್ತು ಇರುವ ಆಟಗಾರ. ಜೊತೆಗೆ ತಂಡದ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಲು ಚಾಣಾಕ್ಯತೆ ರಾಹುಲ್‌ಗೆ ಇದೆ.

Also Read : India vs Afghanistan 1st test Live : ಕೆಎಲ್‌ ರಾಹುಲ್‌ ಶತಕ, ಅಪ್ಘಾನ್‌ ವಿರುದ್ದ ಭಾರತದ ಅಬ್ಬರ

ಆರ್‌ಸಿಬಿ ತಂಡವನ್ನು ರಜತ್‌ ಪಾಟೀದಾರ್‌ ಮುನ್ನೆಡೆಸುತ್ತಿದ್ದಾರೆ. ನಾಯಕತ್ವದಲ್ಲಿ ಸಕ್ಸಸ್‌ ಕಂಡಿದ್ದಾರೆ. ಆದರೆ ಕನ್ನಡಿಗರೇ ಕನ್ನಡಿಗರ ತಂಡವನ್ನು ಮುನ್ನೆಡೆಸಿದ್ರೆ ಫ್ಯಾನ್ಸ್‌ಗಳ ಸಂಖ್ಯೆಯಲ್ಲಿಯೂ ಬಾರೀ ಏರಿಕೆ ಆಗುವ ಸಾಧ್ಯತೆಯಿದೆ. ಇದೇ ಕಾರಣದಿಂದಲೂ ಆರ್‌ಸಿಬಿ ತಂಡದ ಆಡಳಿತ ಮಂಡಳಿ ಲೆಕ್ಕಾಚಾರವನ್ನು ಹಾಕುತ್ತಿದೆ.

ಕೆಎಲ್‌ ರಾಹುಲ್‌ ಅವರು ಆರ್‌ಸಿಬಿ ಜರ್ಸಿಯಲ್ಲಿರುವ ಹಳೆಯ ಪೋಟೋಗಳು ಕೂಡ ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ ಗಳಲ್ಲಿ ವೈರಲ್‌ ಆಗುತ್ತಿದ್ದು,’ಕಮ್ ಬ್ಯಾಕ್ ರಾಹುಲ್’ ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಒಂದು ವೇಳೆ ಹರಾಜಿನಲ್ಲಿ ಆರ್‌ಸಿಬಿ ಕೈಯಲ್ಲಿರುವ ಭಾರಿ ಮೊತ್ತವನ್ನು ಬಳಸಿ ರಾಹುಲ್ ಅವರನ್ನು ಬಿಡ್ ಮಾಡಿ ತನ್ನದಾಗಿಸಿಕೊಂಡರೆ, ಮುಂದಿನ ಸೀಸನ್‌ನಲ್ಲಿ ಆರ್‌ಸಿಬಿ ಕಪ್ ಗೆಲ್ಲುವ ಕನಸು ನನಸಾಗುವ ಸಾಧ್ಯತೆ ಹೆಚ್ಚಿದೆ.

virat kohli kl Rahul rcb mega auction ipl 2027 updates cricket news kannada

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories