Vaibhav suryavanshi : ಸಚಿನ್ 36 ವರ್ಷದ ರೆಕಾರ್ಡ್ ಬ್ರೇಕ್: ಇಲ್ಲಿದೆ ವೈಭವ್‌ ಸೂರ್ಯವಂಶಿ ಕಣ್ಣೀರ ಕಥೆ

1989 ರಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ 16ನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಆ ದಾಖಲೆಯನ್ನು ಮುರಿಯಲು ಇಷ್ಟು ವರ್ಷ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಆದರೆ, ಇವತ್ತು ಆ ದಾಖಲೆ ಕ್ರಿಕೆಟ್‌ ಜಗತ್ತಿನ ವಂಡರ್‌ ಬಾಯ್‌ ವೈಭವ್‌ ಸೂರ್ಯವಂಶಿ ಉಡೀಸ್‌ ಮಾಡಿದ್ದಾನೆ.

ಬಿಹಾರ : ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಚರಿತ್ರೆಯೊಂದು ಸೃಷ್ಟಿಯಾಗಿದೆ. ಮಾಸ್ಟರ್‌ ಬ್ಲಾಸ್ಟರ್‌, ಕ್ರಿಕೆಟ್‌ ದೇವರು ಎಂದೇ ಖ್ಯಾತರಾಗಿದ್ದ ಸಚಿನ್‌ ತೆಂಡೂಲ್ಕರ್‌ ಅವರ 36 ವರ್ಷಗಳ ಹಳೆಯ ದಾಖಲೆಯನ್ನೇ ಇದೀಗ 15 ವರ್ಷದ ಬಾಲಕನೋರ್ವ ಉಡೀಸ್‌ ಮಾಡಿದ್ದಾನೆ. ಕ್ರಿಕೆಟ್‌ ಜಗತ್ತಿನ ವಂಡರ್‌ ಬಾಯ್‌ ಅಂತಾನೇ ಕರೆಯಿಸಿಕೊಳ್ಳುತ್ತಿರುವ ವೈಭವ್‌ ಸೂರ್ಯವಂಶಿ ಕ್ರಿಕೆಟ್‌ ಬದುಕಿನ ಹಿಂದಿನ ಕಣ್ಣೀರ ಕಥೆ ಇಲ್ಲಿದೆ ನೋಡಿ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಇಂದು ಮುಂಬರುವ ಐರ್ಲೆಂಡ್‌, ಇಂಗ್ಲೆಂಡ್‌ ವಿರುದ್ದ ಟಿ20 ಸರಣಿ ಹಾಗೂ ಏಷ್ಯನ್‌ ಗೇಮ್ಸ್‌ಗೆ ಭಾರತ ಕ್ರಿಕೆಟ್‌ ತಂಡವನ್ನು ಆಯ್ಕೆ ಮಾಡಿದೆ. ಐಪಿಎಲ್‌ನಲ್ಲಿ ಅಬ್ಬರಿಸಿದ್ದ ವೈಭವ್‌ ಸೂರ್ಯವಂಶಿ ಅನ್ನೋ 15 ವರ್ಷ ಯುವ ಕ್ರಿಕೆಟಿಗ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದನೆ. ಮೂರು ಸರಣಿಗಳಿಗೂ ಆಯ್ಕೆಯಾಗುವ ಮೂಲಕ ತನ್ನ ತಾಕತ್ತು ತೋರಿಸಿದ್ದಾನೆ.

1989 ರಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ 16ನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಆ ದಾಖಲೆಯನ್ನು ಮುರಿಯಲು ಇಷ್ಟು ವರ್ಷ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಆದರೆ, ಇವತ್ತು ಆ ದಾಖಲೆ ಕ್ರಿಕೆಟ್‌ ಜಗತ್ತಿನ ವಂಡರ್‌ ಬಾಯ್‌ ವೈಭವ್‌ ಸೂರ್ಯವಂಶಿ ಉಡೀಸ್‌ ಮಾಡಿದ್ದಾನೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಈ 15 ವರ್ಷದ ಎಡಗೈ ಓಪನರ್ ಅನ್ನು ಭಾರತ ಕ್ರಿಕೆಟ್‌ ತಂಡಕ್ಕೆ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಬಿಸಿಸಿಐ ಅಧಿಕೃತವಾಗಿ ಟ್ವೀಟ್ ಮಾಡಿ ವೈಭವ್‌ ಸೂರ್ಯವಂಶಿಗೆ ಕಂಗ್ರಾಜುಲೇಷನ್ಸ್ ಹೇಳಿದೆ. ಒಂದು ವೇಳೆ ಐರ್ಲೆಂಡ್ ವಿರುದ್ಧ ಈತ ಮೈದಾನಕ್ಕಿಳಿದರೆ, ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಅನ್ನೋ ಇತಿಹಾಸ ಇವನ ಹೆಸರಿಗೆ ಸೇರಲಿದೆ.

