Mumbai Lift collapse: ಬಹುಮಹಡಿ ಕಟ್ಟಡದ ಲಿಫ್ಟ್‌ ಕುಸಿತಕ್ಕೆ ಯುವಕ ಬಲಿ

ಮುಂಬೈ: (Mumbai Lift collapse) ಮುಂಬೈನ ಉಪನಗರವಾದ ವಿಕ್ರೋಲಿಯಲ್ಲಿ ಇಪ್ಪತ್ತೈದು ಅಂತಸ್ತಿನ ಕಟ್ಟಡದಲ್ಲಿ ಲಿಫ್ಟ್‌ ಕುಸಿದು 20 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಪೂರ್ವ ಮುಂಬೈ ಉಪನಗರದ ಸ್ಟೇಷನ್ ರಸ್ತೆಯಲ್ಲಿರುವ ಸಿದ್ಧಿವಿನಾಯಕ್ ಸೊಸೈಟಿಯಲ್ಲಿ ಬುಧವಾರ ಮಧ್ಯಾಹ್ನ 1.30 ಕ್ಕೆ ಈ ಅಪಘಾತ ಸಂಭವಿಸಿದೆ.

ಮುಂಬೈ ಉಪನಗರದ ಸ್ಟೇಷನ್‌ ರಸ್ತೆಯಲ್ಲಿರುವ ಸಿದ್ದಿವಿನಾಯಕ ಸೊಸೈಟಿ ಇಪ್ಪತ್ತೈದು ಅಂತಸ್ತಿನ ಕಟ್ಟಡವಾಗಿದ್ದು, ಗ್ಲಾಸ್‌ ಲಿಫ್ಟ್‌ ನೆಲಮಹಡಿಗೆ ಕುಸಿದು (Mumbai Lift collapse) ಬಿದ್ದಿದೆ. ಪರಿಣಾಮ ಲಿಫ್ಟ್‌ ನಲ್ಲಿ ನಾಲ್ವರು ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಲಿಫ್ಟ್‌ ಬಾಗಿಲು ತೆರೆದಿದ್ದಾರೆ.

ಲಿಫ್ಟ್‌ ನಲ್ಲಿ ಸಿಲುಕಿದ್ದ ನಾಲ್ವರನ್ನು ಹೊರತೆಗೆಯಲು ರಕ್ಷಣಾ ಸಾಧನಗಳನ್ನು ಬಳಸಲಾಗಿದ್ದು, ನಾಲ್ವರು ವ್ಯಕ್ತಿಗಳಲ್ಲಿ ಮೂವರು ಸುರಕ್ಷಿತವಾಗಿ ಲಿಫ್ಟ್‌ ನಿಂದ ಹೊರಬಂದಿದ್ದಾರೆ. ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ನಾಲ್ವರನ್ನು ಘಾಟ್‌ ಕೋಪರ್‌ ನ ನಾಗರಿಕ-ಚಾಲಿತ ರಾಜವಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದ ಆರು ಮಂದಿ ಭೀಕರ ಅಪಘಾತದಲ್ಲಿ ಸಾವು

ಬೆಳಗಾವಿ: ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದ ಸಂದರ್ಭದಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನ ರಸ್ತೆ ಪಕ್ಕದಲ್ಲಿದ್ದ ಆಲದ ಮರಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಆರು ಮಂದಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದಲ್ಲಿ ನಡೆದಿದೆ.

ಹನುಮವ್ವ(25 ವರ್ಷ), ದೀಪಾ(31 ವರ್ಷ), ಸವಿತಾ(17 ವರ್ಷ), ಸುಪ್ರಿತಾ(11 ವರ್ಷ), ಮಾರುತಿ(42 ವರ್ಷ), ಇಂದಿರವ್ವಾ(24 ವರ್ಷ) ಮೃತ ದುರ್ದೈವಿಗಳು. ಬೊಲೆರೊ ವಾಹನದಲ್ಲಿ ಒಟ್ಟು 23 ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಒಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ : Chennai accident: ರಸ್ತೆ ಗುಂಡಿ‌‌ ತಂದ ಗಂಡಾಂತರ: ಟ್ರಕ್‌ ಅಡಿ ಸಿಲುಕಿ ಯುವತಿ‌ ದುರ್ಮರಣ

ಇದನ್ನೂ ಓದಿ : Kidnap and rape case : 18 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ: ವಿರೋಧಿಸಿದ್ದಕ್ಕೆ ವಿಷವುಣಿಸಿದ ಕಾಮುಕ

ಇನ್ನೂ ಯಲ್ಲಮ್ಮ ದೇವಸ್ಥಾನಕ್ಕೆ ಹೊರಟಿದ್ದವರು ನಡೆದುಕೊಂಡು ದೇವಸ್ಥಾನಕ್ಕೆ ಹೊರಟಿದ್ದರು. ಪಾದಯಾತ್ರೆ ಹೊರಟವರನ್ನು ನಿಲ್ಲಿಸಿ ಯಮನಂತೆ ಬಂದಿದ್ದ ಬೊಲೆರೊ ವಾಹನ ಚಾಲಕ ಡ್ರಾಪ್‌ ಕೊಡುವುದಾಗಿ ಹೇಳಿ ವಾಹನ ಹತ್ತಿಸಿಕೊಂಡಿದ್ದು, ವಾಹನ ಹತ್ತಿದ ಕೆಲವೇ ಕೆಲವು ಕ್ಷಣದಲ್ಲಿ ಈ ಅಪಘಾತ ಸಂಭವಿಸಿದೆ.

A 20-year-old man has died after a lift collapsed in a 25-storey building in Vikhroli, a suburb of Mumbai.

Comments are closed.