ಟ್ರಾಫಿಕ್ ಪೊಲೀಸ್ರಿಲ್ಲಾ ಅಂತಾ ಓವರ್ ಸ್ಪೀಡ್ ಆಗಿ ಡ್ರೈವ್ ಮಾಡಿದ್ರೆ ನಿಮ್ಮ ಮನೆ ಬಾಗಿಲಿಗೆ ನೋಟಿಸ್ ಬರುತ್ತೆ ಹುಷಾರ್..!

0

ಬೆಂಗಳೂರು : ಕೋವಿಡ್ -19 ವೈರಸ್ ಸೋಂಕಿನಿಂದ ದೇಶದಾದ್ಯಂತ ಲಾಕ್ ಡೌನ್ ಆಗಿತ್ತು. ಆದ್ರೀಗ ಲಾಕ್ ಡೌನ್ ಮುಗಿತಾ ಇದ್ದಂತೆ ಸಾವಿರಾರು ವಾಹನಗಳು ರಸ್ತೆಗೆ ಇಳಿಯುತ್ತಿವೆ. ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಇಲ್ಲಾ ಅಂತಾ ಓವರ್ ಸ್ಪೀಡ್ ಆಗಿ ವಾಹನ ಚಲಾಯಿಸಬೇಡಿ. ಒಂದೊಮ್ಮೆ ಸ್ಪೀಡ್ ಆಗಿ ವಾಹನ ಚಲಾಯಿಸಿದ್ರೆ ನಿಮ್ಮ ಮನೆ ಬಾಗಿಲಿಗೆ ನೋಟಿಸ್ ಬರೋದು ಗ್ಯಾರಂಟಿ.

ಹೌದು, ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಅಷ್ಟಾಗಿ ರಸ್ತೆಗೆ ಇಳಿಯುತ್ತಿಲ್ಲ. ಹೀಗಾಗಿಯೇ ಅಲ್ಲಲ್ಲಿ ಓವರ್ ಸ್ಪೀಡ್ ಆಗಿ ವಾಹನ ಚಲಾಯಿಸೋ ಪ್ರಕರಣಗಳು ಹೆಚ್ಚುತ್ತಲೇ ಇವೆ, ನಾವು ಹೇಗೆ ವಾಹನ ಚಲಾಯಿಸಿದ್ರೂ ನಮ್ಮನ್ನು ಕೇಳುವವರೇ ಇಲ್ಲಾ, ಅಡ್ಡಾದಿಡ್ಡಿ ವಾಹನ ಓಡಿಸಿದ್ರೂ ದಂಡಾನೂ ಹಾಕ್ತಿಲ್ಲಾ ಅಂತಾ ಬಾವಿಸಿಕೊಳ್ಳುವವರಿಗೆ ಬಿಸಿಮುಟ್ಟಿಸೋಕೆ ಪೊಲೀಸ್ ಇಲಾಖೆ ಮುಂದಾಗಿದೆ. ಆದರೆ ಪೊಲೀಸರು ರಸ್ತೆಗಿಳಿದು ವಾಹನ ಚೆಕ್ ಮಾಡದೇ ಇದ್ರು ಕೂತಲ್ಲೇ ಸ್ಮಾರ್ಟ್ ವರ್ಕ್ ಮಾಡ್ತಿದ್ದಾರೆ.

