Fridge Blast : ಪ್ರಿಡ್ಜ್ ಸ್ಪೋಟ ; ಮನೆಯಲ್ಲಿದ್ದ ಮೂವರು ಸಾವು , ಇಬ್ಬರಿಗೆ ಗಾಯ

ತಮಿಳುನಾಡು : (Fridge Blast)ಪ್ರಿಡ್ಜ್ ಸ್ಪೋಟಗೊಂಡು ಒಂದೇ ಮನೆಯ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಚೆಂಗಲ್‌ ಪೇಟ್‌ ಜಿಲ್ಲೆಯ ಗುಡುವಂಚೇರಿಯಲ್ಲಿ ನಡೆದಿದೆ. ಗುಡುವಂಚೇರಿಯಲ್ಲಿರುವ ಆರ್‌ ಆರ್‌ ಬೃಂದಾವನ ಅಪಾರ್ಟ್‌ ಮೆಂಟ್‌ ನಲ್ಲಿರುವ ದಿ. ವೆಂಕಟರಾಮನ್‌ ಎಂಬುವವರ ಮನೆಯಲ್ಲಿ ರಾತ್ರಿ ವೇಳೆಯಲ್ಲಿ ಈ ದುರ್ಘಟನೆ(Fridge Blast) ಸಂಭವಿಸಿದೆ.

ಗಿರಿಜಾ (63 ವರ್ಷ), ಅವರ ಸಹೋದರಿ ರಾಧಾ(55 ವರ್ಷ), ಸಹೋದರ ರಾಜಕುಮಾರ್‌(47 ವರ್ಷ ) ಎಂಬವರೇ ಮೃತ ದುರ್ದೈವಿಗಳು. ದುಬೈನಲ್ಲಿ ನೆಲೆಸಿದ್ದ ವೆಂಕಟರಾಮನ್‌ ಅವರ ಪತ್ನಿ ಗಿರಿಜಾ ಎನ್ನುವವರು ತಮ್ಮ ಕುಟುಂಬದ ಸಮೇತ ತನ್ನ ಪತಿ ವೆಂಕಟರಾಮನ್‌ ಅವರ ವರ್ಷದ ಪೂಜೆ ಹಿನ್ನೆಲೆಯಲ್ಲಿ ತಮಿಳುನಾಡಿನ ತಮ್ಮ ಮನೆಗೆ ಆಗಮಿಸಿದ್ದರು. ರಾತ್ರಿ ಮಲಗಿದ್ದ ವೇಳೆಯಲ್ಲಿ ಅವರ ಮನೆಯ ಪ್ರಿಡ್ಜ್‌ ಸ್ಪೋಟ(Fridge Blast)ಗೊಂಡಿದೆ. ಮನೆಯ ತುಂಬೆಲ್ಲಾ ದಟ್ಟ ಹೊಗೆ ಆವರಿಸಿಕೊಂಡು ಮನೆಯಲ್ಲಿದ್ದ ಮೂವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ರಾಜ್‌ ಕುಮಾರ್‌ ಅವರ ಪತ್ನಿ ಭಾರ್ಗವಿ(35 ವರ್ಷ) ಮತ್ತು ಮಗಳು ಆರಾಧನಾ(6 ವರ್ಷ)ಗಾಯಗೊಂಡಿದ್ದು, ಇಬ್ಬರನ್ನೂ ಕ್ರೋಂಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : A terrible road accident : ಭೀಕರ ರಸ್ತೆ ಅಪಘಾತ : 6 ಮಂದಿ ಸಾವು, ಮೂವರು ಗಂಭೀರ

ಇದನ್ನೂ ಓದಿ : Umesh Reddy: ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ರದ್ದು: ಸುಪ್ರೀಂಕೋರ್ಟ್ ಆದೇಶ

ಇದನ್ನೂ ಓದಿ : Death due to crane collapse : ಕ್ರೇನ್ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

ಪ್ರಿಡ್ಜ್‌ ಸ್ಪೋಟಗೊಳ್ಳುತ್ತಿದ್ದಂತೆ, ಅದರ ಶಬ್ಧವನ್ನು ಕೇಳಿ ಅಕ್ಕಪಕ್ಕದ ಅಪಾರ್ಟ್‌ ಮೆಂಟ್‌ನಲ್ಲಿದ್ದರು ಓಡಿ ಬಂದಿದ್ದಾರೆ. ಅಲ್ಲದೇ ಮನೆಯ ಬಾಗಿಲನ್ನು ಒಡೆಯಲು ಯತ್ನಿಸಿದ್ದಾರೆ. ಆದರೆ ದುರದೃಷ್ಟವಶಾತ್ ಮೂವರ ಪ್ರಾಣಪಕ್ಷ ಹಾರಿ ಹೋಗಿತ್ತು. ಸ್ಥಳೀಯರು ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಇಬ್ಬರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಫ್ರಿಡ್ಜ್ ಸ್ಪೋಟಗೊಂಡಿದೆ ಅನ್ನೋದು ತಿಳಿದು ಬಂದಿಲ್ಲ.

(Fridge Blast) The incident took place in Guduvanchery of Chengalpet district of Tamil Nadu in which three people of the same house were killed and two were injured due to a fridge explosion. The RR Brindavan Apartment in Guduvanchery. This accident (Fridge Blast) happened at night time in the house of Venkataraman.

Comments are closed.