Horoscope Today : ದಿನಭವಿಷ್ಯ ನವೆಂಬರ್ 14 2023 ಸೋಮವಾರ. ಕಾರ್ತಿಕ ಮಾಸದ ಮೊದಲ ದಿನ ದ್ವಾದಶರಾಶಿಗಳ ಮೇಲೆ ಅನುರಾಧಾ ನಕ್ಷತ್ರದ ಪ್ರಭಾವ ಇರುತ್ತದೆ. ಸೋಭಾನ ಯೋಗದಿಂದ ಹಲವರು ರಾಶಿಯವರು ಉತ್ತಮ ಫಲಗಳನ್ನು ಪಡೆಯುತ್ತಾರೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.
ಮೇಷರಾಶಿ ದಿನಭವಿಷ್ಯ
ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಿರಿ. ಕುಟುಂಬ ಸದಸ್ಯರು ಅರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಕೆಲಸದ ಸ್ಥಳಗಳಲ್ಲಿ ಬದಲಾವಣೆ ಮಾಡುವುದರಿಂದ ಅನುಕೂಲ.
ವೃಷಭರಾಶಿ ದಿನಭವಿಷ್ಯ
ಇಂದು ಶುಭ ಸುದ್ದಿಯನ್ನು ಕೇಳುವಿರಿ. ಯಾವುದೇ ವ್ಯವಹಾರವನ್ನು ಮಾಡಿದ್ರೂ ಕೂಡ ಅದು ನಿಮಗೆ ಲಾಭದಾಯಕವಾಗಿ ಇರಲಿದೆ. ಹೊಂದಾಣಿಕೆಯಿಂದ ಅಧಿಕ ಲಾಭ ದೊರೆಯಲಿದೆ. ದೂರ ಪ್ರಯಾಣದಿಂದ ಆರ್ಥಿಕ ಲಾಭ.
ಮಿಥುನರಾಶಿ ದಿನಭವಿಷ್ಯ
ಮಾನಸಿಕ ಸಮಸ್ಯೆಗಳಿಗೆ ಇಂದು ಪರಿಹಾರ ದೊರೆಯುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಕೆಲವೊಂದು ಅಪಾಯಕಾರಿ ನಿರ್ಧಾರಗಳನ್ನು ತಪ್ಪಿಸಿ. ಹಿರಿಯ ಸಲಹೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ. ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಭಡ್ತಿ ದೊರೆಯಲಿದೆ.
ಕರ್ಕಾಟಕರಾಶಿ ದಿನಭವಿಷ್ಯ
ಇಂದು ತುಂಬಾ ಸಂತೋಷವಾಗಿ ಇರುತ್ತೀರಿ. ಪಾಲುದಾರಿಕೆಯ ವ್ಯವಹಾರ ಇಂದು ಲಾಭವನ್ನು ತಂದುಕೊಡಲಿದೆ. ತರಾತುರಿಯ ನಿರ್ಧಾರ ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ದೊಡ್ಡ ಮೊತ್ತದ ಆರ್ಥಿಕ ಸಹಕಾರವನ್ನು ನೀವು ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಬೆನ್ನಲ್ಲೇ, ಗೃಹಿಣಿಯರಿಗೆ ಉಚಿತವಾಗಿ ಸಿಗಲಿದೆ 50 ಸಾವಿರ ರೂ.
ಸಿಂಹರಾಶಿ ದಿನಭವಿಷ್ಯ
ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಪಡೆಯುತ್ತಾರೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ. ಶತ್ರುಗಳು ನಿಮ್ಮ ಕೆಲಸ ಕಾರ್ಯಗಳಿಗೆ ವಿಘ್ನ ತರಲು ಪ್ರಯತ್ನಿಸಬಹುದು. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಸಾಧನೆ.

ಕನ್ಯಾರಾಶಿ ದಿನಭವಿಷ್ಯ
ವ್ಯಾಪಾರಿಗಳು ಸಮಯವನ್ನು ವ್ಯರ್ಥ ಮಾಡಬಾರದು. ಹೊಸ ಯೋಜನೆಗಳ ಲಾಭ ಪಡೆಯುವಿರಿ. ಮೇಲಾಧಿಕಾರಿಗಳಿಂದ ಕಿರಿಕಿರಿ ಎದುರಿಸುವಿರಿ. ನಿಮ್ಮ ಕೋಪವನ್ನು ನಿಯಂತ್ರಣ ಮಾಡಿಕೊಳ್ಳುವುದರಿಂದ ಅನುಕೂಲ. ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆಯಿದೆ.
ತುಲಾರಾಶಿ ದಿನಭವಿಷ್ಯ
ಹೊಸ ಯೋಜನೆಗಳನ್ನು ಅರಂಭಿಸಲು ಸಕಾಲ. ಹೆತ್ತವರ ಆಶೀರ್ವಾದವನ್ನು ಪಡೆದುಕೊಳ್ಳಿ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಅನುಕೂಲಕರ. ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಶುಭ ಸುದ್ದಿ. ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯುವಿರಿ.
ಇದನ್ನೂ ಓದಿ : ಕೇವಲ 20 ರೂ. ಕಟ್ಟಿದ್ರೆ 2 ಲಕ್ಷ ರೂಪಾಯಿ ಉಚಿತ : ಪ್ರತಿಯೊಬ್ಬರಿಗೆ ನರೇಂದ್ರ ಮೋದಿ ಸರಕಾರದ ಗಿಫ್ಟ್
ವೃಶ್ಚಿಕರಾಶಿ ದಿನಭವಿಷ್ಯ
ಬಾಕಿ ಇರುವ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಇಂದು ಮಹಾನ್ ವ್ಯಕ್ತಿಯೋರ್ವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಕುಟುಂಬದಲ್ಲಿನ ವಿವಾದಗಳು ಇಂದು ಬಗೆ ಹರಿಯಲಿದೆ. ಕೆಲಸ ಕಾರ್ಯದ ನಿಮಿತ್ತ ನೀವಿಂದು ದೂರ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
ಧನಸ್ಸುರಾಶಿ ದಿನಭವಿಷ್ಯ
ದೈನಂದಿನ ಅಗತ್ಯಗಳಿಗಾಗಿ ಸ್ವಲ್ಪ ಖರ್ಚು ಮಾಡುವಿರಿ. ಸಂಜೆಯ ವೇಳೆಗೆ ದೇವರ ದರ್ಶನ ಪಡೆಯುವಿರಿ. ಕುಟುಂಬದ ಸದಸ್ಯರ ಜೊತೆಗೆ ಜಗಳದಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಕೆಲಸದ ಹೊರೆಯನ್ನು ತಪ್ಪಿಸಲು ಹಲವು ಬದಲಾವಣೆಗಳನ್ನು ಮಾಡಿಕೊಳ್ಳಿ. ಕೊಟ್ಟ ಸಾಲ ಮರಳಿ ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಗಂಗೊಳ್ಳಿ ಬಂದರಿನಲ್ಲಿ ಅಗ್ನಿದುರಂತ : 8 ಕ್ಕೂ ಅಧಿಕ ಬೋಟುಗಳು ಭಸ್ಮ
ಮಕರರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲಕರ. ಸಂಗಾತಿಯನ್ನು ಯಾವುದೇ ಕಾರಣಕ್ಕೂ ಕುರುಡಾಗಿ ನಂಬಬೇಡಿ. ಮಕ್ಕಳಿಂದ ಇಂದು ಶುಭ ಸುದ್ದಿಯೊಂದನ್ನು ಕೇಳುವಿರಿ. ಪಾಲುದಾರಿಕೆ ವ್ಯವಹಾರವು ಅಧಿಕ ಲಾಭವನ್ನು ತಂದುಕೊಡಲಿದೆ.
ಕುಂಭರಾಶಿ ದಿನಭವಿಷ್ಯ
ಹಳೆಯ ವಿವಾದಗಳು ಇಂದು ಬಗೆ ಹರಿಯಲಿದೆ. ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಪರಿಹಾರ ದೊರೆಯಲಿದೆ. ನಕಾರಾತ್ಮಕ ಆಲೋಚನೆಗಳಿಂದ ಹೊರಗೆ ಬನ್ನಿ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ದೂರದ ಬಂಧುಗಳ ಆಗಮನ ಮನಸಿಗೆ ಖುಷಿ ಕೊಡಲಿದೆ.
ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?
ಮೀನರಾಶಿ ದಿನಭವಿಷ್ಯ
ಸಂಗಾತಿಯನ್ನು ಎಲ್ಲಾ ವಿಚಾರದಲ್ಲಿಯೂ ನಂಬಬಹುದು. ಸ್ಮರ್ಧಾತ್ಮಕ ಪರೀಕ್ಷೆಗಳಲ್ಲಿ ಅನುಕೂಲಕರ. ಸ್ನೇಹತರೊಂದಿಗೆ ತೀರ್ಥ ಯಾತ್ರೆಗೆ ತೆರಳಲು ಉದ್ದೇಶವಿದ್ದರೆ ಅದು ಈಡೇರಿಕೆ ಆಗಲಿದೆ. ವಿದ್ಯಾರ್ಥಿಗಳು ಕಡಿಮೆ ಪರಿಶ್ರಮದಿಂದ ಅಧಿಕ ಲಾಭವನ್ನು ಪಡೆಯುತ್ತಾರೆ.
Horoscope Today 14 November 2023 Zordic Sign first Day Kartika Masa