ಹೈಟೆಕ್ ವೈಶಾವಾಟಿಕೆ ದಂಧೆ : ನಟಿ ಅರೆಸ್ಟ್, 3 ಕಿರುತೆರೆ ನಟಿಯರ ರಕ್ಷಣೆ

ಮುಂಬೈ: ಹೈ ಟೆಕ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಓರ್ವ ನಟಿಯನ್ನು ಬಂಧಿಸಿದ್ದು, ಮೂವರು ಧಾರಾವಾಹಿ ನಟಿಯರನ್ನು ರಕ್ಷಿಸಿದ್ದಾರೆ.

ಮುಂಬೈನಲ್ಲಿ ನಟಿಯರು ಹಾಗೂ ಬೆಲ್ಲಿ ಡ್ಯಾನ್ಸರ್ ಗಳನ್ನ ಬಳಸಿಕೊಂಡು ಸೆಕ್ಸ್ ದಂಧೆ ನಡೆಸುತ್ತಿರುವ ಕುರಿತು ಮಾಹಿತಿಯನ್ನು ಪಡೆದ ಕ್ರೈಂ ಬ್ರ್ಯಾಂಚ್ ನ 11ನೇ ಯುನಿಟ್ ಪೊಲೀಸರು ದಾಳಿಯನ್ನು ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ನಟಿಯನ್ನು ಬಂಧಿಸಿದ್ದು, ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದ 3 ನಟಿಯನ್ನು ರಕ್ಷಿಸಿದ್ದಾರೆ.

ದಾಳಿಗೂ ಮೊದಲು ನಟಿ ಮಣಿಯರ ಜೊತೆಗೆ ಪೊಲೀಸರು ಸುಮಾರು 10.50 ಲಕ್ಷ ರೂಪಾಯಿಗೆ ವ್ಯವಹಾರವನ್ನು ಕುದುರಿಸಿದ್ದರು. ನಂತರದಲ್ಲಿ ನಕಲಿ ಗ್ರಾಹಕರನ್ನು ಅಡ್ಡೆಗೆ ಕಳುಹಿಸಿದ್ದರು. ಬಳಿಕ ಹಿರಿಯ ಇನ್‍ಸ್ಪೆಕ್ಟರ್ ಮಹೇಶ್ ತವಾಡೆ ಅವರ ನೇತೃತ್ವದ ತಂಡ ಗೋರೆಗಾಂವ್‍ನ 5 ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ನಟಿಯರನ್ನು ಬಂಧಿಸಿದ್ದಾರೆ.

ಐಪಿಸಿ ಹಾಗೂ ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ವನ್ರಾಯ್ ಪೊಲೀಸ್ ಠಾಣೆಯ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

Comments are closed.