ಸಾಮಾನ್ಯವಾಗಿ ಹೈವ್ ರಸ್ತೆ ಅಥವಾ ರಸ್ತೆ ಬಳಿ ಸ್ಪೀಡಾಗಿ ಬಂದ್ರೆ ಸ್ಮಾರ್ಟ್ ವಾಹನದಲ್ಲಿ ಕೂತು ಸ್ಪೀಡ್ ಲಿಮಿಟ್ ಚೆಕ್ ಮಾಡ್ತಿದ್ರು 40 ಕ್ಕಿಂತ ಹೆಚ್ಚು ಸ್ಪೀಡ್ ಹೋದಲ್ಲಿ ದಂಡ ವಿಧಿಸ್ತಿದ್ರು ಈಗ ಅದರ ಬದಲಿಗೆ ಸ್ಮಾರ್ಟ್ ವಾಹನದಲ್ಲೇ ಕೂತು ಕ್ಯಾಮೆರಾ ಮೂಲಕ ಕೆಲಸ ಮಾಡಲಿದ್ದಾರೆ. ನಾವೇನಾದ್ರು ಹೈ ಸ್ಪೀಡಲ್ಲಿ ವಾಹನ ಚಲಾಯಿಸೋದು ಕಂಡು ಬಂದ್ರೆ ನಿಮ್ಮ ವಾಹನದ ಫೋಟೋವನ್ನ ಈಸಿಯಾಗಿ ಪೊಲೀಸರ ಕ್ಯಾಮೆರಾದಲ್ಲಿ ಸೆರೆಯಾಗುತ್ತೆ.

ಇನ್ನು ಇದರ ಜೊತೆಗೆ ಯಾರು ಹೆಲ್ಮೆಟ್ ಹಾಕದೇ ನಿಯಮ ಉಲ್ಲಂಘಿಸಿದ್ರೆ, ಅಂತಹ ವಾಹನದ ನಂಬರ್ ಬರೆದಿಟ್ಟುಕೊಳ್ಳುತ್ತಾರೆ.ಅಲ್ಲದೇ ವಾಹನದ ವೇಗವನ್ನೂ ಪರಿಶೀಲಿಸ್ತಾರೆ. ಈಗಾಗ್ಲೇ 40 ಕಿಲೋಮೀಟರ್ ಗಳಲ್ಲಿ ಚಾಲನೆ ಮಾಡಬೇಕೆಂಬ ಆದೇಶವನ್ನ ನಗರ ಪೊಲೀಸ್ ಆಯುಕ್ತರು ನೀಡಿದ್ದಾರೆ.‌ ಹೀಗಾಗಿ ನಿಯಮ ಮೀರುವ ವಾಹನಗಳ ನಂಬರ್ ಬರೆದು ನಂತ್ರ ಮನೆ ಬಾಗಿಲಿಗೆ ಅಥವಾ ಸಂಬಂಧ ಪಟ್ಟ ವಾಹನ ಸವಾರನ ಮೊಬೈಲ್ಗೆ ದಂಡದ ಮಾಹಿತಿ ರವಾನಿಸ್ತಾರೆ.

ಮೊದಲ ಬಾರಿಗೆ ಟ್ರಾಫಿಕ್ ನಿಮಯ ಉಲ್ಲಂಘಿಸಿದ್ರೆ, 500 ರೂಪಾಯಿ ದಂಡ ತೆರಬೇಕಾಗುತ್ತೆ .ಎರಡನೇ ಬಾರಿಗೆ ನಿಯಮ ಉಲ್ಲಂಘಿಸಿದ್ರೆ ,1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಹೀಗೆ ಎಷ್ಟು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸ್ತಾರೋ ಅಷ್ಟು ದಂಡವನ್ನು ಪೊಲೀಸರು ವಸೂಲಿ ಮಾಡ್ತಾರೆ ಹುಷಾರ್.

ಕೊರೊನಾ ಸೋಂಕು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಪೊಲೀಸರು ಸ್ಮಾರ್ಟ್ ಆಗಿಯೇ ಟ್ರಾಫಿಕ್ ವರ್ಕ್ ಮಾಡ್ತಿದ್ದಾರೆ. ಒಂದೊಮ್ಮೆ ಸವಾರರು ಸಿಗ್ನಲ್ ಗಳಲ್ಲಿ ರಾಜಾರೋಷವಾಗಿ ಓಡಾಡೋಣಾ ಅಂತಾ ಅಂದುಕೊಂಡಿದ್ರೆ ಅದು ನಿಮ್ಮ ಮೂರ್ಖತನ, ಯಾಕೆಂದ್ರೆ ನಿಮ್ಮ ಮೇಲೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ ಅನ್ನೋದು ನೆನಪಿರಲಿ.

Leave A Reply

Your email address will not be published.