ದಿನಭವಿಷ್ಯ : ಇಂದು ಯಾವ ರಾಶಿಗೆ ಶುಭ

Horoscope Today 06 November 2025 : ದಿನಭವಿಷ್ಯ ಇಂದು ಅಕ್ಟೋಬರ್‌ 6 2025 ಗುರುವಾರ. ಹೇಗಿದೆ 12 ರಾಶಿಗಳ ಇಂದಿನ ಜಾತಕಫಲ ತಿಳಿಯೋಣಾ ಬನ್ನಿ.

ಮೇಷರಾಶಿ (Aries)
ಶ್ರಮಕ್ಕೆ ಮಹತ್ವವಿರುತ್ತದೆ. ಶ್ರಮಕ್ಕೆ ತಕ್ಕಂತೆ ಫಲ ಸಿಗದೇ ಇದ್ದರೂ, ಧೈರ್ಯದಿಂದ ಮುನ್ನಡೆಯುವಿರಿ. ಸಹೋದ್ಯೋಗಿಗಳ ಸಹಕಾರ ಇರುತ್ತದೆ. ಕೆಲಸದಲ್ಲಿ ಅನಿರೀಕ್ಷಿತ ತೊಂದರೆ ಎದುರಾಗಬಹುದು. ಹಣಕಾಸಿಗೆ ಶ್ರಮ ಅಗತ್ಯ.

ವೃಷಭರಾಶಿ (Taurus)
ಮಧ್ಯಾಹ್ನದವರೆಗೆ ಮನಸ್ಸಿಗೆ ನೆಮ್ಮದಿ. ಮಿತ್ರರೊಂದಿಗೆ ಸಂತೋಷದ ದಿನ ಕಳೆಯುವಿರಿ. ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗಲಿದೆ. ಧನಾಗಮನದ ನಿರೀಕ್ಷೆ ಇದೆ.

ಮಿಥುನರಾಶಿ(Gemini)
ಪ್ರಯಾಣ ಮಾಡುವ ಸಾಧ್ಯತೆ. ಉದರ ಸಂಬಂಧಿ ಸಮಸ್ಯೆ ಕಾಡಬಹುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕೆಲಸದ ನಿಮಿತ್ತ ಅಥವಾ ವೈಯಕ್ತಿಕ ಕಾರಣದಿಂದ ಪ್ರಯಾಣ ಮಾಡುವಿರಿ. ಖರ್ಚು ಹೆಚ್ಚಾಗುವ ದಿನ.

ಕರ್ಕಾಟಕರಾಶಿ (Cancer)
ಉತ್ತಮ ದಿನ. ಆಪ್ತರಿಂದ ಅಚ್ಚರಿಯ ವಿಷಯಗಳು ತಿಳಿದುಬರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಬಹಳ ಸಮಯದಿಂದ ಬಯಸಿದ ವಸ್ತು ಖರೀದಿ ಸಾಧ್ಯತೆ. ವಾಹನ ಸಂಬಂಧಿ ಖರ್ಚು ಕಡಿಮೆಯಾಗಲಿದೆ. ಹೊಸ ಆದಾಯ ಮೂಲಗಳು ಸಿಗಬಹುದು.

ಸಿಂಹರಾಶಿ (Leo)
ಅನುಕೂಲಕರ ದಿನ. ಆಪ್ತರ ಭೇಟಿ ನೆಮ್ಮದಿ ತರಲಿದೆ. ಅನಗತ್ಯ ಚರ್ಚೆಯಿಂದ ದೂರವಿರಿ.ಹಣಕಾಸಿನ ಒತ್ತಡ ಕಡಿಮೆ ಮಾಡುವ ಕೆಲಸ ಮಾಡುವಿರಿ. ಕೆಲಸದ ಸ್ಥಳದಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗಬಹುದು.

ಕನ್ಯಾರಾಶಿ (Virgo)
ಉದ್ಯೋಗದ ಸಮಸ್ಯೆ ಇದ್ದವರಿಗೆ ಅನಾಯಾಸವಾಗಿ ಸಿಗುವ ಸಾಧ್ಯತೆ. ಆರ್ಥಿಕ ತೊಂದರೆಯನ್ನು ಸರಿಮಾಡಿಕೊಳ್ಳುವಿರಿ. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಸಮಯ, ಸಂದರ್ಭ ನೋಡಿ. ಆರ್ಥಿಕ ಲಾಭದಿಂದ ಸುಖ ಪ್ರಾಪ್ತಿ.