ಐಪಿಎಲ್‌ನಲ್ಲಿ ಸೂರ್ಯವಂಶಿ ಅಬ್ಬರಕ್ಕೆ ಕ್ರಿಕೆಟ್‌ ಜಗತ್ತು ನಿಬ್ಬೆರಗು

ಕೇವಲ 15 ವರ್ಷಕ್ಕೆ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ, ಅದ್ರಲ್ಲೂ ಭಾರತದಂತಹ ವಿಶ್ವ ಶ್ರೇಷ್ಟ ತಂಡದಲ್ಲಿ ಆಡೋದಕ್ಕೆ ಅವಕಾಶ ಸಿಗೋದು ತೀರಾ ಅಪರೂಪ. ಆದರೆ ವೈಭವ್‌ ಸೂರ್ಯವಂಶಿ ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಇಂತಹದೊದು ವಿಶ್ವದಾಖಲೆ ಬರೆದಿದ್ದಾನೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026 ಸೀಸನ್. ಹೌದು, ರಾಜಸ್ಥಾನ್ ರಾಯಲ್ಸ್ ಪರ ಓಪನರ್ ಆಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಇಡೀ ಪಂದ್ಯಾವಳಿನ್ನೇ ಧ್ವಂಸ ಮಾಡಿದ್ದಾರೆ. ಕೇವಲ 16 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 776 ರನ್ ಸಿಡಿಸುವ ಮೂಲಕ ಆರೆಂಜ್ ಕ್ಯಾಪ್’ (Orange Cap) ತನ್ನದಾಗಿಸಿಕೊಂಡಿದ್ದಾನೆ.

ಕೇವಲ ಅತೀ ಹೆಚ್ಚು ರನ್‌ ಬಾರಿಸಿರುವುದು ಮಾತ್ರವಲ್ಲ, ಐಪಿಎಲ್‌ 2026ರ ಆವೃತ್ತಿಯಲ್ಲಿ ‘ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್’ (MVP) ಮತ್ತು ‘ಎಮರ್ಜಿಂಗ್ ಪ್ಲೇಯರ್’ ಪ್ರಶಸ್ತಿಯನ್ನು ಗೆದ್ದ ಇತಿಹಾಸದ ಮೊದಲ ಆಟಗಾರ ಇವನಾಗಿದ್ದಾನೆ. ವೆಸ್ಟ್ ಇಂಡೀಸ್ ಲೆಜೆಂಡ್ ಕ್ರಿಸ್ ಗೇಲ್ ಹೆಸರಲ್ಲಿದ್ದ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನೂ ಈ 15 ವರ್ಷದ ಹುಡುಗ ಮುರಿದು ಹಾಕಿದ್ದಾನೆ. ಇವನ ಬ್ಯಾಟಿಂಗ್ ವೈಖರಿ ಕಂಡು ಸೆಲೆಕ್ಟರ್ಸ್ ಇವನನ್ನ ತಂಡಕ್ಕೆ ಆಯ್ಕೆ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ವೈಭವ್‌ ಸೂರ್ಯವಂಶಿಗಾಗಿ ಆಸ್ತಿಯನ್ನೇ ಮಾರಾಟ ಮಾಡಿದ್ದ ತಂದೆ..!

ಜಸ್ಪ್ರಿತ್ ಬುಮ್ರಾ, ಪ್ಯಾಟ್ ಕಮಿನ್ಸ್ ರಂತಹ ವರ್ಲ್ಡ್ ಕ್ಲಾಸ್ ಬೌಲರ್‌ಗಳನ್ನೇ ಬೆದರಿಸಿದ ಈ ಬಿಹಾರದ ಬಾಲಕನ ಅಸಲಿ ಕಥೆ ಏನು ? ಆತ ಕ್ರಿಕೆಟ್‌ಗೆ ಬರಲು ಪಟ್ಟ ಕಷ್ಟಗಳೇನು? ಅನ್ನೋದು ನಿಮಗೆ ಗೊತ್ತಾ. ವೈಭವ್‌ ಸೂರ್ಯವಂಶಿಯನ್ನು ಕಂಡು ಅದೆಷ್ಟೋ ಪೋಷಕರು ತಮ್ಮ ಮಕ್ಕಳು ಇಂತಹದ್ದೇ ಸಾಧನೆ ಮಾಡಬೇಕು ಅಂತಾ ಕನಸು ಕಾಣ್ತಾರೆ. ಆದರೆ ವೈಭವ್‌ಗೆ ಈ ಸಾಧನೆ ಸುಲಭಕ್ಕೆ ಸಿಕ್ಕಿದ್ದಲ್ಲ.

