Chandra Grahan 2022 : ಕುಕ್ಕೆಸುಬ್ರಹ್ಮಣ್ಯದಲ್ಲಿ ಚಂದ್ರಗ್ರಹಣ ಹಿನ್ನೆಲೆ ಪೂಜೆ ಅನ್ನದಾನ ಸೇವೆ ಬಂದ್

ಸುಬ್ರಹ್ಮಣ್ಯ : ಸೂರ್ಯ ಗ್ರಹಣದ ಬೆನ್ನಲ್ಲೇ ಇದೀಗ ಚಂದ್ರಗ್ರಹಣ (Chandra Grahan 2022)ಸಂಭವಿಸಲಿದೆ. ನವೆಂಬರ್‌ 8ರಂದು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಪೂಜೆಯನ್ನು ಬಂದ್ ಮಾಡಲಾಗುತ್ತಿದೆ. ಇದೀಗ ರಾಜ್ಯದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂದ್ರಗ್ರಹಣದ ದಿನದಂದು ಯಾವುದೇ ಸೇವೆಗಳು ನಡೆಯುವುದಿಲ್ಲ. ಅಲ್ಲದೇ ಅನ್ನದಾನವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ನಾಗಾರಾಧನೆಯ ಪುಣ್ಯ ತಾಣವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್‌ 8ರಂದು ಚಂದ್ರಗ್ರಹಣದ ಇರುವುದರಿಂದ ಯಾವುದೇ ಸೇವೆಗಳು ನೆರವೇರುವುದಿಲ್ಲ. ಆದರೆ ದೇವಳ ಪ್ರಧಾನ ಅರ್ಚಕರ ನಿರ್ದೇಶನದಂತೆ ದೇವರ ದರ್ಶನದ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿರುತ್ತದೆ. ಅದರಂತೆ ಬೆಳಗ್ಗೆ 9ಗಂಟೆಯಿಂದ 11.30ರ ತನಕ, ಮಧ್ಯಾಹ್ನ ಗ್ರಹಣ ಸ್ಪರ್ಶ ಸಮಯವಾದ 2.39ರಿಂದ 6.19ರ ತನಕ, ನಂತರ ರಾತ್ರಿ 7.30ರಿಂದ 9ರ ತನಕ ಶ್ರೀ ದೇವರ ದರ್ಶನಕ್ಕಾಗಿ ಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿರುತ್ತದೆ.

ಇದನ್ನೂ ಓದಿ : ಈ ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್‌ 8 ಕ್ಕೆ…

ಇದನ್ನೂ ಓದಿ : ಚಂದ್ರ ಗ್ರಹಣ 2022: ಯಾವ ರಾಶಿಯವರ ಮೇಲೆ ಪ್ರಭಾವ ಹೆಚ್ಚು…

ಇದನ್ನೂ ಓದಿ : Diwali And Solar Eclipse : ದೀಪಾವಳಿಯ ದಿನವೇ ಖಂಡಗ್ರಾಸ ಸೂರ್ಯಗ್ರಹಣ: ಆಚರಣೆ ಮಾಡುವುದು ಹೇಗೆ?

ನವೆಂಬರ್‌ 8ರ ಕಾರ್ತಿಕ ಪೂರ್ಣಿಮೆಯ ದಿನದಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣದ ಆರಂಭ ಅಂದರೆ ಸ್ಪರ್ಶ ಸಮಯವು ನವೆಂಬರ್‌ 8 ರಂದು ಮಧ್ಯಾಹ್ನ 2.39ಕ್ಕೆ ಪ್ರಾರಂಭಗೊಳ್ಳುವ ಚಂದ್ರಗ್ರಹಣ ಸಂಜೆ 6.19ಕ್ಕೆ ಮುಕ್ತಾಯಗೊಳ್ಳಲಿದೆ. ಗ್ರಹಣವು ಭಾರತದ ಕೆಲವು ಭಾಗಗಳಲ್ಲಿ ಗೋಚರವಾಗುತ್ತದೆ. ಬೆಳಗ್ಗೆ 5.30ರಿಂದ ಗ್ರಹಣ ಸೂತಕ ಕಾಲ ಪ್ರಾರಂಭವಾಗುತ್ತದೆ. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯದಲ್ಲಿ ಭಕ್ತಾಧಿಗಳಿಗೆ ಪೂಜೆ ಮತ್ತು ಅನ್ನದಾನ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Chandra Grahan 2022 In Kukkesubrahmanya Lunar Eclipse Background Puja Annadan Seva Bandh

Comments are closed.