Belagavi Accident-6 died: ಪಾದಯಾತ್ರೆಗಳ ಪಾಲಿಗೆ ಯಮನಂತೆ ಬಂದ ಬೊಲೆರೊ : ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದ 6 ಮಂದಿ ಸಾವು

ಬೆಳಗಾವಿ: (Belagavi Accident-6 died) ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದ ಸಂದರ್ಭದಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನ ರಸ್ತೆ ಪಕ್ಕದಲ್ಲಿದ್ದ ಆಲದ ಮರಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಆರು ಮಂದಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದಲ್ಲಿ ನಡೆದಿದೆ. ಪಾದಯಾತ್ರೆ ಮಾಡಲು ಹೊರಟಿದ್ದವರಿಗೆ ಯಮನಂತೆ ಎದುರಿಗೆ ಬಂದಿದ್ದ ಬೊಲೆರೊ ವಾಹನ ಆರು ಮಂದಿಯನ್ನು ಬಲಿ ಪಡೆದುಕೊಂಡಿದೆ.

ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ಘಟನೆ (Belagavi Accident-6 died) ಸಂಭವಿಸಿದೆ. ಚುಂಚನೂರ ಗ್ರಾಮದ ಬಳಿಯಲ್ಲಿ ತಿರುವಿದ್ದ ಕಾರಣ ಚಾಲಕನಿಗೆ ವಾಹನದ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದೆ. ಹನುಮವ್ವ(25 ವರ್ಷ), ದೀಪಾ(31 ವರ್ಷ), ಸವಿತಾ(17 ವರ್ಷ), ಸುಪ್ರಿತಾ(11 ವರ್ಷ), ಮಾರುತಿ(42 ವರ್ಷ), ಇಂದಿರವ್ವಾ(24 ವರ್ಷ) ಮೃತ ದುರ್ದೈವಿಗಳು. ಬೊಲೆರೊ ವಾಹನದಲ್ಲಿ ಒಟ್ಟು 23 ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಒಬ್ಬರು ಮೃತಪಟ್ಟಿದ್ದಾರೆ.

ಇನ್ನೂ ಯಲ್ಲಮ್ಮ ದೇವಸ್ಥಾನಕ್ಕೆ ಹೊರಟಿದ್ದವರು ನಡೆದುಕೊಂಡು ದೇವಸ್ಥಾನಕ್ಕೆ ಹೊರಟಿದ್ದರು. ಪಾದಯಾತ್ರೆ ಹೊರಟವರನ್ನು ನಿಲ್ಲಿಸಿ ಯಮನಂತೆ ಬಂದಿದ್ದ ಬೊಲೆರೊ ವಾಹನ ಚಾಲಕ ಡ್ರಾಪ್‌ ಕೊಡುವುದಾಗಿ ಹೇಳಿ ವಾಹನ ಹತ್ತಿಸಿಕೊಂಡಿದ್ದು, ವಾಹನ ಹತ್ತಿದ ಕೆಲವೇ ಕೆಲವು ಕ್ಷಣದಲ್ಲಿ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ : Mumbai Lift collapse: ಬಹುಮಹಡಿ ಕಟ್ಟಡದ ಲಿಫ್ಟ್‌ ಕುಸಿತಕ್ಕೆ ಯುವಕ ಬಲಿ

ಇದನ್ನೂ ಓದಿ : Chennai accident: ರಸ್ತೆ ಗುಂಡಿ‌‌ ತಂದ ಗಂಡಾಂತರ: ಟ್ರಕ್‌ ಅಡಿ ಸಿಲುಕಿ ಯುವತಿ‌ ದುರ್ಮರಣ

ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ್ದು, ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಹಾಗೂ ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗೆಳಿಗೆ ಸೂಚಿಸಲಾಗಿದೆ.

The incident took place in Chunchanur village of Ramdurga taluk of Belgaum when the driver lost control of the bolero and hit a banyan tree on the side of the road while going to Yallamma’s darshan.

Comments are closed.