Also Read : India vs Afghanistan 1st test Live : ಕೆಎಲ್‌ ರಾಹುಲ್‌ ಶತಕ, ಅಪ್ಘಾನ್‌ ವಿರುದ್ದ ಭಾರತದ ಅಬ್ಬರ

ಬಿಹಾರದ ತಾಜ್‌ಪುರ ಅನ್ನೋ ಒಂದು ಸಣ್ಣ ಹಳ್ಳಿಯಲ್ಲಿ ಮಾರ್ಚ್ 27, 2011 ರಂದು ವೈಭವ್‌ ಸೂರ್ಯವಂಶಿ ಜನಿಸಿದ್ದಾರೆ. ವೈಭವ್‌ ತಂದೆ ಸಂಜೀವ್ ಸೂರ್ಯವಂಶಿ ಸಾಮಾನ್ಯ ರೈತ. ಮಗನಿಗೆ ಕೇವಲ 4 ವರ್ಷ ಇರುವಾಗಲೇ ಕ್ರಿಕೆಟ್ ಬ್ಯಾಟ್ ಕೊಡಿಸಿ ಸ್ವತಃ ತಂದೆಯೇ ಕೋಚಿಂಗ್ ನೀಡಲು ಆರಂಭಿಸಿದ್ದರು.ಮಗನ ಕ್ರಿಕೆಟ್ ಕನಸಿಗಾಗಿ ತಂದೆ ತಮಗಿದ್ದ ಅಲ್ಪಸ್ವಲ್ಪ ಜಮೀನನ್ನೇ ಮಾರಿ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು.

ಅಲ್ಲಿಂದ ಶುರುವಾದ ಇವನ ಜರ್ನಿ ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿಗಳಲ್ಲಿ ದಾಖಲೆ ಬರೆಯುವಂತೆ ಮಾಡಿತು. ಕೇವಲ 12ನೇ ವಯಸ್ಸಿಗೆ ಬಿಹಾರ್ ಪರ ರಣಜಿ ಆಡಿದ ವೈಭವ್, 13ನೇ ವಯಸ್ಸಿಗೆ ಐಪಿಎಲ್ ಹರಾಜಿನಲ್ಲಿ 1.1 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದರು. ನಂತರ ಅಂಡರ್-19 ವರ್ಲ್ಡ್ ಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ ಚಚ್ಚಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು.

Also Read : ಭಾರತ ಕ್ರಿಕೆಟ್‌ ತಂಡಕ್ಕೆ ವೈಭವ್‌ ಸೂರ್ಯವಂಶಿ ಎಂಟ್ರಿ : ಶ್ರೇಯಸ್‌ ಅಯ್ಯರ್‌ ನಾಯಕ

ಈಗ ಬಿಸಿಸಿಐ ವೈಭವ್ ಸೂರ್ಯವಂಶಿಯನ್ನು ಕೇವಲ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗೆ ಮಾತ್ರವಲ್ಲ, ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ‘ಏಷ್ಯನ್ ಗೇಮ್ಸ್’ (Asian Games 2026) ತಂಡಕ್ಕೂ ಕೂಡ ಆಯ್ಕೆ ಮಾಡಿದೆ. ಸದ್ಯ ಶ್ರೇಯಸ್ ಅಯ್ಯರ್ ನಾಯಕತ್ವದ ಯುವ ಟೀಮ್ ಇಂಡಿಯಾದಲ್ಲಿ ವೈಭವ್ ಓಪನರ್ ಆಗಿ ಧಮಾಕಾ ಎಬ್ಬಿಸಲು ರೆಡಿಯಾಗಿದ್ದಾರೆ. ಕ್ರಿಕೆಟ್ ಪಂಡಿತರ ಪ್ರಕಾರ, ಭಾರತ ತಂಡಕ್ಕೆ ಸಿಕ್ಕ ಮುಂದಿನ ಸೂಪರ್ ಸ್ಟಾರ್ ಇವರೇ!

ಕಠಿಣ ಪರಿಶ್ರಮ ಮತ್ತು ಅದ್ಭುತ ಪ್ರತಿಭೆ ಇದ್ದರೆ ವಯಸ್ಸು ಕೇವಲ ಒಂದು ನಂಬರ್ ಅಷ್ಟೇ ಅನ್ನೋದನ್ನ ವೈಭವ್ ಸೂರ್ಯವಂಶಿ ಸಾಬೀತು ಮಾಡಿದ್ದಾರೆ. ನಿಮ್ಮ ಪ್ರಕಾರ, ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಐಪಿಎಲ್ ತರಹದ್ದೇ ಅಬ್ಬರ ಮುಂದುವರಿಸುತ್ತಾರಾ? ಅನ್ನೋ ಬಗ್ಗೆ ಕಮೆಂಟ್‌ ಮಾಡಿ. ಬಿಸಿಸಿಐ ಸೂರ್ಯವಂಶಿಯನ್ನು ಇಷ್ಟು ಸಣ್ಣ ವಯಸ್ಸಿನಲ್ಲಿ ಹಿರಿಯರ ತಂಡಕ್ಕೆ ಆಯ್ಕೆ ಮಾಡಿದ ನಿರ್ಧಾರ ಸರಿಯಾಗಿದೆಯಾ ಕಮೆಂಟ್‌ ಮಾಡಿ.

Vaibhav suryavanshi breaks Sachin Tendulkar 36 year old record cricket news kannada

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories