Amazon Layoffs: ಅಮೆಜಾನ್‌ನಿಂದ 30,000 ಉದ್ಯೋಗಿಗಳು ಮನೆಗೆ! ಕಾರಣ ಏನು?

Amazon Layoffs: ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌ ತನ್ನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ನೌಕರರನ್ನು ವಜಾಗೊಳಿಸಲು ಮುಂದಾಗಿದೆ. ಕಂಪನಿಯು ಜಾಗತಿಕವಾಗಿ 30,000 ಕಾರ್ಪೊರೇಟ್‌ […]

Amazon Layoffs 2025

Amazon Layoffs: ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌ ತನ್ನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ನೌಕರರನ್ನು ವಜಾಗೊಳಿಸಲು ಮುಂದಾಗಿದೆ.

ಕಂಪನಿಯು ಜಾಗತಿಕವಾಗಿ 30,000 ಕಾರ್ಪೊರೇಟ್‌ ಉದ್ಯೋಗಿಗಳನ್ನು ವಜಾಗೊಳಿಸಬಹುದು ಎಂದು ಮೂಲಗಳು ಹೇಳುತ್ತಿವೆ. ಈ ದೊಡ್ಡ ಬದಲಾವಣೆ ವಾರಾಂತ್ಯದೊಳಗೆ ಸಂಭವಿಸುವ ನಿರೀಕ್ಷೆಯಿದೆ.

ಅಮೆಜಾನ್‌ ತನ್ನ ಒಟ್ಟು ನೌಕರರಲ್ಲಿ ಶೇಕಡಾ 10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂಬುದು ಈ ಅಂಕಿಅಂಶದಿಂದ ತಿಳಿದುಬರುತ್ತಿದೆ.

ಕೋವಿಡ್‌–19 ಸಾಂಕ್ರಾಮಿಕ ಸಮಯದಲ್ಲಿ ಕಂಪನಿಯು ಗಮನಾರ್ಹವಾಗಿ ಹೆಚ್ಚಿನ ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು.

ಈಗ ಬೇಡಿಕೆ ಹೆಚ್ಚಿದ್ದರೂ ಸಹ ವೆಚ್ಚವನ್ನು ಕಡಿತಗೊಳಿಸಲು ಮುಂದಾಗಿದೆ. ಇದಕ್ಕೂ ಮೊದಲು ಕಂಪನಿಯು 2022 ರ ಅಂತ್ಯದಲ್ಲಿ 27,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಕಾರಣ ಏನು?

ಜಾಗತಿಕಾವಾಗಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತಗೊಳಿಸುತ್ತಿರುವುದಕ್ಕೆ ಏನು ಕಾರಣ ಎಂಬುದನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಅದರ ಪ್ರಕಾರ ಕೋವಿಡ್‌–19 ಸಾಂಕ್ರಾಮಿಕದ ಸಮಯದಲ್ಲಿ ಅಮೆಜಾನ್‌ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. ಇದೀಗ ಕಂಪನಿಯು ಎಐ ತಂತ್ರಜ್ಞಾನವನ್ನು ಹೆಚ್ಚೆಚ್ಚು ಅಳವಡಿಸಿಕೊಳ್ಳುತ್ತಿದೆ.

ಇದರಿಂದ ಹೆಚ್ಚುವರಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. 2022 ರಲ್ಲಿಯೂ ಸಹ ಇದೇ ರೀತಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.

ಇದನ್ನೂ ಓದಿ: ಎಲ್ಲಾ ಎಲಾನ್ ಅಣ್ಣನ ಪವಾಡ, ಇನ್ನೇಲೆ ನಿಮ್ಮೆಲ್ಲ ಪ್ರಶ್ನೆಗೂ ಉತ್ತರ ಸಿಗುತ್ತಂತೆ!

ಭಾರತದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ?

ಅಮೆಜಾನ್‌ ಇಂಡಿಯಾದಲ್ಲಿ ಹಣಕಾಸು, ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತಗೊಳ್ಳಿದೆ.

ಇದಕ್ಕೆ ಎಐ ಮಾದರಿಯನ್ನು ಕೆಲಸದಲ್ಲಿ ಅಳವಡಿಸಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಭಾರತದಲ್ಲಿ ಸುಮಾರು 800 ರಿಂದ 1000 ದವರೆಗೆ ಉದ್ಯೋಗಿಗಳು ಕೆಲಸಕೊಳ್ಳಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಓಪ್ಪೋ ಫೈಂಡ್ X8 ಪ್ರೋ ಮೇಲೆ ಭಾರಿ ರಿಯಾಯಿತಿ: ಖರೀದಿಸುವುದು ಎಲ್ಲಿ?

(Amazon Layoffs 2025 amazon plans to cut 30000 corporate workers by adopting AI)

Scroll to Top