ತುಲಾರಾಶಿ (Libra)
ಇಂದು ಬಹಳ ಸೌಮ್ಯತೆಯಿಂದ ವ್ಯವಹರಿಸಬೇಕು. ಸಂತೋಷ ಪಡಲು ನಿಮ್ಮದೇ ಮಾರ್ಗವನ್ನು ಕಂಡುಕೊಳ್ಳುವಿರಿ.ಉದ್ಯೋಗದಿಂದ ಹೊರಬಂದು ಮನೆಯ ಕಡೆ ಗಮನ ಹೆಚ್ಚಾಗಲಿದೆ.

ವೃಶ್ಚಿಕರಾಶಿ (Scorpio)
ಕುಟುಂಬದಲ್ಲಿ ಶೀತಲ ಕಲಹವು ಬೇಸರ ತರಬಹುದು. ಯಾವುದೇ ವೈಯಕ್ತಿಕ ಲಾಭವನ್ನು ನಿರೀಕ್ಷಿಸದೆ ಕೆಲಸ ಮಾಡುವಿರಿ. ಯಾರಿಂದಲೂ ಆಮಿಷಕ್ಕೆ ಒಳಗಾಗುವ ಸಂಭವವಿದೆ. ಸಂಪಾದನೆಯ ವಿಚಾರದಲ್ಲಿ ಮೌನ ವಹಿಸುವುದು ಉತ್ತಮ.

ಧನಸ್ಸುರಾಶಿ (Sagittarius)
ಕೌಟುಂಬಿಕ ಜವಾಬ್ದಾರಿಗಳು ಬರಬಹುದು. ಒಬ್ಬರಿಗೆ ಸಾಧ್ಯವಾಗದ ಕಾರ್ಯಕ್ಕೆ ಮತ್ತೊಬ್ಬರನ್ನು ಜೋಡಿಸಿಕೊಳ್ಳುವಿರಿ. ವೃತ್ತಿಯಲ್ಲಿ ಜವಾಬ್ದಾರಿಯನ್ನು ಬೇರೆಯವರಿಗೆ ಹಸ್ತಾಂತರಿಸುವ ಸಾಧ್ಯತೆ. ನಿದ್ರೆಗೆ ಯೋಚನೆಗಳು ತೊಂದರೆ ನೀಡಬಹುದು.

ಮಕರರಾಶಿ (Capricorn)
ಆರೋಗ್ಯ ಪ್ರಯತ್ನಗಳು ಫಲ ನೀಡುತ್ತವೆ. ಕುಟುಂಬದಲ್ಲಿ ಶುಭ ಸುದ್ದಿ ಕೇಳುವಿರಿ. ಹೊಸ ಯೋಜನೆಗಳು ಪ್ರಾರಂಭವಾಗಬಹುದು. ಹಣಕಾಸು ಸ್ಥಿರಗೊಳ್ಳುತ್ತಿದೆ. ಹೆಚ್ಚುವರಿ ಆದಾಯಕ್ಕಾಗಿ ಆಸ್ತಿಯನ್ನು ಬಾಡಿಗೆಗೆ ನೀಡಬಹುದು. ಕೆಲಸದಲ್ಲಿ ಸಕಾರಾತ್ಮಕ ಮನೋಭಾವ ಇರುತ್ತದೆ.

ಕುಂಭರಾಶಿ (Aquarius)
ಆಕಸ್ಮಿಕ ಪ್ರಯಾಣ ಎದುರಾಗಬಹುದು. ಸಂಬಂಧಿಕರ ಜೊತೆ ಭಿನ್ನಾಭಿಪ್ರಾಯ ಮೂಡಬಹುದು, ಎಚ್ಚರ.ವ್ಯಾಪಾರ, ಉದ್ಯೋಗಗಳಲ್ಲಿ ಗೊಂದಲ ಎದುರಾಗುವ ಸಾಧ್ಯತೆ. ಹಣಕಾಸಿನ ವಿಳಂಬವಾಗಬಹುದು.

ಮೀನರಾಶಿ (Pisces)
ಇಂದು ನೀವು ಬಹಳ ಕಾರ್ಯದ ಒತ್ತಡದಲ್ಲಿದ್ದರೂ ನಿಮ್ಮವರಿಗೆ ಸಮಯ ಕೊಡುವಿರಿ. ಯಾರಿಗೋ ಸಹಕರಿಸಲು ಒದ್ದಾಟ ಮಾಡಬೇಕಾಗುವುದು. ಇತರರ ಸಹಕಾರವನ್ನು ಅತಿಯಾಗಿ ತೆಗೆದುಕೊಳ್ಳುವುದು ಬೇಡ.

Horoscope Today 06 November 2025 Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories