Two Car accident: ಕಾರು ಅಪಘಾತ: 3 ಮಕ್ಕಳು ಸೇರಿ 4 ಮಂದಿ ಸಾವು

ಬಡೋಸರಾಯ್: (Two Car accident) ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ ದಾರುಣ ಘಟನೆ ಬಾರಾಬಂಕಿ ಜಿಲ್ಲೆಯ ಬಡೋಸರಾಯ್ ಪ್ರದೇಶದಲ್ಲಿ ನಡೆದಿದೆ. ಬಳಿಕ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ. ಮೃತರನ್ನು ಮೊಹಮ್ಮದ್ ಖಾಲಿದ್ (14 ವರ್ಷ), ಮೊಹಮ್ಮದ್ ಶಾ (14 ವರ್ಷ), ಮೊಹಮ್ಮದ್ ರೆಹಾನ್ (14 ವರ್ಷ), ಮತ್ತು ಮೊಹಮ್ಮದ್ ರಯೀಸ್ (18 ವರ್ಷ) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ನಾಲ್ವರು ಮಕ್ಕಳು ಬೆಳಿಗ್ಗೆ ಸ್ಥಳೀಯ ಮಸೀದಿಗೆ ನಮಾಜ್ ಮಾಡಲು ಹೋಗಿದ್ದರು. ನಮಾಜ್‌ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಕಾರು ಅವರ ಮೇಲೆ ಹರಿದಿದೆ. ಈ ವೇಳೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಸಿರೌಲಿ ಗೌಸ್‌ಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಖಾಲಿದ್, ರೆಹಾನ್ ಮತ್ತು ಶಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಯೀಸ್‌ನನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಕಾರುಗಳ ನಡುವೆ ಢಿಕ್ಕಿಯಾಗಿ: ದಂಪತಿ ಹಾಗೂ ಪುತ್ರ ಸಾವು

ಮತ್ತೊಂದು ರಸ್ತೆ ಅಪಘಾತ ಪ್ರಕರಣದಲ್ಲಿ, ಐಲಕ್ನೋ-ಪ್ರಯಾಗರಾಜ್ ಹೆದ್ದಾರಿಯಲ್ಲಿ ಎರಡು ಕಾರುಗಳು ಮುಖಾಮುಖಿಯಾಗಿ ಢಿಕ್ಕಿ ಹೊಡೆದು ದಂಪತಿಗಳು ಮತ್ತು ಅವರ ಮಗ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಮಾಣಿಕ್‌ಪುರ ಪೊಲೀಸ್ ವೃತ್ತದ ವ್ಯಾಪ್ತಿಯ ರಹಮತ್ ಅಲಿ ಕಾ ಪೂರ್ವಾ ಗ್ರಾಮದ ಲಕ್ನೋ-ಪ್ರಯಾಗ್‌ರಾಜ್ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತರನ್ನು ರಾಹುಲ್ ಶ್ರೀವಾಸ್ತವ (35), ಅವರ ಪತ್ನಿ ಪ್ರಾಚಿ (30) ಮತ್ತು ಮಗ ಅರ್ಷ್‌ದೀಪ್ (10) ಎಂದು ಗುರುತಿಸಲಾಗಿದೆ. ಅವರ ಪುತ್ರಿ ಅವ್ಯಾ (3) ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಇತರ ಕಾರಿನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿವೆ.

ಇದನ್ನೂ ಓದಿ : Mumbai Cyber Crime: ಬ್ಯಾಂಕ್ KYC ಅಪ್‌ಡೇಟ್ ಹೆಸರಲ್ಲಿ ನಿವೃತ್ತ ರೈಲ್ವೆ ಉದ್ಯೋಗಿಗೆ ವಂಚನೆ

ಇದನ್ನೂ ಓದಿ : Rape and threat: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬೆದರಿಕೆ: ಆರೋಪಿ ಅರೆಸ್ಟ್‌

ಇದನ್ನೂ ಓದಿ : Dhruv helicopter crash: ಭಾರತೀಯ ನೌಕಾಪಡೆಯ ಧ್ರುವ್‌ ಹೆಲಿಕಾಪ್ಟರ್‌ ಪತನ: ಮೂವರು ಸಿಬ್ಬಂದಿಗಳ ರಕ್ಷಣೆ

Two Car accident: Car accident: 4 people died including 3 children

Comments are closed.